Advertisement

‘ಮಹಾರಾಷ್ಟ್ರ ವಿಕಾಸ್ ಆಘಾಢಿ’ಗೆ ಹೊಸ ನಾಯಕ ‘ಉದ್ಭವ’;ನ.28ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ

04:05 PM Dec 02, 2019 | Team Udayavani |

ಮುಂಬಯಿ: ಕಳೆದೊಂದು ತಿಂಗಳಿಂದ ಮಹಾರಾಷ್ಟ್ರದಲ್ಲಿ ಎದ್ದಿದ್ದ ರಾಜಕೀಯ ಅನಿಶ್ವಿತತೆ ಮತ್ತು ವಿಪ್ಲವಗಳು ಅಂತ್ಯಕಾಣುವ ಲಕ್ಷಣಗಳು ಗೋಚರಿಸಿವೆ. ಬಹುಮತ ಕೊರತೆಯ ಕಾರಣದಿಂದ ವಿಶ್ವಾಸಮತ ಯಾಚನೆಗೂ ಒಂದು ದಿನ ಮೊದಲೇ ದೇವೇಂದ್ರ ಫಡ್ನವೀಸ್ ಅವರು ಮಂಗಳವಾರದಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Advertisement

ಇದರ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ನೂತನ ಮೈತ್ರಿಯ ಉದಯವಾಗಿದ್ದು ಶಿವಸೇನೆ, ಎನ್.ಸಿ.ಪಿ. ಕಾಂಗ್ರೆಸ್ ಪಕ್ಷಗಳು ಸೇರಿಕೊಂಡು ‘ಮಹಾರಾಷ್ಟ್ರ ವಿಕಾಸ್ ಅಘಾಡಿ’ಯನ್ನು ರೂಪಿಸಿಕೊಂಡಿದ್ದು ಇದರ ನಾಯಕನನ್ನಾಗಿ ಶಿವಸೇನೆಯ ಮುಖ್ಯಸ್ಥ ಉದ್ಭವ್ ಠಾಕ್ರೆ ಅವರನ್ನು ಸರ್ವಾನುಮತದಿಂದ ಆರಿಸಿದ್ದಾರೆ. ಇದರಿಂದ ಮಹಾರಾಷ್ಟ್ರದಲ್ಲಿ ಶಿವ ಸೈನಿಕನೊಬ್ಬ ಮುಖ್ಯಮಂತ್ರಿಯಾಗುವುದಕ್ಕೆ ಹಾದಿ ಸುಗಮಗೊಂಡಂತಾಗಿದೆ.

ನವಂಬರ್ 28ರ ಗುರುವಾರ ಸಾಯಂಕಾಲ 05 ಗಂಟೆಗೆ ಉದ್ಭವ್ ಠಾಕ್ರೆ ಅವರು ಮಹಾರಾಷ್ಟ್ರದ ಹದಿನಾಲ್ಕನೇ ವಿಧಾನಸಭೆಯ 19ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಲ್ಲಿಗೆ ಶಿವ ಸೈನಿಕನೊಬ್ಬ ಮಹಾರಾಷ್ಟ್ರದ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಬೇಕೇಂಬ ಭಾಳಾ ಸಾಹೇಬ್ ಠಾಕ್ರೆ ಅವರ ಮಹದಾಸೆ ಪೂರ್ಣಗೊಂಡಂತಾಗುತ್ತದೆ. ನಗರದ ಶಿವಾಜಿ ಪಾರ್ಕ್ ನಲ್ಲಿ ಈ ಪ್ರಮಾಣವಚನ ಸಮಾರಂಭ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next