ಹೊಸದಿಲ್ಲಿ: ಕಳೆದ ವರ್ಷ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿ ಸಿದ್ದ ಭಾರತವು ಮತ್ತೂಂದು ಸರ್ಜಿಕಲ್ ದಾಳಿಗೆ ತಯಾರಿ ನಡೆಸುತ್ತಿದೆಯೇ?
“ಯಾವುದೇ ಕ್ಷಣದಲ್ಲಿ ಎಂತಹುದೇ ಪರಿಸ್ಥಿತಿ ಎದು ರಿಸಲು ಸನ್ನದ್ಧರಾಗಿರಿ’ ಎಂಬ ಸಂದೇಶವನ್ನು ವಾಯುಪಡೆ ಮುಖ್ಯಸ್ಥರಾದ ಬಿ.ಎಸ್. ಧನೋವಾ ಅವರು ಅಧಿಕಾರಿಗಳಿಗೆ ನೀಡಿರುವುದು ಇಂತಹುದೊಂದು ಪ್ರಶ್ನೆಯನ್ನು ಮೂಡಿಸಿದೆ.
ಪ್ರತಿಯೊಬ್ಬ ಅಧಿಕಾರಿಗೂ ವೈಯಕ್ತಿಕ ಪತ್ರ ಮುಖೇನ ಧನೋವಾ ಅವರು ಈ ಸೂಚನೆ ನೀಡಿದ್ದಾರೆ. ಮಾರ್ಚ್ 30ರಂದೇ ಸಹಿ ಮಾಡಲಾಗಿರುವ ಪತ್ರಗಳು ಇವಾ ಗಿದ್ದು, ಸೇನೆಯ 12,000 ಅಧಿಕಾರಿ ಗಳಿಗೂ ತಲುಪಿವೆ. ಎಲ್ಲಾ ಅಧಿಕಾರಿಗಳಿಗೆ ವೈಯಕ್ತಿಕ ಪತ್ರಗಳನ್ನು ಬರೆದಿರುವುದು ಸಹಜವಾಗಿ ಅಚ್ಚರಿ ಮೂಡಿಸಿದೆ. 1950, ಮೇ 1ರಂದು ಸೇನಾ ಮುಖ್ಯಸ್ಥರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ 1986, ಫೆ.1ರಂದು ಜನರಲ್ ಕೆ. ಸುಂದರ್ಜೀ ಇದೇ ರೀತಿ ಪತ್ರ ಬರೆದು ಆಶ್ಚರ್ಯ ಮೂಡಿಸಿದ್ದರು.
ಪತ್ರದಲ್ಲಿ ಏನಿದೆ?: ಈಗಿನ ಪರಿಸ್ಥಿತಿಯಲ್ಲಿ ಸೈನ್ಯ ಯಥಾ ಸ್ಥಿತಿ ಕಾಪಾಡಿಕೊಂಡು, ಯಾವುದೇ ಕ್ಷಣದಲ್ಲಿ ಕಾರ್ಯಾಚರಣೆಗೆ ಇಳಿಯಬೇಕಾದ ಅನಿವಾಧಿರ್ಯತೆ ಎದುರಾಗಬಹುದು. ಇದಕ್ಕೆ ಸಿದ್ಧಧಿರಾಗಿರಿ. ಅಗತ್ಯ ತರಬೇತಿಗೂ ಹೆಚ್ಚಿನ ಮಹತ್ವ ನೀಡಿ’ ಎಂದು ಪತ್ರದಲ್ಲಿ ಸ್ಪಷ್ಟವಾಗಿ ದಾಖ ಲಿಸಿದ್ದಾರೆ. ಪಾಕಿಸ್ಥಾನ ಕಳೆದ ನಾಲ್ಕಾರು ತಿಂಗಳಿಂದ ನಿರಂತರವಾಗಿ ಗಡಿಯಲ್ಲಿ ನಿಯಮ ಉಲ್ಲಂ ಸಿ ಒಳ ಪ್ರವೇಶಿಸು ತ್ತಿದುದಲ್ಲದೇ, ದ್ವಿಪಕ್ಷೀಯ ಒಪ್ಪಂದಕ್ಕೂ ಬೆಲೆ ಕೊಡದೇ ಭಾರತೀಯರ ನಾಗರಿಕರು, ಸೇನೆಗಳ ಮೇಲೆ ದಾಳಿ ನಡೆಸುತ್ತಲೇ ಇದೆ. ಇದೆಲ್ಲ ಗಮನಿಸಿದಾಗ ಮತ್ತೂಂದು ಯುದ್ಧಕ್ಕೆ ಸನ್ನದ್ಧವಾಗುತ್ತಿದೆ ಎಂದೇ ಅರ್ಥ ಎನ್ನುವ ಅಂಶಗಳ ಬಗ್ಗೆ ಬರೆದಿದ್ದಾರೆ.