ಮಾಸ್ಕೋ :ಉಕ್ರೇನ್ ನ 2 ಪ್ರದೇಶಗಳನ್ನು “ಸ್ವತಂತ್ರ’ ಎಂದು ಘೋಷಿಸುವ ಮೂಲಕ ಸಂಭಾವ್ಯ ಯುದ್ಧದ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿದ ಬೆನ್ನಲ್ಲೇ , ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ನಿರ್ಧಾರವನ್ನು ಪ್ರಪಂಚದಾದ್ಯಂತ ಜನರು ಪ್ರತಿಭಟನೆಯ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಪೂರ್ವ ಉಕ್ರೇನ್‌ನ ಪ್ರತ್ಯೇಕತಾವಾದಿ ಪ್ರದೇಶಗಳಿಗೆ ಸೈನ್ಯವನ್ನು ಕಳುಹಿಸಿ ಆದೇಶಿಸಿದ್ದಕ್ಕಾಗಿ ಹಲವಾರು ರಾಷ್ಟ್ರಗಳು ರಷ್ಯಾವನ್ನು ಹೊಸ ನಿರ್ಬಂಧಗಳೊಂದಿಗೆ ಶಿಕ್ಷಿಸಲು ಪ್ರಾರಂಭಿಸಿವೆ. ಪುತಿನ್ ತನ್ನ ನೆರೆಯ ದೇಶದ ಮೇಲೆ ಸಂಪೂರ್ಣ ಆಕ್ರಮಣವನ್ನು ಪ್ರಾರಂಭಿಸಿದರೆ ಇನ್ನಷ್ಟು ಮುಂದೆ ಹೋಗುವುದಾಗಿ ಬೆದರಿಕೆ ಹಾಕಿವೆ.
ಅಮೆರಿಕಾ , ಇಂಗ್ಲೆಂಡ್ , ಯುರೋಪಿಯನ್ ಯೂನಿಯನ್, ಆಸ್ಟ್ರೇಲಿಯಾ, ಕೆನಡಾ ಮತ್ತು ಜಪಾನ್ ಯುರೋಪ್‌ನಲ್ಲಿನ ಅತ್ಯಂತ ಕೆಟ್ಟ ಭದ್ರತಾ ಬಿಕ್ಕಟ್ಟಿನಲ್ಲಿ ಬ್ಯಾಂಕುಗಳು ಮತ್ತು ಗಣ್ಯರನ್ನು ಗುರಿಯಾಗಿಸುವ ಯೋಜನೆಗಳನ್ನು ಈಗಾಗಲೇ ಘೋಷಿಸಿವೆ.
ಉಕ್ರೇನ್‌ನಲ್ಲಿ ರಷ್ಯಾ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿಕಾ ಮೊದಲ ಹಂತದ ನಿರ್ಬಂಧಗಳನ್ನು ಘೋಷಿಸಿದ್ದು, ರಷ್ಯಾ ಆಕ್ರಮಣದೊಂದಿಗೆ ಮುಂದೆ ಹೋದರೆ, ಅಗತ್ಯವಿರುವಂತೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ನಾವು ಸಿದ್ಧರಾಗಿರುತ್ತೇವೆ ಎಂದು ಜೋ ಬಿಡೆನ್ ಎಚ್ಚರಿಕೆ ನೀಡಿದ್ದಾರೆ.
ವ್ಯಾಪಕ ಪ್ರತಿಭಟನೆ
ಟೊರೊಂಟೊದಲ್ಲಿನ ಉಕ್ರೇನಿಯನ್ ಕಾನ್ಸುಲೇಟ್‌ನ ಹೊರಗೆ, ಪ್ಯಾರಿಸ್‌ನಲ್ಲಿ,ಬರ್ಲಿನ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಮುಂದೆ ಜನರು ಯುದ್ಧ-ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಕೈವ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಹೊರಗೆ ಡಾನ್‌ಬಾಸ್‌ನಲ್ಲಿ ರಷ್ಯಾದ ಕ್ರಮಗಳ ವಿರುದ್ಧ ಉಕ್ರೇನಿಯನ್ನರು ಪ್ರತಿಭಟಿಸಿದ್ದಾರೆ.