Advertisement

ಗುಜರಾತಿನ ಜನರ ಆದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ : ರಾಹುಲ್ ಗಾಂಧಿ

06:38 PM Dec 08, 2022 | Team Udayavani |

ಜೈಪುರ: ಗುಜರಾತಿನಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿದ ಬೆನ್ನಲ್ಲೇ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ”ಜನರ ಆದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ, ಅವರ ಹಕ್ಕುಗಳು ಮತ್ತು ದೇಶದ ಆದರ್ಶಗಳಿಗಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ” ಎಂದು ಗುರುವಾರ ಹೇಳಿದ್ದಾರೆ.

Advertisement

“ಗುಜರಾತ್ ಜನತೆಯ ಆದೇಶವನ್ನು ನಾವು ನಮ್ರತೆಯಿಂದ ಸ್ವೀಕರಿಸುತ್ತೇವೆ. ನಾವು ಮರುಸಂಘಟನೆ ಮಾಡುತ್ತೇವೆ, ಶ್ರಮಿಸುತ್ತೇವೆ ಮತ್ತು ದೇಶದ ಆದರ್ಶಗಳು ಮತ್ತು ರಾಜ್ಯದ ಜನರ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

”ಈ ನಿರ್ಣಾಯಕ ವಿಜಯಕ್ಕಾಗಿ ಹಿಮಾಚಲ ಪ್ರದೇಶದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ನಿಜವಾಗಿಯೂ ಈ ವಿಜಯದ ಶುಭಾಶಯಗಳಿಗೆ ಅರ್ಹವಾಗಿದೆ.ನಾನು ಮತ್ತೊಮ್ಮೆ ಭರವಸೆ ನೀಡುತ್ತೇನೆ, ಸಾರ್ವಜನಿಕರಿಗೆ ನೀಡಿದ ಪ್ರತಿಯೊಂದು ಭರವಸೆಯನ್ನು ಶೀಘ್ರವಾಗಿ ಈಡೇರಿಸಲಾಗುವುದು” ಎಂದು ಟ್ವೀಟ್ ಮಾಡುವ ಮೂಲಕ ದೊಡ್ಡ ಸೋಲಿನ ನಡುವೆ ಸಿಕ್ಕ ಸಣ್ಣ ಗೆಲುವನ್ನು ಸಂಭ್ರಮಿಸಿದ್ದಾರೆ.

ಗುಜರಾತ್‌ನಲ್ಲಿ 2017 ರ ವಿಧಾನಸಭಾ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ವಿರುದ್ದ ಪ್ರಬಲ ಹೋರಾಟ ನೀಡಿತ್ತು ಆದರೆ ಈ ಬಾರಿ ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನು ಗೆದ್ದು ಹೀನಾಯ ನಿರ್ವಹಣೆ ತೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next