Advertisement

ಜಾಧವ್‌ ಪರ ವಾದಿಸಲು ಸಾಳ್ವೆಗೆ ಅವಕಾಶ ಕೊಡಿ

06:13 PM Sep 18, 2020 | Nagendra Trasi |

ನವದೆಹಲಿ:ಭಾರತೀಯ ನೌಕಾಪಡೆ ನಿವೃತ್ತಅಧಿಕಾರಿ ಕುಲಭೂಷಣ ಜಾಧವ ಪರ ವಾದಿಸಲು ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಪರ ವಾದಿಸಿದ ನ್ಯಾಯವಾದಿಯನ್ನು ನೇಮಿಸಲು ಅವಕಾಶ ನೀಡಬೇಕೆಂದೆಂದು ಭಾರತ ಪಾಕಿಸ್ತಾನವನ್ನು ಒತ್ತಾಯಿಸಿದೆ.

Advertisement

ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ಜಾಧವ್‌ ಪ್ರಕರಣವನ್ನು ಸಮರ್ಥವಾಗಿ ಪ್ರತಿನಿಧಿಸಿ ಗೆದ್ದ ನ್ಯಾಯವಾದಿ ಹರೀಶ್‌ ಸಾಳ್ವೆ ಕೇಂದ್ರ ಸರ್ಕಾರದ ಪ್ರಥಮ ಆಯ್ಕೆಯಾಗಿದೆ.

ಸಾಳ್ವೆ ಅವರು ಜನವರಿಯಲ್ಲಿ ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಅವರ ನ್ಯಾಯವಾದಿ ಯಾಗಿ ಇಂಗ್ಲೆಂಡ್‌ ಮತ್ತು ವೇಲ್ಸ್‌ನ ಕೋರ್ಟ್‌ನಲ್ಲಿ ನೇಮಕಗೊಂಡಿದ್ದರು.

ಇದೇ ರೀತಿಯ ಪದ್ಧತಿಯನ್ನು ಭಾರತದಲ್ಲಿಯೂ ಅನುಸರಿಸಲಾಗುತ್ತಿದೆ.ಗಮನಾರ್ಹ ಅಂಶವೆಂದರೆ ಭಾರತದ ವ್ಯಕ್ತಿಯನ್ನೇ ಇಸ್ಲಾಮಾಬಾದ್‌ ಹೈಕೋರ್ಟ್‌ನಲ್ಲಿ ಜಾಧವ್‌ ಪರ ವಾದಿಸಲು ನೇಮಕ ಮಾಡಲು ಅವಕಾಶವನ್ನು ಪಾಕಿಸ್ತಾನ ಸರ್ಕಾರ ನೀಡಿಲ್ಲ.

ಹೀಗಾಗಿ,ಬ್ರಿಟನ್‌ ರಾಣಿಯಪರ ವಕಾಲತ್ತು ನಡೆಸಲು ಅವಕಾಶ ಇರುವ ಹರೀಶ್‌ ಸಾಳ್ವೆಯವರೇ ಪಾಕಿಸ್ತಾನದ ಮಿಲಿಟರಿ ಕೋರ್ಟ್‌ನಪಾಟಿಸವಾಲುಗಳಿಗೆ ಉತ್ತರಿಸಲು ಸಮರ್ಥರಾಗಿದ್ದಾರೆ ಎನ್ನುವುದು ಕೇಂದ್ರದ ಅಂಬೋಣ.

Advertisement

ಸೆ.15ರ ವರೆಗೆ ತೆರಿಗೆಸಂಗ್ರಹ ಶೇ.22 ಕುಸಿತ
ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹ ಶೇ.22.5ರಷ್ಟು ಕುಸಿತಗೊಂಡಿದೆ. ಸೆ.15ರ ವರೆಗಿನ ಮಾಹಿತಿ ಇದಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಬುಧವಾರ ಮುಂಬೈನಲ್ಲಿ ದೃಢಪಡಿಸಿವೆ.2019ರ ಸೆ.15ರಲ್ಲಿ ತೆರಿಗೆ ಸಂಗ್ರಹ3,27,320.2ಕೋಟಿ ರೂ.ಸಂಗ್ರಹವಾಗಿತ್ತು.

ಸೆ.15ರಂದು ಅದರ ಮೊತ್ತ2,53,532.3 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಅದರಲ್ಲಿ ಮುಂಗಡ ತೆರಿಗೆಯ ಪಾಲೂ ಸೇರಿದೆ ಎಂದು ಇಲಾಖೆಯ ಅಧಿಕಾರಿಗಳು “ಪಿಟಿಐ’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ಮಾಹಿತಿ ಕೇವಲ ಪ್ರಾಥಮಿಕ ಮಾಹಿತಿ. ಪೂರ್ಣ ಪ್ರಮಾಣದ ಮಾಹಿತಿಯನ್ನು ಬ್ಯಾಂಕ್‌ಗಳೇ ನೀಡಲಿವೆ ಎಂದು ಆ ಅಧಿಕಾರಿ ಹೇಳಿದ್ದಾರೆ. ಜೂನ್‌ ಅಂತ್ಯಕ್ಕೆ ಮುಕ್ತಾಯಗೊಂಡ ಮೊದಲ ತ್ತೈಮಾಸಿಕ ದಲ್ಲಿ ಒಟ್ಟಾರೆ ತೆರಿಗೆ ಸಂಗ್ರಹ ಶೇ.31ರಷ್ಟು ಕುಸಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next