Advertisement

ಒಬ್ಬ ಮಹಿಳೆಗೆ ಅನ್ಯಾಯವಾಗಿದೆ, ಶೀಘ್ರವೇ ಉಚ್ಛ ನ್ಯಾಯಾಲಯದ ಮೆಟ್ಟಿಲೇರಲಿದ್ದೇವೆ : ಸಾವಂತ್

04:45 PM May 21, 2021 | Team Udayavani |

ಪಣಜಿ: ತೆಹಲ್ಕಾ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್‍ ಪಾಲ್ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಮಾಪ್ಸಾ ಸೆಷನ್ ಕೋರ್ಟ್  ತೇಜ್‍ ಪಾಲ್‍  ರನ್ನು ದೋಷಮುಕ್ತಗೊಳಿಸಿದರೂ ಕೂಡ, ಒಬ್ಬ ಮಹಿಳೆಗೆ ಅನ್ಯಾಯವಾಗಿರುವ ಕಾರಣ ಈ ತೀರ್ಪನ್ನು ಪ್ರಶ್ನಿಸಿ ನಾವು ಶೀಘ್ರವೇ ಉಚ್ಛ ನ್ಯಾಯಾಲಯದ ಮೆಟ್ಟಿಲೇರಲಿರುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ.

Advertisement

ಇದನ್ನೂ ಓದಿ :   ಸೋಂಕಿತರ ಮನೆ ಬಾಗಿಲಿಗೆ ಚಿಕಿತ್ಸಾ ಸೌಲಭ್ಯ ಒದಗಿಸುವ ಉಪಕ್ರಮಕ್ಕೆ ಪ್ರಧಾನಿ ಶ್ಲಾಘನೆ  

ಪಣಜಿಯಲ್ಲಿ ಶುಕ್ರವಾರ(ಮೇ. 21) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಸಾವಂತ್, ಈ ಪ್ರಕರಣದಲ್ಲಿ ಎಲ್ಲ ಪುರಾವೆಗಳೂ ಇರುವಾಗ ಒಬ್ಬ ಮಹಿಳೆಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಇದರಿಂದಾಗಿ ಶೀಘ್ರವೇ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಈ ಪ್ರಕರಣದಲ್ಲಿ ಶಂಕಿತ ಆರೋಪಿಯ ವಿರುದ್ಧ ಎಲ್ಲಾ ಸಾಕ್ಷಾಧಾರಗಳು ಇರುವ ಕಾರಣ ಈ ಪ್ರಕರಣದಿಂದ ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಾವಂತ್ ಖಡಕ್ ಆಗಿ ಹೇಳಿದ್ದಾರೆ.

ಇದನ್ನೂ ಓದಿ : ಸೋಂಕಿತರ ಮನೆ ಬಾಗಿಲಿಗೆ ಚಿಕಿತ್ಸಾ ಸೌಲಭ್ಯ ಒದಗಿಸುವ ಉಪಕ್ರಮಕ್ಕೆ ಪ್ರಧಾನಿ ಶ್ಲಾಘನೆ  

Advertisement

ತೆಹಲ್ಕಾ ಮ್ಯಾಗಜೀನ್ ಸ್ಥಾಪಕ ಸಂಪಾದಕ ತರುಣ್ ತೇಜ್ ಪಾಲ್ ವಿರುದ್ಧದ ಎಲ್ಲಾ ಲೈಂಗಿಕ ದೌರ್ಜನ್ಯದ ಆರೋಪದಿಂದ ಗೋವಾ ಕೋರ್ಟ್ ಖುಲಾಸೆಗೊಳಿಸಿ ಶುಕ್ರವಾರ(ಮೇ 21) ತೀರ್ಪನ್ನು ಪ್ರಕಟಿಸಿತ್ತು.  2013ರಲ್ಲಿ ಗೋವಾದ ಪಂಚತಾರಾ ಹೋಟೆಲ್ ನಲ್ಲಿ ಕಾನ್ಫರೆನ್ಸ್ ಆಯೋಜಿಸಿದ್ದ ಸಂದರ್ಭದಲ್ಲಿ ಸಹೋದ್ಯೋಗಿಗೆ ತರುಣ್ ತೇಜ್ ಪಾಲ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿತ್ತು. 2017ರಲ್ಲಿ ವಿಚಾರಣಾ ನ್ಯಾಯಾಲಯ ತೇಜ್ ಪಾಲ್ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಆರೋಪದ ಮೇಲೆ ವಿಚಾರಣೆ ನಡೆಸಿತ್ತು. ಏತನ್ಮಧ್ಯೆ ತೇಜ್ ಪಾಲ್ ಅವರು ಈ ಆರೋಪದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ನಂತರ ಸುಪ್ರೀಂ ಆದೇಶದಂತೆ ಗೋವಾದಲ್ಲಿಯೇ ವಿಚಾರಣೆ ಮುಂದುವರಿದಿತ್ತು.

ಇದನ್ನೂ ಓದಿ :  ಕೋವಿಡ್ ವಿರುದ್ಧ ದೀರ್ಘ ಹೋರಾಟ ನಡೆಸಬೇಕು, ಬ್ಲ್ಯಾಕ್ ಫಂಗಸ್ ದೊಡ್ಡ ಸವಾಲು:ಪ್ರಧಾನಿ ಮೋದಿ

Advertisement

Udayavani is now on Telegram. Click here to join our channel and stay updated with the latest news.

Next