Advertisement

ನಾನು 2024 ರಲ್ಲಿ ಸ್ಪರ್ಧಿಸಲಿದ್ದೇನೆ: ಹೇಮಾ ಮಾಲಿನಿ ಹೇಳಿಕೆಗೆ ರಾಖಿ ಪ್ರತಿಕ್ರಿಯೆ

06:27 PM Sep 25, 2022 | Team Udayavani |

ನವದೆಹಲಿ: ರಾಖಿ ಸಾವಂತ್ ಕೂಡ ಚುನಾವಣೆ ಅಭ್ಯರ್ಥಿ ಆಗಬಹುದು ಎಂದು ಲೇವಡಿ ಮಾಡಿದ್ದ ಹಿರಿಯ ನಟಿ, ಸಂಸದೆ ಹೇಮಾ ಮಾಲಿನಿ ಅವರ ಹೇಳಿಕೆಗೆ ಐಟಂ ಗರ್ಲ್ ಪ್ರತಿಕ್ರಿಯಿಸಿದ್ದಾರೆ.

Advertisement

ರಾಖಿ ಸಾವಂತ್ ಅವರು ಹೇಮಾ ಮಾಲಿನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದು,ನನ್ನ ಹೆಗಲ ಮೇಲೆ ಮಹತ್ತರವಾದ ಜವಾಬ್ದಾರಿಯನ್ನು ಹಾಕಿದ್ದಕ್ಕಾಗಿ, ನಾನು ಇದಕ್ಕೆ ಅರ್ಹಳೆಂದು ಪರಿಗಣಿಸಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಜಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಹೇಮಾ ಮಾಲಿನಿ ಜಿ ಅವರು ಈಗಾಗಲೇ ಘೋಷಿಸಿದಂತೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ರಾಖಿ ಹೇಳಿದ್ದಾರೆ.

ಇದನ್ನೂ ಓದಿ: ಕಮಲದ ಸುತ್ತಲಿರುವ ಕೆಸರನ್ನು “ಕೈ” ಯಿಂದ ಸ್ವಚ್ಛಗೊಳಿಸಲು ಸಾಧ್ಯವಿಲ್ಲ: ಕೇಜ್ರಿವಾಲ್

”ನನ್ನ ಮಟ್ಟಿಗೆ ಹೇಳುವುದಾದರೆ, ನಾನು ಬಾಲ್ಯದಿಂದಲೂ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಹುಟ್ಟಿದ್ದು ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ನಾನು ಸೇವೆ ಮಾಡಲು ಬಯಸುತ್ತೇನೆ.  ಚಹಾ ಮಾರಿ ಪ್ರಧಾನಿ ಆಗಬಹುದು ಎಂದಾಗ, ನಾನು ಬಾಲಿವುಡ್‌ನಲ್ಲಿ ಕೆಲಸ ಮಾಡಿದ ನಂತರ ಏಕೆ ಸಿಎಂ ಆಗಬಾರದು? ಖಂಡಿತವಾಗಿಯೂ, ನನಗೆ ನಿಮ್ಮೆಲ್ಲರ ಶುಭ ಹಾರೈಕೆಗಳು ಬೇಕು,” ಎಂದು ಸಾವಂತ್ ಹೇಳಿದ್ದಾರೆ.

”ನಾನು 2024ರ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ, ಆದರೆ ಯಾರ ವಿರುದ್ಧ ಎನ್ನುವುದು ಅಚ್ಚರಿ ಮೂಡಿಸುತ್ತದೆ” ಎಂದು ರಾಖಿ ಹೇಳಿದ್ದಾರೆ.

Advertisement

ಮಥುರಾದಲ್ಲಿಬಾಲಿವುಡ್ ನಟಿ ಕಂಗನಾ ರಣಾವತ್ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾಪೋಹಗಳ ಕುರಿತು ಹಾಲಿ ಬಿಜೆಪಿ ಸಂಸದೆ ಹೇಮಾ ಮಾಲಿನಿ ಪ್ರತಿಕ್ರಿಯಿಸಿ” ಒಳ್ಳೆಯದು, ಕ್ಷೇತ್ರವನ್ನು ಸಿನಿ ತಾರೆಯರು ಮಾತ್ರ ಪ್ರತಿನಿಧಿಸಬೇಕೆಂದಿದೆಯೇ ಎಂದು ಪ್ರಶ್ನಿಸಿ, ”ನಾಳೆ ರಾಖಿ ಸಾವಂತ್ ಅವರನ್ನು ಕಳುಹಿಸುತ್ತಾರೆ ಅವರೂ ಅಭ್ಯರ್ಥಿಯಾಗಬಹುದು” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next