Advertisement

IPL 2025; ರಾಜಸ್ಥಾನ್‌ ರಾಯಲ್ಸ್‌ಗೆ ಮರಳುವರೇ ದ್ರಾವಿಡ್‌?

10:15 PM Jul 23, 2024 | Team Udayavani |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌, ಹಿಂದೆ ತಾನಾಡಿದ್ದ ಐಪಿಎಲ್‌ ಫ್ರಾಂಚೈಸಿ ರಾಜಸ್ಥಾನ್‌ ರಾಯಲ್ಸ್‌ನ ಕೋಚ್‌ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದೇ ವಿಚಾರವಾಗಿ ರಾಜಸ್ಥಾನ್‌ ಮತ್ತು ದ್ರಾವಿಡ್‌ ಮಧ್ಯೆ ಮಾತುಕತೆ ಕೂಡ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

Advertisement

ಆರಂಭದಲ್ಲಿ, ಗೌತಮ್‌ ಗಂಭೀರ್‌ ಮೆಂಟರ್‌ ಆಗಿದ್ದ ಕೆಕೆಆರ್‌ ತಂಡಕ್ಕೆ ದ್ರಾವಿಡ್‌ ಕೋಚ್‌ ಆಗಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈಗ ಅವರು ರಾಜಸ್ಥಾನ್‌ ತಂಡದ ಕೋಚ್‌ ಆಗುವ ಸಾಧ್ಯತೆ ಹೆಚ್ಚಿದೆ.

ರಾಹುಲ್‌ ದ್ರಾವಿಡ್‌ 89 ಐಪಿಎಲ್‌ ಪಂದ್ಯಗಳಲ್ಲಿ 2,174 ರನ್‌ ಗಳಿಸಿದ್ದಾರೆ. 2013ರಲ್ಲಿ ಐಪಿಎಲ್‌ನಲ್ಲಿ ರಾಜಸ್ಥಾನ್‌ ಪರವೇ ಕೊನೆಯ ಪಂದ್ಯ ಆಡಿದ್ದರು. ಆಗ ದ್ರಾವಿಡ್‌ ಅವರೇ ತಂಡದ ನಾಯಕರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next