Advertisement
ಎರಡು ದೇಶಗಳ ಡಿಜಿಎಂಒಗಳ ನಡುವೆ ಏಕಾಏಕಿ ಸೋಮವಾರ ಹಾಟ್‌ಲೆçನ್ ಮೂಲಕ ಮಾತುಕತೆ ನಡೆದಿದೆ. ಈ ಸಂದರ್ಭದಲ್ಲಿ ಪಾಕಿಸ್ಥಾನದ ಡಿಜಿಎಂಒ ಮೇ.ಜ.ಶಾಹಿರ್ ಶಂಶಾದ್ ಮಿರ್ಜಾ ಗಡಿ ನಿಯಂತ್ರಣ ರೇಖೆಯ ಸರಹದ್ದಿನಲ್ಲಿ ಭಾರತದ ಸೇನಾಪಡೆಗಳು ಪ್ರಚೋದನೆ ಇಲ್ಲದೆ ಗುಂಡು ಹಾರಿಸುತ್ತಿವೆ ಎಂದು ಆರೋಪಿದರು. ಆದರೆ ಅದನ್ನು ಸಾರಾಸಗಟಾಗಿ ತಿರಸ್ಕರಿಸಿದ ಲೆ.ಜ.ಎ.ಜೆ.ಭಟ್, “ಪಾಕಿಸ್ಥಾನದ ಕಡೆಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಾಗ ಸಹಜವಾಗಿಯೇ ಅದನ್ನು ಭಾರತದ ಸೈನಿಕರು ತಡೆಯಲು ಗುಂಡು ಹಾರಿಸಲೇಬೇಕಾಗುತ್ತದೆ. ಉಗ್ರರಿಗೆ ಪಾಕಿಸ್ಥಾನದ ಸೈನಿಕರು ಬೆಂಗಾವಲಾಗಿ ನಿಂತು, ಗುಂಡು ಹಾರಿಸಿದಾಗ ನಾವು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲೇಬೇಕಾಗುತ್ತದೆ’ ಖಡಕ್ ಆಗಿ ಉತ್ತರಿಸಿದರು.
ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿಯ ರೂವಾರಿ, ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಸಂಸ್ಥಾಪಕ ಮಸೂದ್ ಅಜರ್‌ನನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವುದು ಭಾರತಕ್ಕೆ ಈ ಬಾರಿಯೂ ಸಾಧ್ಯವಾಗ ಲಿಕಿಲ್ಲ. ಏಕೆಂದರೆ ಅದಕ್ಕೆ ಸಂಬಂಧಿಸಿದ ಅವಧಿ ಗುರುವಾರ ಮುಕ್ತಾಯವಾಗ ಲಿದ್ದು, ಅಮೆರಿಕ, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ಸದಸ್ಯರಾಗಿ ರುವ ಸಮಿತಿಯಲ್ಲಿ ಚೀನವೂ ಪ್ರಮುಖ ಭಾಗೀದಾರಿ. ಅದೇ ಸಮಿತಿ ಸಭೆ ನಡೆಯಲಿದ್ದು, ಪಾಕಿಸ್ಥಾನದ ಸ್ನೇಹ ರಾಷ್ಟ್ರ ಚೀನ ಮತ್ತೂಮ್ಮೆ ಅದರ ಪರವಾಗಿ ಧ್ವನಿ ಎತ್ತಲಿದೆ. ಈ ಬಗ್ಗೆ ಬೀಜಿಂಗ್‌ನಲ್ಲಿ ಚೀನದ ವಿದೇಶಾಂಗ ಇಲಾಖೆ ವಕ್ತಾರರೇ ಸುಳಿವು ನೀಡಿದ್ದಾರೆ. ಉಗ್ರರ ವಿರುದ್ಧದ ಹೋರಾಟದಲ್ಲಿ ಪಾಕ್ ಪಾತ್ರ ಧನಾತ್ಮಕವಾಗಿಯೇ ಇದೆ ಎಂದು ಮತ್ತೂಮ್ಮೆ ಚೀನ ಸಮರ್ಥನೆ ನೀಡಿದೆ.