Advertisement

ಅಮರನಾಥ ಯಾತ್ರೆ ಬಳಿಕ ಕಾಶ್ಮೀರಕ್ಕೆ ಹೊಸ ಸರಕಾರ?

06:00 AM Jul 03, 2018 | Team Udayavani |

ಹೊಸದಿಲ್ಲಿ / ಶ್ರೀನಗರ: ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿಗೆ ಬೆಂಬಲ ಹಿಂಪಡೆಯುವ ಮೂಲಕ ಆಘಾತ ನೀಡಿದ್ದ ಬಿಜೆಪಿ, ಇದೀಗ ಅಮರನಾಥ ಯಾತ್ರೆ ಬಳಿಕ ಪಿಡಿಪಿ ಮತ್ತು ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಸೇರಿಸಿಕೊಂಡು ಸರಕಾರ ರಚನೆ ಮಾಡುವ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ. ರಾಜ್ಯ ವಿಧಾನಸಭೆಯಲ್ಲಿ 89 ಸ್ಥಾನಗಳಿದ್ದು, ಸರಳ ಬಹುಮತಕ್ಕೆ 44 ಸ್ಥಾನಗಳು ಬೇಕು.

Advertisement

ಮೂಲಗಳ ಪ್ರಕಾರ ಪಿಡಿಪಿಯಲ್ಲಿ ಅಸಮಾಧಾನ ಹೊಂದಿರುವ ಶಾಸಕರ ಗುಂಪು ಬಿಜೆಪಿಗೆ ಸೇರ್ಪಡೆಯಾಗಲಿದೆ. ಬಿಜೆಪಿ 25, ಪಿಡಿಪಿ 28, ನ್ಯಾಷನಲ್‌ ಕಾನ್ಫರೆನ್ಸ್‌ 15, ಕಾಂಗ್ರೆಸ್‌ 12 ಸ್ಥಾನಗಳನ್ನು ಹೊಂದಿವೆ. ಈ ರೀತಿಯಾಗಿ ಹೊಸ ಮೈತ್ರಿ ಸರಕಾರ ರಚನೆ ಬಗ್ಗೆ ಜೂ.27ರಂದು ಶ್ರೀನಗರದಲ್ಲಿ ಶಾಸಕ ಸಜ್ಜದ್‌ ಲೋನ್‌ ನಿವಾಸದಲ್ಲಿ ಚರ್ಚಿಸಲಾಗಿತ್ತು. ಈ ನಡುವೆ ಕಾಂಗ್ರೆಸ್‌ನ ಜಮ್ಮು ಮತ್ತು ಕಾಶ್ಮೀರಕ್ಕಾಗಿನ ನಾಯಕರ ಸಮಿತಿ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ನೇತೃತ್ವದಲ್ಲಿ ಸಭೆ ನಡೆಸಿ ಕಣಿವೆ ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಪರಾಮರ್ಶೆ ನಡೆಸಿತು.

Advertisement

Udayavani is now on Telegram. Click here to join our channel and stay updated with the latest news.

Next