ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದು ಮಾಡಿದರೆ, ವಿಚ್ಛೇದನ ಪಡೆಯಲು ಮುಸ್ಲಿಂ ಪುರುಷರಿಗಿರುವ ಅವಕಾಶ ಗಳೇನು ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರವೆಂ ಬಂತೆ ಮಾತನಾಡಿದ ಅಟಾರ್ನಿ ಜನರಲ್‌ವುಕುಲ್ ರೋಹ ಟಗಿ, “ನ್ಯಾಯಾಲಯವು ತ್ರಿವಳಿ ತಲಾಖ್ ಅನ್ನು ಅಸಿಂಧು ಅಥವಾ ಅಸಾಂವಿಧಾನಿಕ ಎಂದು ಘೋಷಿಸಿದರೆ, ಕೂಡಲೇ ಸರ್ಕಾರವು ಮುಸ್ಲಿಮರ ಮದುವೆ, ವಿಚ್ಛೇದನಕ್ಕೆ ಸಂಬಂಧಿಸಿ ಹೊಸ ಕಾನೂನನ್ನು ಜಾರಿ ಮಾಡಲಿದೆ,’ ಎಂದರು.
Advertisement
ಇದಕ್ಕೂ ಮುನ್ನ ನ್ಯಾಯಪೀಠವು, ಸಮಯದ ಅಭಾವವಿರುವ ಕಾರಣ ಸದ್ಯಕ್ಕೆ 3 ಬಾರಿ ವಿಚ್ಛೇದನ ಹೇಳುವುದಕ್ಕೆ ಸಂಬಂಧಿಸಿಯಷ್ಟೇ ವಿಚಾರಣೆ ನಡೆಸುತ್ತೇವೆ. ಬಹುಪತ್ನಿತ್ವ, ನಿಕಾಹ್ ಹಲಾಲಾ ಮತ್ತಿತರ ವಿಚಾರಗಳನ್ನು ಭವಿಷ್ಯದಲ್ಲಿ ಚರ್ಚಿಸೋಣ ಎಂದು ಹೇಳಿತು.