ಮಂಡ್ಯ: “ಕೋಳಿಗೆ ಮೊಟ್ಟೆ ಕಾವು ನೀಡುವುದನ್ನು ಕಲಿಸಿದಂತೆ ರೈತರಿಗೆ ನಾಟಿ ಹೇಳಿಕೊಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗಿದ್ದಾರಾ’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮೊದಲು ರೈತರ ಸಾಲಮನ್ನಾ ಮಾಡಿ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲಿ. ಕೇವಲ ಕಾಟಾಚಾರಕ್ಕೆ ರೈತರ ಮನವೊಲಿಸಲು ಮುಂದಾಗುವುದು ಸರಿಯಲ್ಲ ಎಂದರು.
ರಾಜ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದು ಮೂರು ತಿಂಗಳು ಕಳೆದರೂ ಯಾವೊಬ್ಬ ಶಾಸಕರಿಗೂ, ಯಾವೊಂದು ವಿಧಾನಸಭಾ ಕ್ಷೇತ್ರಕ್ಕೂ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಸಾಲ ಮನ್ನಾ ಘೋಷಣೆ ಮಾಡಿದ ಕುಮಾರಸ್ವಾಮಿ ವಾರದೊಳಗೆ ಋಣಮುಕ್ತ ಪತ್ರ ಕೊಡಿಸುವುದಾಗಿ ಹೇಳಿದರು. ಸಾಲ ಕಟ್ಟಿದವರ ಖಾತೆಗೂ 25 ಸಾವಿರ ರೂ.ಮರು ಪಾವತಿ ಮಾಡುವುದಾಗಿ ತಿಳಿಸಿದರು. ಆದರೆ, ಋಣಮುಕ್ತ ಪತ್ರವೂ ರೈತರಿಗೆ ಸಿಗಲಿಲ್ಲ. ಸಾಲ ಕಟ್ಟಿದವರ ಖಾತೆಗೆ 25 ಪೈಸೆಯೂ ಬಂದಿಲ್ಲ ಎಂದು ಲೇವಡಿ ಮಾಡಿದರು.
ಕುಮಾರಸ್ವಾಮಿ ಅವರು ಎಷ್ಟು ದಿನ ಸರ್ಕಾರ ನಡೆಸುತ್ತಾರೆ ಎಂಬುದು ಅವರಿಗೇ ಗೊತ್ತಿಲ್ಲ. ಪಕ್ಷದ ಶಾಸಕರ ಬೆಂಬಲವೂ ಅವರಿಗಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಲಿಂದ ಮೇಲೆ ಪತ್ರ ಬರೆಯುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂದರು. ಕಾಂಗ್ರೆಸ್‌ನ ಯಾವುದೇ ಶಾಸ ಕ ರನ್ನು ನಾವು ಕರೆ ಯ ಲ್ಲ. ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಯ ವರ ಕಾರ್ಯ ವನ್ನು ಮೆಚ್ಚಿ ಸಾಕಷ್ಟು ಮಂದಿ ನಮ್ಮ ಪಕ್ಷಕ್ಕೆ ಬರು ತ್ತಿ ದ್ದಾರೆ. ನಾವು ಬರು ವ ವ ರನ್ನು ಬೇಡ ಎನ್ನು ವು ದಿಲ್ಲ. ಕಾಂಗ್ರೆಸ್-ಜೆಡಿ ಎಸ್ ಶಾಸ ಕ ರನ್ನು ಸೆಳೆ ಯುವ ದುರ್ಗತಿ ನಮ ಗೇನೂ ಇಲ್ಲ. ಕಾಂಗ್ರೆಸ್ ಶಾಸಕರು ದುರ್ಬಲರು, ಧನದಾಹಿಗಳು ಎಂಬುದನ್ನು ಕಾಂಗ್ರೆಸ್ ನಾಯಕರೇ ಒಪ್ಪಿಕೊಂಡಿದ್ದಾರೆ. ಅವರ ಶಾಸಕರಿಂದಲೇ ಸರ್ಕಾರ ಬಿದ್ದು ಹೋಗಲಿದೆ ಭವಿಷ್ಯ ನುಡಿದರು.