Advertisement

ChatGPT ನಮ್ಮ ಉದ್ಯೋಗ ಕಸಿಯಲಿದೆಯೇ? ಇನ್ಫೋಸಿಸ್ ನಾರಾಯಣ ಮೂರ್ತಿ ಅಭಿಪ್ರಾಯವೇನು?

03:58 PM Mar 03, 2023 | Team Udayavani |

ನವದೆಹಲಿ: ಇತ್ತೀಚೆಗೆ ಚಾಟ್ ಜಿಪಿಟಿ(ChatGPT) ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಚಾಟ್ ಜಿಪಿಟಿ ನಮ್ಮ ಉದ್ಯೋಗಕ್ಕೆ ಕುತ್ತು ತರಲಿದೆಯೇ? ಎಂಬ ಬಗ್ಗೆ ವಿಶ್ಲೇಷಿಸಲಾಗುತ್ತಿದೆ. ಆದರೆ ಚಾಟ್ ಜಿಪಿಟಿ ಎಂಬ ಚಾಟ್ ಬಾಟ್, ಪಠ್ಯ ರೂಪದಲ್ಲಿ ನಾವು ಸಲ್ಲಿಸುವ ಪ್ರಶ್ನೆಗಳನ್ನು ಅರ್ಥೈಸಿ, ಅದಕ್ಕೆ ಪಠ್ಯರೂಪದಲ್ಲಿ ಉತ್ತರ ಕೊಡುತ್ತಿರುವ ಅದರ ಸಾಮರ್ಥ್ಯದ ಬಗ್ಗೆ ಹಲವರು ಪ್ರಶಂಶಿಸಿದ್ದಾರೆ.

Advertisement

ಇದನ್ನೂ ಓದಿ:ಕರ್ನಾಟಕ ಯಾರ ಎಟಿಎಂ ಆಗಿದೆ? ಅಮಿತ್ ಶಾಗೆ ಎಚ್.ಡಿ ಕುಮಾರಸ್ವಾಮಿ ಪ್ರಶ್ನೆ

ಆದರೂ ಇದರ ಹೊರತಾಗಿಯೂ ಚಾಟ್ ಜಿಪಿಟಿ ಶಾಲಾ ಶಿಕ್ಷಣದ ಮೇಲೆ ಬೀರಬಹುದಾದ ಸಂಭವನೀಯ ಪರಿಣಾಮಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಎಲ್ಲಾ ಪ್ರಶಂಸೆ, ಆಕ್ಷೇಪಗಳ ನಡುವೆ ಚಾಟ್ ಜಿಪಿಟಿ ಕುರಿತ ಆತಂಕದ ಬಗ್ಗೆ ಇನ್ಫೋಸಿಸ್ ಸ್ಥಾಪಕರಾದ ನಾರಾಯಣ ಮೂರ್ತಿಯವರು ಪ್ರತಿಕ್ರಿಯಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಈ ಚಾಟ್ ಜಿಪಿಟಿ ಬಗ್ಗೆ ನನ್ನ ಮಗ ನನಗೆ ಮಾಹಿತಿ ನೀಡಿದ್ದ. ಹೌದು ಇದು ನಿಮ್ಮ ಕಲ್ಪನೆಗೆ ತಕ್ಕ ಮಾಹಿತಿಯನ್ನು ಒದಗಿಸಿಕೊಡುವ ನೂತನ ವಿಧಾನವಾಗಿದೆ. ಹಾಗಂತ ಇದರ ಬಗ್ಗೆ ಭಯಪಡಬೇಕಾದ ಅಗತ್ಯವಿಲ್ಲ ಎಂದು ನಾರಾಯಣಮೂರ್ತಿ ತಿಳಿಸಿದ್ದಾರೆ.

“ಚಾಟ್ ಜಿಪಿಟಿ(Chat GPT) ಉದ್ಯೋಗವನ್ನು ಕಸಿದುಕೊಳ್ಳಲಾರದು ಎಂದು ಸ್ಪಷ್ಟಪಡಿಸಿರುವ ನಾರಾಯಣಮೂರ್ತಿ ಅವರು, 1977-1978ರಲ್ಲಿ ಪ್ರೋಗ್ರಾಮ್ ಜನರೇಟರ್ ಚಾಲ್ತಿಗೆ ಬಂದಾಗಲೂ ಕೂಡಾ ಪ್ರತಿಯೊಬ್ಬರು ತಮ್ಮ ಉದ್ಯೋಗಕ್ಕೆ ಕುತ್ತು ಬರಲಿದೆ ಎಂದು ಆತಂಕಗೊಂಡಿದ್ದರು. ಆದರೆ ಆ ರೀತಿ ಆಗಲೇ ಇಲ್ಲ. ಯಾಕೆಂದರೆ ಮನುಷ್ಯನ ಮೆದುಳು ಪ್ರಭಾವಶಾಲಿ ಹೊಂದಾಣಿಕೆಯ ಸಾಧನವಾಗಿದೆ. ತಂತ್ರಜ್ಞಾನ ಮತ್ತು ಮಾನವ ಕಲ್ಪನೆಯ ಸಹಾಯದಿಂದ ನಂತರ ದೊಡ್ಡ ಸಮಸ್ಯೆಗಳನ್ನು ಪರಿಹರಿಸಲು ಇದನ್ನು ಬಳಸಿಕೊಳ್ಳಬಹುದಾಗಿದೆ” ಎಂದರು.

Advertisement

ಚಾಟ್ ಜಿಪಿಟಿ ತುಂಬಾ ಉತ್ತಮವಾಗಿದೆ. ಆದರೆ ನಾವು ಅದನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕು. ನಂತರ ನಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಮತ್ತು ದೊಡ್ಡ ಸಮಸ್ಯೆಗಳನ್ನು ಪರಿಹರಿಸಲು ಬಳಸಬೇಕು. ಆದರೆ ಚಾಟ್ ಜಿಪಿಟಿಯಾಗಲಿ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಗಲಿ ಅವು ಎಂದಿಗೂ ಮಾನವರ ಸ್ಥಾನಕ್ಕೆ ಬದಲಿ ವ್ಯವಸ್ಥೆಯಾಗಲು ಸಾಧ್ಯವಿಲ್ಲ ಎಂದು ನಾರಾಯಣ ಮೂರ್ತಿ ವಿಶ್ಲೇಸಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next