Advertisement

ಚೀನಾ ಉದ್ಧಟತನ; ಭಾರತದ್ದೇ ತಪ್ಪಂತೆ

12:02 PM Jan 20, 2018 | Team Udayavani |

ಬೀಜಿಂಗ್‌/ನವದೆಹಲಿ: ಡೋಕ್ಲಾಂ ನಮಗೆ ಸೇರಿದ್ದು. ಹೀಗಾಗಿ ಅಲ್ಲಿ ನಾವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿಯೇ ತೀರುತ್ತೇವೆ. ಈ ಬಗ್ಗೆ ಯಾರೂ ಮಾತನಾಡುವುದೇ ಬೇಡ’. ಈ ರೀತಿ ಹೇಳುವ ಮೂಲಕ ಚೀನಾವು ಭಾರತದ ಮುಂದೆ ಮತ್ತೆ ಉದ್ಧಟತನ ತೋರಿಸಿದೆ. ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ನೆರೆಯ ರಾಷ್ಟ್ರ ವ್ಯವಸ್ಥಿತ ರೀತಿಯಲ್ಲಿ ಸೇನೆಯ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಚೀನಾ ಎಚ್ಚರಿಕೆ ನೀಡುವ ಧ್ವನಿಯಲ್ಲಿ ಮಾತನಾಡಿದೆ.

Advertisement

ಕಳೆದ ವರ್ಷ 73 ದಿನಗಳ ಕಾಲ ಎರಡು ರಾಷ್ಟ್ರಗಳ ನಡುವೆ ಇದೇ ವಿವಾದಕ್ಕೆ ಸಂಬಂಧಿಸಿ ಭಾರೀ ವಿವಾದ ಸೃಷ್ಟಿಯಾಗಿತ್ತು. ಈ ಘಟನೆ ನಡೆದು ಐದು ತಿಂಗಳ ಬಳಿಕ ಮತ್ತೆ ಅದೇ ಪ್ರದೇಶದಲ್ಲಿ ಬಿಕ್ಕಟ್ಟು ಉಂಟಾಗಿದೆ.

ಬೆಳವಣಿಗೆಗಳ ಬಗ್ಗೆ ಬೀಜಿಂಗ್‌ನಲ್ಲಿ ಶುಕ್ರವಾರ ಪ್ರತಿಕ್ರಿಯೆ ನೀಡಿದ ಚೀನಾ ವಿದೇಶಾಂಗ ಇಲಾಖೆ ವಕ್ತಾರ, “ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳನ್ನು ನೋಡಿದೆ. ಆದರೆ, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಯಾರು ನೀಡಿದರು ಎಂದು ಗೊತ್ತಿಲ್ಲ’ ಎಂದು ಹೇಳಿದ್ದಾರೆ. ಡೋಕ್ಲಾಂ ವಿಚಾರದಲ್ಲಿ ತಮ್ಮ ದೇಶದ ಅಭಿಪ್ರಾಯ ಸ್ಪಷ್ಟವಾಗಿದೆ. ಅದು ಯಾವತ್ತೂ ಚೀನಾಕ್ಕೇ ಸೇರಿದ್ದು. ಅದಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದ ಇಲ್ಲ. ನಮ್ಮ ಭೂಪ್ರದೇಶದಲ್ಲಿನ ಜನರ ಹಾಗೂ ಸೇನೆಗಳ ಸಂಚಾರಕ್ಕೆ ಅನುಕೂಲವಾಗುವಂತೆ ಆ ಪ್ರದೇಶದಲ್ಲಿ ರಸ್ತೆ
ಸೇರಿದಂತೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಡೋಕ್ಲಾಂ ನಮ್ಮದೇ ಆಗಿರುವಾಗ ಕಾಮಗಾರಿ ನಡೆಸುವ ಎಲ್ಲ ಹಕ್ಕು ಇದೆ. ಇದನ್ನು, ಭಾರತವಾಗಲೀ, ಬೇರೆ ದೇಶವಾಗಲೀ ಪ್ರಶ್ನಿಸಬಾರದು ಎಂದೂ ವಕ್ತಾರರು ಹೇಳಿದ್ದಾರೆ.

ಪರಿಹಾರಕ್ಕೆ ಮಾರ್ಗಗಳಿವೆ: ಚೀನಾ ಸೇನೆ ಮತ್ತೆ ತಳವೂರಿರುವ ಬಗ್ಗೆ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌, ಬಿಕ್ಕಟ್ಟು ಸರಿಪಡಿಸಲು ಎರಡೂ ದೇಶಗಳು ಮಾರ್ಗೋಪಾಯಗಳನ್ನು ರೂಪಿಸಿವೆ ಎಂದು ಹೇಳಿದ್ದಾರೆ. ಆ ಪ್ರದೇಶದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳ ಬಗ್ಗೆ ನಿಗಾ ಇರಿಸಿದ್ದೇವೆ. ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಉಂಟಾಗುವುದಿದ್ದರೆ, ಅದನ್ನು ತಡೆಯಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಭಾರತದ್ದೇ ತಪ್ಪಂತೆ:
ಎರಡನೇ ಬಾರಿಗೆ ಕಳೆದ ಆಗಸ್ಟ್‌ನಲ್ಲಿ ಉಂಟಾಗಿದ್ದಂತೆಯೇ ವಿವಾದ ನಡೆಸಲು ಚೀನಾ ಸಿದ್ಧವಾಗಿದೆಯೇ ಎಂದು ಪ್ರಶ್ನಿಸಿ
ದಾಗ, “ಚಿಕನ್‌ ನೆಕ್‌ (ಪಶ್ಚಿಮ ಬಂಗಾಳದ ಸಿಲಿಗುರಿ ಮತ್ತು ಸಿಕ್ಕಿಂ ನಡುವಿನ ಸಣ್ಣ ಸ್ಥಳ) ಪ್ರದೇಶದ ಹೊರ ಭಾಗದಲ್ಲಿ ನಾವು ನಡೆಸು ತ್ತಿರುವ ಕಾಮಗಾರಿಗೆ ಭಾರತವೇ ಅಡ್ಡಿಪಡಿಸುತ್ತಿದೆ. ಇದರಿಂದಾಗಿ ಎರಡೂ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಧಕ್ಕೆ ಬರಬಹುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next