Advertisement

ಬೃಹತ್‌ ಗಜ ಮರುಸೃಷ್ಟಿ ಯತ್ನ

11:37 PM Sep 14, 2021 | Team Udayavani |

ವಾಷಿಂಗ್ಟನ್‌:  ಸುಮಾರು 11 ಸಾವಿರ ವರ್ಷಗಳ ಹಿಂದೆ, ಭೂಮಿಯಲ್ಲಿ ಜೀವಿಸುತ್ತಿದ್ದ ದೈತ್ಯಾಕಾರದ ಆನೆಗಳಾದ “ಮ್ಯಾಮತ್‌’ಗಳ ಮರುಸೃಷ್ಟಿಗೆ ಪ್ರಯತ್ನಗಳು ನಡೆದಿವೆ. ಅವುಗಳ ಜೀವನ ಕ್ರಮ ಹೇಗಿತ್ತು ಎಂಬುದನ್ನು ಈಗಿನ ಜನರಿಗೆ  ಮನವರಿಕೆ ಮಾಡಿಕೊಡುವ ಉದ್ದೇಶದಿಂದ, ಆನೆಗಳನ್ನು ಮರುಸೃಷ್ಟಿ ಮಾಡಲು ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ನ ಪ್ರಾಧ್ಯಾ­ಪಕ ಜಾರ್ಜ್‌ ಚರ್ಚ್‌ ನೇತೃತ್ವದ ತಂಡ ಮುಂದಾಗಿದೆ. ಈ ಯೋಜನೆಗಾಗಿ, ಸಾರ್ವಜನಿಕ ದೇಣಿಗೆಯ ಮೂಲಕ 110 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ.

Advertisement

ಮರುಸೃಷ್ಟಿ ಹೇಗೆ?: ಏಷ್ಯಾದ ಆನೆಗಳ ಚರ್ಮದಿಂದ ಜೀವಾಣುಗಳನ್ನು ಸಂಗ್ರಹ ಮಾಡಿ, ಅದನ್ನು ಈಗಾಗಲೇ ಸಂಸ್ಕರಣ ಘಟಕಗಳಲ್ಲಿ ಸಂಗ್ರಹವಾಗಿರುವ ಮ್ಯಾಮತ್‌ನ ಡಿಎನ್‌ಎ ಜತೆಗೆ ಸಂಯೋಜಿಸಲಾಗುತ್ತದೆ. ಮ್ಯಾಮತ್‌ ಹೋಲುವ ಇತರ ಆನೆಗಳ ಸಂತತಿಯಿಂದ ಸಂಗ್ರಹಿಸಲಾದ ಜೀವಾಣು­ಗಳಿಂದ ಮ್ಯಾಮತ್‌ನ ಕೂದಲು, ಕೊಬ್ಬು ತುಂಬಿದ ಚರ್ಮಗಳನ್ನು ಸೃಷ್ಟಿಸುವ ಜಿನೋಮ್‌ಗಳನ್ನು ಸಂಗ್ರಹಿಸಿ, ಈ ಮೊದಲೇ ಸಂಯೋಜನೆಗೊಂಡ ಎರಡು ಡಿಎನ್‌ಎಗಳ ಮಿಶ್ರಣಕ್ಕೆ ಕಾಲಾ­ನುಕ್ರಮಕ್ಕೆ ಸೇರಿಸುತ್ತಾ, ಮ್ಯಾಮತ್‌ನ ಭ್ರೂಣವನ್ನು ಸೃಷ್ಟಿಸಿ, ಅದನ್ನು ಹೆಣ್ಣಾನೆ­ಯೊಂದರ ಗರ್ಭಾಶಯದಲ್ಲಿ ಸೇರಿಸಿ ಅಲ್ಲಿ ಅದನ್ನು ಬೆಳೆಸ­ಲಾಗುತ್ತದೆ. ಆ ಮೂಲಕ ಹೊಸ ಮ್ಯಾಮತ್‌ ಮರಿ­ಯಾನೆಯನ್ನು ಸೃಷ್ಟಿಸುವ ಉದ್ದೇಶ ವಿಜ್ಞಾನಿಗಳದ್ದು.

ಆರು ವರ್ಷದಲ್ಲಿ ಹೊಸ ಸಂತತಿ!: ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಪ್ರಯೋಗಗಳಲ್ಲಿ ಯಾವುದೇ ಅಡೆತಡೆ ಸೃಷ್ಟಿಯಾಗದೇ ಇದ್ದರೆ ಮುಂದಿನ ಆರು ವರ್ಷಗಳಲ್ಲಿ ನಿರ್ದಿಷ್ಟ ಸಂಖ್ಯೆಯಲ್ಲಿ ಮ್ಯಾಮತ್‌ ಮರಿಯಾನೆಗಳು ಈ ಭೂಮಿ ಮೇಲೆ ಜನ್ಮಿಸಲಿವೆ ಎಂಬ ಆಶಾಭಾವನೆಯನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಅನಂತರ ಅದನ್ನು ಪ್ರಯೋಗಾಲಯದಲ್ಲೇ ನಿರ್ದಿಷ್ಟ ಹಂತದವರೆಗೆ ಬೆಳೆಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next