Advertisement

ಮುಂದೆಯೂ ನಾನೇ ಸಿಎಂ: ಬಿಎಸ್‌ವೈ

06:25 AM Jan 01, 2021 | Team Udayavani |

ಬೆಂಗಳೂರು: ಮುಂದಿನ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿ, ನಾಯಕತ್ವ ಬಗ್ಗೆ ಗೊಂದಲಗಳಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

Advertisement

ಸಂಪುಟ ಸದಸ್ಯರಲ್ಲಿ, ಶಾಸಕರಲ್ಲಿ ಈ ಬಗ್ಗೆ ಗೊಂದಲಗಳಿಲ್ಲ. ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಕೂಡ ಇದನ್ನೇ ಸ್ಪಷ್ಟಪಡಿಸಿದ್ದಾರೆ ಎಂದು ವಿಧಾನಸೌಧದಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಅವರು ಹೇಳಿದ್ದಾರೆ.

ಒಂದೂವರೆ ವರ್ಷದಿಂದ ಅಭಿವೃದ್ಧಿ ಬಗ್ಗೆಯಷ್ಟೇ ನನ್ನ ಯೋಚನೆ. ಸದ್ಯ ಒಂದೆರಡು ಶಾಸಕರಲ್ಲಿ ಅಸಮಾಧಾನ ಇರಬಹುದಷ್ಟೇ, ಇದಕ್ಕಾಗಿಯೇ ವಿಭಾಗೀಯ ಮಟ್ಟದಲ್ಲಿ ಸಭೆ ಕರೆದು ಚರ್ಚಿಸಲು ತೀರ್ಮಾನಿಸಿದ್ದೇನೆ ಎಂದೂ ಸಿಎಂ ಹೇಳಿದರು.

ಜನರಲ್ಲೂ ನಾಯಕತ್ವ ಬಗ್ಗೆ ಗೊಂದಲ ಇಲ್ಲ. ಇದ್ದರೆ ಕೆಲವು ಮಾಧ್ಯಮಗಳಲ್ಲಷ್ಟೆ ಎಂದು ಚಟಾಕಿ ಹಾರಿಸಿದರು.

ಇಂದು ಅರುಣ್‌ ಸಿಂಗ್‌ ಆಗಮನ
ಶಿವಮೊಗ್ಗದಲ್ಲಿ ಶನಿವಾರ ಮತ್ತು ರವಿವಾರ ನಡೆಯಲಿರುವ ಕೋರ್‌ ಕಮಿಟಿ ಸಭೆ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಶುಕ್ರವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ. ಶನಿವಾರ ಮಧ್ಯಾಹ್ನ ಪಕ್ಷದ ಜಿಲ್ಲಾಧ್ಯಕ್ಷರು, ವಿಭಾಗ ಮಟ್ಟದ ಉಸ್ತುವಾರಿಗಳು, ವಿಭಾಗೀಯ ಸಂಘಟನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಂಜೆ ಶಿವಮೊಗ್ಗದಲ್ಲಿ ಗ್ರಾಮ ಸೇವಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅನಂತರ ಕೋರ್‌ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರವಿವಾರ ಪಕ್ಷದ ರಾಜ್ಯ ವಿಶೇಷ ಕಾರ್ಯಕಾರಿಣಿ ನಡೆಯಲಿದ್ದು, ಅದರಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next