ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್ ಮತ್ತೆ ಬೆದರಿಕೆ ಹಾಕುವ ಮೂಲಕ ಪ್ರಚಾರದಲ್ಲಿದ್ದಾನೆ. ಈ ಬಾರಿ ಡಿಸೆಂಬರ್ 13 ರಂದು ಅಥವಾ ಅದಕ್ಕೂ ಮೊದಲು ಭಾರತೀಯ ಸಂಸತ್ತಿನ ಮೇಲೆ ದಾಳಿ ನಡೆಸುವುದಾಗಿ ಹೇಳಿರುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾನೆ.
2001 ರಲ್ಲಿ ಸಂಸತ್ ಮೇಲೆ ದಾಳಿ ನಡೆಸಿದ ಅಪರಾಧಿ ಅಫ್ಜಲ್ ಗುರುವಿನ ಪೋಸ್ಟರ್ ಅನ್ನು ಒಳಗೊಂಡಿರುವ ವೀಡಿಯೊ ಒಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ‘ದೆಹಲಿ ಬನೇಗಾ ಖಲಿಸ್ತಾನ್’ ಎಂಬ ಶೀರ್ಷಿಕೆಯನ್ನು ಹಾಕಲಾಗಿದೆ. ವಿಡಿಯೋದಲ್ಲಿ ತನ್ನನ್ನು ಕೊಲ್ಲಲು ಭಾರತ ನಡೆಸಿದ ಸಂಚು ವಿಫಲವಾಗಿದೆ, ಅಲ್ಲದೆ ಭಯೋತ್ಪಾದಕರು ಸಂಸತ್ತಿನ ಮೇಲೆ ದಾಳಿ ನಡೆಸಿ ಡಿಸೆಂಬರ್ 13 ಕ್ಕೆ 22 ವರ್ಷಗಳಾಗುತ್ತಿದೆ ಇದೆ ದಿನದಂದು ಸಂಸತ್ತಿನ ಮೇಲೆ ದಾಳಿ ನಡೆಸುವುದಾಗಿ ಇಲ್ಲವಾದಲ್ಲಿ ಅದಕ್ಕೂ ಮೊದಲು ದಾಳಿ ನಡೆಸುವುದಾಗಿ ಹೇಳಿರುವ ವಿಡಿಯೋ ಬಿಡುಗಡೆ ಮಾಡಿದ್ದಾನೆ.
ಕಳೆದ ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು ಇದರ ನಡುವೆಯೇ ಪನ್ನುನ್ ಅವರ ಬೆದರಿಕೆ ಬಂದಿದೆ. ಅಲ್ಲದೆ ಡಿಸೆಂಬರ್ 22ರವರೆಗೆ ಅಧಿವೇಶನ ನಡೆಯಲಿದೆ. ಇತ್ತ ಪನ್ನಮ್ ಬೆದರಿಕೆ ವಿಡಿಯೋ ಹರಡುತ್ತಿದ್ದಂತೆ ಸಂಸತ್ ಭವನದ ಸುತ್ತ ಹೈ ಅಲರ್ಟ್ ಘೋಷಿಸಲಾಗಿದೆ.
ಮೂಲಗಳ ಪ್ರಕಾರ, ಭದ್ರತಾ ಏಜೆನ್ಸಿಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ನ K-2 (ಕಾಶ್ಮೀರ-ಖಾಲಿಸ್ತಾನ್) ಭಾರತ ವಿರೋಧಿ ನಿರೂಪಣೆಯನ್ನು ಪ್ರಚಾರ ಮಾಡುವ ತಮ್ಮ ಕಾರ್ಯಸೂಚಿಯನ್ನು ಮುಂದುವರಿಸಲು ಪನ್ನುನ್‌ಗೆ ನಿರ್ದೇಶನಗಳನ್ನು ನೀಡಿದೆ ಎಂದು ಹೇಳಲಾಗಿದೆ.
ಪನ್ನುನ್ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಅಮೆರಿಕಾ ಮೂಲದ ಸಿಖ್ಸ್ ಫಾರ್ ಜಸ್ಟಿಸ್ (SFJ) ನ ಮುಖ್ಯಸ್ಥನಾಗಿದ್ದಾನೆ ಜೊತೆಗೆ ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ವ್ಯಕ್ತಿಯಾಗಿದ್ದಾನೆ.
ಇದನ್ನೂ ಓದಿ: Daily Horoscope:ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ,ತಪ್ಪು ತಿಳಿವಳಿಕೆಯಿಂದ ಅನವಶ್ಯ ಕಲಹ