Advertisement

ಗಲ್ಲು ಕೋರಿದ ಎನ್‌ಐಎ ವಿರುದ್ಧ ನಾನೇ ವಾದ ಮಂಡಿಸುವೆ: ಯಾಸಿನ್‌

12:23 AM Aug 10, 2024 | Team Udayavani |

ಹೊಸದಿಲ್ಲಿ: ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌ಗೆ ಮರಣದಂಡನೆ ಶಿಕ್ಷೆ ಕೋರಿ ಎನ್‌ಐಎ ಸಲ್ಲಿಸಿರುವ ಅರ್ಜಿ ವಿರುದ್ಧ ತನ್ನ ಪರ ವಾಗಿ ತಾನೇ ವಾದ ಮಾಡುವುದಾಗಿ ದಿಲ್ಲಿ ಹೈಕೋರ್ಟ್‌ಗೆ ಯಾಸಿನ್‌ ಮಲಿಕ್‌ ತಿಳಿಸಿದ್ದಾನೆ. ಉಗ್ರರಿಗೆ ಹಣಕಾಸು ನೆರವು ನೀಡಿರುವ ಪ್ರಕರಣದಲ್ಲಿ ಈಗಾಗಲೇ ಯಾಸಿನ್‌ಗೆ ಜೀವಾವಧಿ ಶಿಕ್ಷೆ ನೀಡಲಾಗಿದ್ದು, ಆತ ತಿಹಾರ್‌ ಜೈಲಿನಲ್ಲಿದ್ದಾನೆ. ಇದೇ ಪ್ರಕರಣದಲ್ಲಿ ಯಾಸಿನ್‌ಗೆ ಗಲ್ಲು ವಿಧಿಸಬೇಕೆಂದು ಎನ್‌ಐಎ ಕೋರಿದೆ. ಈ ಅರ್ಜಿಯನ್ನು ನ್ಯಾ| ಸುರೇಶ್‌ ಕುಮಾರ್‌ ನೇತೃತ್ವದ ಪೀಠ ಸೆ.19ಕ್ಕೆ ವಿಚಾರಣೆಗೆ ಪಟ್ಟಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next