Advertisement

ಭಾರತದಲ್ಲಿ ಮೂರನೇ ಅಲೆ ಪರಿಣಾಮ ಹೇಗಿರಲಿದೆ? ಏಮ್ಸ್ ಮುಖ್ಯಸ್ಥ ಗುಲೇರಿಯಾ ಹೇಳಿದ್ದೇನು?

03:02 PM Jul 24, 2021 | Team Udayavani |

ನವದೆಹಲಿ: ಭಾರತದಲ್ಲಿ ಕೋವಿಡ್ 3ನೇ ಅಲೆ ವಿಳಂಬವಾಗಬಹುದು. ಅಲ್ಲದೇ ಒಂದು ವೇಳೆ ಕೋವಿಡ್ ಮಾರ್ಗಸೂಚಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಲಸಿಕೆ ನೀಡುವಿಕೆಯನ್ನು ತೀವ್ರಗೊಳಿಸಿದರೆ ಮೊದಲ ಎರಡು ಅಲೆಗಿಂತ ಕಡಿಮೆ ಪ್ರಮಾಣದ ಪರಿಣಾಮ ಬೀರಬಹುದು ಎಂದು ಏಮ್ಸ್ ವರಿಷ್ಠ ಡಾ.ರಣದೀಪ್ ಗುಲೇರಿಯಾ ಎನ್ ಡಿಟಿವಿ ಜತೆ ಮಾತನಾಡುತ್ತ ತಿಳಿಸಿದ್ದಾರೆ.

Advertisement

ಮೊದಲ ಕೋವಿಡ್ ಅಲೆಯ ಸಂದರ್ಭದಲ್ಲಿ ದೇಶದ ಆಸ್ಪತ್ರೆಗಳಲ್ಲಿ ಬೆಡ್ ಮತ್ತು ಮೆಡಿಕಲ್ ಸರಬರಾಜು ಸಮಸ್ಯೆಯಿಂದಾಗಿ ಜಾಗತಿಕವಾಗಿ ಗಮನ ಸೆಳೆಯುವಂತಾಗಿತ್ತು. ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಆದರೆ ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೆ ಮೂರನೇ ಅಲೆಗೆ ಆಹ್ವಾನ ನೀಡಿದಂತಾಗಲಿದೆಯೇ ಎಂಬ ಪ್ರಶ್ನೆಯನ್ನು ಒಪ್ಪಿಕೊಂಡ ಡಾ.ಗುಲೇರಿಯಾ ಈ ಬಗ್ಗೆ ಮುಂಜಾಗ್ರತೆ ಅಗತ್ಯ ಎಂದರು.

ಭಾರತದಲ್ಲಿ ಇನ್ನೂ 40 ಕೋಟಿಗೂ ಅಧಿಕ ಮಂದಿ ಕೋವಿಡ್ ಲಸಿಕೆ ಪಡೆಯಲು ಬಾಕಿ ಇದೆ ಎಂಬುದು ಕಳೆದ ವಾರ ಬಿಡುಗಡೆಗೊಳಿಸಿದ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ದೇಶದ ಶೇ.67ರಷ್ಟು ಜನರಿಗೆ ಕೋವಿಡ್ 19 ವ್ಯಾಕ್ಸಿನ್ ನೀಡುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಬೇಕೆಂದು ಸಲಹೆ ನೀಡಲಾಗಿದೆ ಎಂದು ಡಾ.ಗುಲೇರಿಯಾ ತಿಳಿಸಿದ್ದಾರೆ.

ಮೂರನೇ ಕೋವಿಡ್ ಅಲೆ ಯಾವ ಸಂದರ್ಭದಲ್ಲಿ ಬರಬಹುದು ಎಂಬ ಖಚಿತ ಸಮಯದ ಬಗ್ಗೆ ಸ್ಪಷ್ಟತೆ ಇಲ್ಲ. ಮುಂಬರುವ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವುದನ್ನು ಗಮನಿಸಬೇಕಾಗಿದೆ. ಒಂದು ವೇಳೆ ಜನರು ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಲ್ಲದೇ ಹೆಚ್ಚಿನ ಜನರಿಗೆ ಲಸಿಕೆಯನ್ನು ನೀಡಬೇಕಾಗಿದೆ. ಮೂರನೇ ಅಲೆ ವಿಳಂಬವಾಗಿ ಬಂದರೂ ಕೂಡಾ ಇದರ ತೀವ್ರತೆ ಮೊದಲ ಎರಡು ಅಲೆಗಿಂತ ಕಡಿಮೆಯಾಗಿರಲಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next