Advertisement

ವನ್ಯಜೀವಿ ಸಂರಕ್ಷಣೆ ಜಾಗೃತಿ

01:08 PM Oct 04, 2019 | Suhan S |

ಹುಬ್ಬಳ್ಳಿ: ಕಾಡುಗಳ ನಾಶ ಹಾಗೂ ಅತಿಕ್ರಮಣದಿಂದ ಪ್ರಾಣಿಗಳು ಹಾಗೂ ಮಾನವನ ಸಂಘರ್ಷ ಹೆಚ್ಚಾಗುತ್ತಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

Advertisement

ವಿದ್ಯಾನಗರದ ಕೆಎಲ್‌ಇ ತಾಂತ್ರಿಕ ವಿವಿ ಆವರಣದಲ್ಲಿ ಧಾರವಾಡ ಅರಣ್ಯ ವಿಭಾಗದ ಸಹಯೋಗದಲ್ಲಿ ವನ್ಯಜೀವಿಗಳ ಸಂರಕ್ಷಣೆ ಜಾಗೃತಿ ಮೂಡಿಸಲು ಆಯೋಜಿಸಿದ್ದ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಕಾಡು ಪ್ರಾಣಿಗಳು ಹಾಗೂ ಮಾನವರ ಮಧ್ಯದ ಸಂಘರ್ಷ ನೋಡುತ್ತಿದ್ದೇವೆ. ಕಾಡುನಾಶವೇ ಇದಕ್ಕೆ ಕಾರಣವಾಗಿದೆ. ಹಲವು ಪ್ರಾಣಿಗಳು ಹಾಗೂ ಸಸ್ಯ ಪ್ರಬೇಧಗಳು ಕಣ್ಮರೆಯಾಗಿವೆ. ಇನ್ನು ಹಲವು ಅಳಿವಿನಂಚಿನಲ್ಲಿವೆ. ನಾವು ಸಹಬಾಳ್ವೆಯಿಂದ ಜೀವಿಸಬೇಕು ಎಂದರು.

ಉಪ ಅರಣ್ಯಾಧಿಕಾರಿ ಡಿ. ಮಹೇಶಕುಮಾರ ವನ್ಯಜೀವಿಗಳ ಸಂರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಿದರು. ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ| ಅಶೋಕ ಶೆಟ್ಟರ, ದೀಪಾ ಜೆ. ಕಾಂಟ್ರಾಕ್ಟರ್‌, ಶಿವಕುಮಾರ ಗುಣಾರೆ, ಸಂಜಯ ರೊಟ್ಟಿಗವಾಡ, ಮಿನಲ್‌ ಇದ್ದರು. ಅರಣ್ಯ ಅಕಾಡೆಮಿ ಪ್ರಶಿಕ್ಷಣಾರ್ಥಿಗಳು ವನ್ಯಜೀವಿಗಳ ಅಳಿವಿನ ಕುರಿತಾದ ಬೀದಿ ನಾಟಕ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next