Advertisement

ಕಾಡು ಕೃಷಿಗೆ ನರ್ಸರಿ ಬೇಕು

12:30 AM Feb 25, 2019 | |

ತೋಟ ಬೆಳೆಸಲು ಗುಣಮಟ್ಟದ, ವಿಶ್ವಾಸಾರ್ಹ ಸಸಿಗಳು ಬೇಕು. ಮಳೆ ಸುರಿಯುವ ಜೂನ್‌ ಹೊತ್ತಿಗೆ ಅವಸರದಲ್ಲಿ ಸಸಿ ಹುಡುಕಲು ಹೊರಡುವವರು ಸಿಕ್ಕಿದ್ದನ್ನು ನೆಡುತ್ತೇವೆ.  ತಳಿ ಗುಣ ಅರಿತು ನಡೆಯುವುದು ಮುಖ್ಯ, ಸಸ್ಯ ವೈವಿಧ್ಯ ಪೋಷಿಸುವ ಕಾಡು ತೋಟಕ್ಕೆ ಅಗತ್ಯವಿರುವ ನೂರಾರು ಜಾತಿಯ ಸಸಿಗಳ ಹುಡುಕಾಟ ಸುಲಭವೇ ?

Advertisement

ಅಕಾಲಿಕ ಹಲಸು, ಯಾವಾಗ ಬೇಕಾದ್ರೂ ಹಣ್ಣು ತಿನ್ನಬಹುದೆಂದು 20 ವರ್ಷಗಳ ಹಿಂದೆ ನರ್ಸರಿಯವರೊಬ್ಬರು ಸಸಿ ಪರಿಚಯಿಸಿದರು. ಖುಷಿಯಲ್ಲಿ ಒಂದು ಸಸಿ ತಂದು ಅಡಕೆ ತೋಟದಲ್ಲಿ ನಾಟಿ ಮಾಡಿದೆ. ಮರವಾಗಿದೆ, ಯಾವತ್ತೂ ಕಾಯಿ ಬಂದಿಲ್ಲ. ನರ್ಸರಿಗೆ ಹೋದಾಗೆಲ್ಲ ಈ ಸಸಿಯ ಕಥೆ ಹೇಳಿದಾಗ ಅವರು ನಗುತ್ತಾರೆ.  “ಅದು ಬೀಜದ ಸಸಿಯಾಗಿತ್ತು, ಫ‌ಲ ಗುಣ ಖಚಿತವಿಲ್ಲ. ಈಗ ಕಸಿ ಗಿಡದೆ ಒಯ್ಯಬಹುದು’ ಎನ್ನುತ್ತಾರೆ. ಯಾವ ಮರದ ಮಾತು ಮಾರುಕಟ್ಟೆಯಲ್ಲಿ ಗೆಲ್ಲುತ್ತದೋ ಅದನ್ನು ಮಾರಾಟ ಮಾಡಿ ಬದುಕುವುದು ನರ್ಸರಿಗಳ ವ್ಯವಹಾರ ಗುಣ. 15 ವರ್ಷಗಳ ಹಿಂದೆ 150-200 ರೂಪಾಯಿಗೆ ಶೀಘ್ರ ಬೆಳೆಯುವ ತೇಗದ ಸಸಿ ಮಾರಾಟ ನಡೆಯುತ್ತಿತ್ತು. ಲಕ್ಷ ಸಂಪಾದನೆಯ ಕನಸಿನಲ್ಲಿ ಜನ ಸಸಿ ಖರೀದಿಸುತ್ತಿದ್ದರು.  ಸ್ಟೀಯಾ, ವೆನಿಲ್ಲಾ, ಮ್ಯಾಂಜಿಯಂ ಸಸಿ ಮಾರುಕಟ್ಟೆಯೂ ಜೋರಾಗಿತ್ತು. ಅಡಕೆ, ತೆಂಗು, ಕಾಫಿ, ಮಾವು, ಗೇರು, ಕೊಕ್ಕೋ,  ಚಿಕ್ಕು ಸಸಿಗಳು ತೋಟಗಾರಿಕೆಯಲ್ಲಿ ಮಾಮೂಲಾದ್ದರಿಂದ ಈಗಲೂ ಒಂದು ಪ್ರಮಾಣದ ಸಸಿಗಳನ್ನು ನರ್ಸರಿಗಳು ಬೆಳೆಸಿ ಮಾರುತ್ತಿವೆ. 

ಕಾಳು ಮೆಣಸಿಗೆ ಬೆಲೆ ಏರಿದಾಗ, ಗೌರಿ ಹೂವು, ಶತಾವರಿ ಕುರಿತ ಪ್ರಚಾರ ಜೋರಾದಾಗ  ಆ ಸಸ್ಯಾಭಿವೃದ್ಧಿ ಮುಂಚೂಣಿಗೆ ಬಂದಿದೆ. ಮುಸ್ಲಿಂ ರಾಷ್ಟ್ರಗಳು ಎಷ್ಟು ವರ್ಷ ಸುಗಂಧ ದ್ರವ್ಯ ಬಳಸುತ್ತಾರೋ ಅಲ್ಲಿಯವರಿಗೆ ಇದರ ಬೆಲೆ ಇದ್ದೇ ಇರುತ್ತದೆಂದು ‘ಅಗರ್‌ವುಡ್‌’ ಶೂರರ ಭಾಷಣ ಶುರುವಾಯ್ತು.  ಹಳದಿ ಚುಕ್ಕೆ ರೋಗಬಾಧಿತ ತೋಟಗಳಿಗೆ ಯೋಗ್ಯವೆಂದು ಸಸಿ ಮಾರಾಟ ಕಂಪನಿ ಮಾಹಿತಿ ಪತ್ರ ಪ್ರಕಟಿಸಿತು. ಚಿಕ್ಕಮಗಳೂರು, ದಕ್ಷಿಣ ಕನ್ನಡದ ಹಲವು ತೋಟಿಗರು ಅಗರವುಡ್‌ ಸಸಿ ಒಯ್ದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಮೂರು ತಾಲೂಕುಗಳಲ್ಲಿ  ಲಕ್ಷಾಂತರ ಸಸಿಗಳನ್ನು ಅಡಕೆ ತೋಟದಲ್ಲಿ ಬೆಳೆಸಲಾಯ್ತು. ಅಗರ್‌ ಉತ್ಪಾದನೆ ಶುರುವಾಯೆ¤à ? ಹುಡುಕುತ್ತ ಹೋದರೆ ತಲೆಬುಡವಿಲ್ಲದ ಬ್ಲೇಡ್‌ ಕಂಪನಿಗಳ ಪ್ರಚಾರ ಪತ್ರ, ವಿಡಿಯೋಗಳು ಜಾಸ್ತಿ ಸಿಗುತ್ತವೆ. ದಶಕಗಳ ನಂತರದಲ್ಲಿ ನೆಲದಲ್ಲಿ ಗೆದ್ದವರು ಯಾರು ? ಪ್ರಶ್ನೆ ಉಳಿದಿದೆ.  ಅಂತಜಾìಲದ ಮಾಹಿತಿ ಓದಿಕೊಂಡು ಸಸಿ ಮಾರಾಟಕ್ಕೆ ಭಾಷಣ ಹೊಡೆಯಬಹುದು, ಅಗರ್‌ ಉತ್ಪಾದನೆ ಕಷ್ಟವೆಂದು  ಅಗರ್‌ವುಡ್‌ ಸಾರುತ್ತಿವೆ.  ಸಸಿ ನೆಟ್ಟು ನಿಶ್ಚಿತ ಕೃಷಿ ಅನುಭವದ ಬಳಿಕ ಮುಂದುವರಿಯಲು ಯೋಚಿಸುವ ಬದಲು ವಿವೇಚನೆ ಇಲ್ಲದೇ ಸಾವಿರಾರು ಸಸಿ ನೆಟ್ಟವರು ಹಣ ಕಳೆದುಕೊಂಡು ಮರ ಕತ್ತರಿಸಿ ನಾಶಪಡಿಸಲು ಆರಂಭಿಸಿದ್ದಾರೆ. 

ಸರಿ ಸುಮಾರು 20 ವರ್ಷಗಳಿಂದ ರಾಜ್ಯದ  ಸಸಿ ಮಾರಾಟದ ವೈಖರಿ ಗಮನಿಸಿದರೆ ಹಲವು ಸಂಗತಿ ಕಾಣಿಸುತ್ತವೆ. ಕೃಷಿ ವಿಶ್ವವಿದ್ಯಾಲಯಗಳು ಬಿಡುಗಡೆಗೊಳಿಸಿದ ನುಗ್ಗೆ, ಸಪೋಟ, ನೆಲ್ಲಿ, ಲಿಂಬು,  ಕರಿಬೇವು ಮುಂತಾದವು ಅಲ್ಲಿನ ಸುತ್ತಲಿನ ನರ್ಸರಿಗಳಲ್ಲಿ ದೊರೆಯುತ್ತವೆ. ಪತ್ರಿಕೆ, ಟಿವಿ ಗಳಲ್ಲಿ ಪ್ರಚಾರ ಪಡೆದ ಸಸ್ಯಗಳಿಗೆ ಖಾಸಗಿ ನರ್ಸರಿಗಳಲ್ಲಿ ವಿಶೇಷ ಸ್ಥಾನವಿದೆ. ಸರಕಾರದ ಅರಣ್ಯ ನೀತಿಗಳಲ್ಲಿ ಬದಲಾವಣೆಯಾಗಿ ಶ್ರೀಗಂಧ ಕೃಷಿಗೆ ಮಹತ್ವ ದೊರಕಿದಾಗ ಗಂಧ ಮೆರೆಯುತ್ತಿದೆ. ನಾವು ಒಂದು ಕಾಲದಲ್ಲಿ ಪರಿಚಯಸ್ಥರ, ಸಂಬಂಧಿಕರ ಮನೆಗಳಿಗೆ ಹೋದಾಗ ಉತ್ತಮ ಮಾವು, ಹಲಸಿನ ಬೀಜ ತಂದು ನೆಡುತ್ತಿದ್ದವು. ಹೂ ಗಿಡಗಳ ಟೊಂಗೆ ತಂದು ಊರುತ್ತಿದ್ದೆವು. ದಶಕಗಳೀಚೆಗೆ ಸಸ್ಯ ತಳಿ ಪ್ರಸರಣಕ್ಕೆ ಇಂದು ವ್ಯಾಟ್ಸಪ್‌, ವಿಡಿಯೋ, ಪತ್ರಿಕೆ, ಸಂಚಾರ ಸಾರಿಗೆ ವ್ಯವಸ್ಥೆಗಳು ನೆರವಾಗಿವೆ. ಸಸ್ಯ ಗುಣ ಅರಿತು ಮುನ್ನಡೆಯುವ ಬದಲು ಸಮೂಹ ಸನ್ನಿಯಂತೆ ಕೆಲವು ಸಸ್ಯಗಳ ಹಿಂದೆ ಓಟ ಸಾಗಿದೆ. ಒಮ್ಮೆ ಸಸಿ ನೆಟ್ಟು  ಸೋತವರು ಎಲ್ಲ ಸಸಿಗಳನ್ನು ಅನುಮಾನದಿಂದ ನೋಡುವ ವಾತಾವರಣ ಸೃಷ್ಟಿಯಾಗಿದೆ. ಪ್ರಚಾರ, ಜಾಹೀರಾತುಗಳ ಅಬ್ಬರದಲ್ಲಿ ಅನುಭವದ ಧ್ವನಿಗಳು ಕ್ಷೀಣವಾಗಿವೆ. 

ಗುಣಮಟ್ಟದ ಸಸಿಗಳು ಏಲ್ಲಿವೆಯೆಂದು ಹುಡುಕಲು ಪ್ರವಾಸ ವೀಕ್ಷಣೆ ಅಗತ್ಯವಿದೆ. ಕರ್ನಾಟಕ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರಗಳಲ್ಲಿ ಉಪ್ಪಾಗೆ, ಮುರುಗಲು, ಬೇರು ಹಲಸು, ಹಲಗೆ, ಸಳ್ಳೆ, ರಂಜಲು, ನೇರಳೆ, ಗೇರು, ಮಾವು ಮುಂತಾದ ಕಾಡು ಹಣ್ಣು, ಔಷಧ ಸಸ್ಯಗಳು ದೊರೆಯುತ್ತವೆ. ಯಾವಾಗ ಸಸಿ ನೋಡಲು ಹೋಗಬೇಕು ? ಎಲ್ಲಿಂದ ಸಸಿ ಪಡೆಯಬೇಕೆಂಬುದಕ್ಕೆ ಜಾಣ್ಮೆ ಬೇಕು. ನಿರಂತರ ಸಸ್ಯ ಪ್ರೇಮಿಗಳ ಸಂಪರ್ಕ ಒಂದು ದಾರಿ ತೋರಿಸಬಹುದು. ದಕ್ಷಿಣ ಕನ್ನಡದ ಬೆಳ್ತಂಗಡಿಯ ಅನಿಲ್‌  ಬಳಂಜರು, ಪಲ್ಗುಣಿ ನದಿ ಪಕ್ಕದ ಜಮೀನಿನಲ್ಲಿ ಮಲೇಶಿಯಾ, ಥೈಲ್ಯಾಂಡ್‌, ಫಿಲಿಫೈನ್ಸ್‌, ಬ್ರಿಜಿಲ್‌ ದೇಶಗಳ 400 ಕ್ಕೂ ಹೆಚ್ಚು ಜಾತಿಯ ಹಣ್ಣಿನ ಗಿಡಗಳನ್ನು ಬೆಳೆಸಿದವರು.  ಸುಮಾರು 65 ತಳಿಯ ಹಲಸು, 52 ತಳಿಯ ಮಾವು, 30 ವಿಧದ  ಪೇರಲೆ, 25 ತಳಿಯ ಲಿಂಬು ಸೇರಿದಂತೆ ಸಸ್ಯ ವೈವಿಧ್ಯದ ಸೊಬಗು ಅಲ್ಲಿದೆ.  ಇವರಲ್ಲಿ ಸಸ್ಯ ನರ್ಸರಿ ಇಲ್ಲ, ಆದರೆ ಅಪಾರ ಅನುಭವ ಜಾnನವಿದೆ. ಹೀಗೆ ಬೆಳೆಸಿ ಬಲ್ಲವರಿಂದ ಮಾಹಿತಿ ಸಂಗ್ರಹಿಸುತ್ತ ತೋಟಕ್ಕೆ ಹೊಸ ಹೊಸ ಸಸ್ಯ ಸೇರಿಸುವ ಅವಕಾಶವಿದೆ.

Advertisement

ಒಮ್ಮೆ  ಸ್ನೇಹಿತರೊಬ್ಬರು  ಸಕ್ಕರೆ ಕಾಯಿಲೆಗೆ ಮದ್ದೆಂದು ದೇಶದ ಆಲೆºàಸಿಯಾ ಸಸ್ಯ ನೀಡಿದ್ದರು. ಅಡಕೆ ತೋಟದಲ್ಲಿ ನೆಟ್ಟು ಎರಡು ವರ್ಷಗಳಾಗಿವೆ, ಸಸಿ ಸೊಗಸಾಗಿ ಬೆಳೆದಿದೆ. ಸಸಿಗಳ ನೆರಳು, ಬೆಳಕಿನ  ಅಗತ್ಯ ಅರ್ಥವಾಗಲು ಇಂಥ ಅನುಭವ ಬೇಕಾಗುತ್ತದೆ. ತೋಟವನ್ನು ಸಸ್ಯ ವೈವಿಧ್ಯಮಯವಾಗಿಸಲು ಪ್ರಯತ್ನ ಬೇಕು, ಸಸಿ ಓದುತ್ತ ಬೆಳೆಸುವ ಕಾರ್ಯ ಮುಂದುವರಿಯಬೇಕು. ಸೋಲುತ್ತ, ಗೆಲ್ಲುತ್ತ ಕಲಿಯಬೇಕು. ಬೆಳೆಸಿದ ಸಸಿ ಬಳಸಲು ಗೊತ್ತಿರಬೇಕು.  ಆಗ ಆಹಾರ- ಆರೋಗ್ಯ ಸುಸ್ಥಿರತೆಗೆ ಕಾಡು ತೋಟ ಅನುಕೂಲವಾಗುತ್ತದೆ. ಸಸ್ಯ ವೈವಿಧ್ಯ ಪೋಷಿಸುವವರ ಸಂಖ್ಯೆ ಹೆಚ್ಚಿದಂತೆ ನರ್ಸರಿಗಳ ಸಸ್ಯಾಭಿವೃದ್ಧಿ  ಶೈಲಿ ಬದಲಾಗುತ್ತವೆ. 

ಹುಡುಕಾಟದ ಹಾದಿ…
ಕಾಡು ತೋಟದ ಅಭಿವೃದ್ಧಿ ಒಮ್ಮೆಗೆ ನಡೆಯುವುದಲ್ಲ. ಪ್ರತಿ ವರ್ಷ ಒಂದಿಷ್ಟು ಸಸಿ ಕೂಡಿಸ ಬೇಕು. ಮಣ್ಣು, ಪರಿಸರಕ್ಕೆ ಯೋಗ್ಯ ಸಸಿ ಗುರುತಿಸುತ್ತ ಕೃಷಿಕರ ಜಾnನದ ಜೊತೆಗೆ ತೋಟ ಬೆಳೆಯಬೇಕು. ಎರಡು ಎಕರೆ ಕಾಡು ತೋಟ ರೂಪಿಸುವವರಿಗೆ ಒಂದೇ ಜಾತಿಯ ಜಾಸ್ತಿ ಸಸ್ಯ ಬೇಕಾಗುವುದಿಲ್ಲ. ಮುಖ್ಯ ವೃಕ್ಷವಾಗಿ ಅಡಕೆ, ತೆಂಗು, ಮಾವು, ಗೇರು ಬೆಳೆದು ಅವುಗಳ ನಡುವೆ ಬೆಳೆಯುವ ಸಸ್ಯ ನೆಡಬೇಕಾಗುತ್ತದೆ. ವಿಶೇಷ ಹಣ್ಣು, ಔಷಧ, ಅಡುಗೆಗೆ ಅಗತ್ಯ ವೃಕ್ಷಗಳು ಬೇಕು. ಇವು ಯಾವುದೋ ಒಂದು ನರ್ಸರಿಗಳಲ್ಲಿ ಸಿಗುವುದಿಲ್ಲ. ಹಲಸು, ನೇರಳೆ ತಳಿ ಹುಡುಕಿ ರಿಪ್ಪನ್‌ಪೇಟೆಯ ಅನಂತಮೂರ್ತಿ ಜವಳಿಯವರಲ್ಲಿ ಕೇಳಬೇಕಾಗುತ್ತದೆ. ಬಯಲು ಸೀಮೆಯ ಹೆಬ್ಬೇವು ಹುಡುಕಾಟಕ್ಕೆ ತಿಪಟೂರಿನ ಕಾಂತರಾಜರಲ್ಲಿ ಹೋಗಬೇಕಾದೀತು. ಔಷಧ ಸಸ್ಯ ಹುಡುಕುತ್ತ ಚೆರ್ಕಾಡಿ ಸನಿಹದ ಗೋಳಿಯವರಲ್ಲಿ, ಉಷ್ಣವಲಯದ ಹಣ್ಣಿನ ಗಿಡಗಳಿಗೆ ಮೂಡಬಿದ್ರೆಯ ಸೋನ್ಸ್‌ ಫಾರ್‌¾ ದಾರಿ ಹಿಡಿಯಬೇಕು. ಸಾಗರದ ಸಹ್ಯಾದ್ರಿ 
ನರ್ಸರಿಯಲ್ಲಿ ದಾಲಿcನ್ನಿ, ಕಾಳುಮೆಣಸು, ಮಹಾಗನಿ ಮುಂತಾದವು ಸಿಗಬಹುದು. ದೇವನಹಳ್ಳಿಯ ಚಕ್ಕೋತಕ್ಕೆ ಶಿವನಾಪುರ ರಮೇಶ್‌, ಮಹಾರಾಷ್ಟ್ರ ಸೀಮೆಯ ಮಾವು, ಗೇರು ತಳಿಗಳಿಗೆ ಮುಂಡಗೋಡಿನ ಮಳಗಿಯಲ್ಲಿ ಹುಡುಕಾಟ, ಅಪ್ಪೆ ತಳಿಗಳನ್ನು ಮಲೆನಾಡಿನ ಹಲವು ನರ್ಸರಿಗಳು ಬೆಳೆಸುತ್ತಿವೆ. 

–  ಶಿವಾನಂದ ಕಳವೆ

ಮುಂದಿನ ವಾರ- ಅಮ್ಮ ಹೇಳದ ನೂರೆಂಟು ಅಡುಗೆಗಳು

Advertisement

Udayavani is now on Telegram. Click here to join our channel and stay updated with the latest news.

Next