Advertisement

Chikkamagaluru ಕಾಫಿತೋಟದಲ್ಲಿ ಬೀಡು ಬಿಟ್ಟ ಕಾಡಾನೆ ಹಿಂಡು; ಗ್ರಾಮಸ್ಥರ ಆತಂಕ!

06:59 PM Aug 01, 2023 | Team Udayavani |

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಗೋಣಿಬೀಡು ಸಮೀಪದ ಜಿ.ಹೊಸಳ್ಳಿ ಗ್ರಾಮದಲ್ಲಿರುವ ಕಾಫಿತೋಟದಲ್ಲಿ ಏಕಕಾಲದಲ್ಲಿ 16 ಕಾಡಾನೆಗಳು ಬೀಡು ಬಿಟ್ಟಿವೆ.

Advertisement

ಕಳೆದ ಅನೇಕ ದಿನಗಳಿಂದ ಜಿ.ಹೊಸಳ್ಳಿ, ಅರೇಹಳ್ಳಿ, ಚೀಕನಹಳ್ಳಿ, ಮಾಕೋನಹಳ್ಳಿ, ಮಲಸಾವರ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಕಾಡಾನೆಗಳು ಸುತ್ತು ಹೊಡೆಯುತ್ತಿವೆ.

ಕಾಡಾನೆ ಗುಂಪಿನಲ್ಲಿ ಮರಿಯಾನೆಗಳು ಇದ್ದು ಮಾನವ ಸಂಘರ್ಷಕ್ಕೆ ಕಾರಣವಾಗಿದೆ. ಕಾಡಾನೆಗಳ ಹಿಂಡಿನಿಂದ ಯಾವಾಗ, ಎಲ್ಲಿ, ಹೇಗೆ ದಾಳಿ ಮಾಡ್ತಾವೋ ಎಂದು ಗ್ರಾಮಸ್ಥರ ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಈ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆನಾಶವಾಗಿದೆ.

ಅಧಿಕಾರಿಗಳು ಓಡಿಸೋ ಪ್ರಯತ್ನ ಮಾಡಿದರೂ ಜಗ್ಗದ ಕಾಡಾನೆ. ಕಾಡಾನೆಗಳು ಕಾಫಿತೋಟದಲ್ಲೇ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಿ ನಿಲ್ಲುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next