ರಾಮನಗರ: ವನ್ಯಜೀವಿ ವಲಯದಿಂದ ನಾಡಿ ನತ್ತ ಬಂದು ಹಾವಳಿ ಎಬ್ಬಿಸುತ್ತಿರುವ ಗಜಪಡೆಯ ನಿಯಂತ್ರಣಕ್ಕೆ ಇದೀಗ ಅರಣ್ಯ ಇಲಾಖೆಯ ಸಿಬ್ಬಂದಿ ಸೌರಬೇಲಿ ನಿರ್ಮಾಣಕ್ಕೆ ಮೊರೆ ಹೋಗಿದ್ದು, ಈಗಾಗಲೇ ಜಿಲ್ಲೆಯಲ್ಲಿ 20 ಕಿ.ಮೀ. ನಷ್ಟು ಸೌರಬೇಲಿಯನ್ನು ಅಳವಡಿಸಿರುವ ಅರಣ್ಯ ಇಲಾಖೆ. ಇದರಿಂದ ಕಾಡಾನೆ ಉಪಟಳ ನಿಯಂತ್ರಣಕ್ಕೆ ಬಂದಿದೆ ಎಂದು ನಿಟ್ಟುಸಿರು ಬಿಟ್ಟಿದೆ.
ಈಗಾಗಲೇ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನ ಪಟ್ಟು ವಿಫಲ ಗೊಂಡಿರುವ ಅರಣ್ಯ ಇಲಾಖೆ ಸೌರಬೇಲಿಯನ್ನು ಅಳವಡಿಸಿದ್ದು, ಇದರಿಂದ ಧನಾತ್ಮಕ ಫಲಿತಾಂಶ ಲಭ್ಯವಾಗಿರುವ ಕಾರಣ ಜಿಲ್ಲೆಯಲ್ಲಿ ಇತರ ಭಾಗ ದಲ್ಲೂ ಸೌರಬೇಲಿ ಅಳವಡಿಸಲು ಮುಂದಾಗಿದೆ.
ಜಿಲ್ಲೆಯ ಮೀಸಲು ಅರಣ್ಯದಲ್ಲಿ ಬೇಲಿ ಅಳವಡಿಕೆ: ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಸಣ್ಣ ಪ್ರಮಾಣದ ರಾಜ್ಯವಲಯದ ಸಾಮಾನ್ಯ ಅರಣ್ಯ ಪ್ರದೇಶಗಳತ್ತ ಆಗಮಿಸುವ ಕಾಡಾನೆಗಳು ಅಕ್ಕಪಕ್ಕದ ಗ್ರಾಮಗಳಲ್ಲಿ ದಾಂಧಲೆ ಎಬ್ಬಿಸುತ್ತಿವೆ. ವನ್ಯಜೀವಿ ವಲಯದಿಂದ ಹೊರಬರದಂತೆ ಕಾಡಾನೆಗಳನ್ನು ತಡೆಹಿಡಿಯಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಗ್ಗಂಟಾಗೇ ಉಳಿದಿ ರುವ ಹಿನ್ನೆಲೆಯಲ್ಲಿ ವಲಯ ಅರಣ್ಯಪ್ರದೇಶಕ್ಕೆ ಸೋಲಾರ್ ಪೆನ್ಸಿಂಗ್ ಅಳವಡಿಕೆ ಕಾರ್ಯ ಕೈಗೊಂಡಿದ್ದಾರೆ. ಈಗಾಗಲೇ ಚಿಕ್ಕಮಣ್ಣುಗುಡ್ಡೆ ಮತ್ತು ತೆಂಗಿನ ಕಲ್ಲು ಅರಣ್ಯ ಪ್ರದೇಶದಲ್ಲಿ ಸೋಲಾರ್ ಬೇಲಿ ಅಳವಡಿಕೆ ಕಾರ್ಯವನ್ನು ಕೈಗೊಳ್ಳಲಾಗಿದೆ.
ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ 12.250 ಕಿ.ಮೀ., ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ 8 ಕಿ. ಮೀ. ದೂರ ಸೋಲಾರ್ ಬೇಲಿ ಅಳವಡಿಸ ಲಾಗುತ್ತಿದ್ದು, ರಾಜ್ಯ ಮೀಸಲು ಅರಣ್ಯ ವಲಯದಲ್ಲಿ 50 ಕಿ.ಮೀ. ದೂರ ಸೋಲಾರ್ ಬೇಲಿಯನ್ನು ಅಳವಡಿಸಿದ್ದೇ ಆದಲ್ಲಿ ಕಾಡಾನೆ ಹಾವಳಿ ಶೇ.90 ರಷ್ಟು ನಿಯಂತ್ರಣಗೊಳ್ಳಲಿದೆ ಎಂಬ ವಿಶ್ವಾಸ ಅರಣ್ಯ ಇಲಾಖೆಯದ್ದಾಗಿದೆ. ಕಾಡಾನೆ ಹಾವಳಿನಿಯಂತ್ರಣ: ಈಗಾಗಲೇ ಚಿಕ್ಕ ಮಣ್ಣು ಗುಡ್ಡೆ ಅರಣ್ಯ ಪ್ರದೇಶಕ್ಕೆ 12.250 ಕಿ. ಮೀ.ನಷ್ಟು ಸೋಲಾರ್ ಬೇಲಿ ಅಳವಡಿಕೆ ಮಾಡಿದ್ದು, ಬೇಲಿ ಅಳವಡಿಕೆಯಾದ ಬಳಿಕ ಈಭಾಗಕ್ಕೆ ಕಾಡಾನೆಗಳು ಬರುವುದು ಕಡಿಮೆ ಯಾಗಿದ್ದು, ಕಾಡಾನೆ ಹಾವಳಿ ಸಂಪೂರ್ಣ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಇಡೀ ಅರಣ್ಯ ಪ್ರದೇಶಕ್ಕೆ ಸೋಲಾರ್ ಬೇಲಿ ಅಳವಡಿಸಲು ಉದ್ದೇಶಿಸಿದ್ದಾರೆ.
ಏನಿದು ಸೌರ ಬೇಲಿ: ಕಾಡಂಚಿನಲ್ಲಿ ಕಂಬಗಳನ್ನು ನೆಟ್ಟು ಸಣ್ಣದಾಗಿ ತಂತಿಗಳನ್ನು ಅಳವಡಿಸ ಲಾಗು ವುದು. ಹೀಗೆ ಅಳವಡಿಸುವ ತಂತಿಗಳಿಗೆ ಸೌರ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುವುದು. ಈ ಬೇಲಿಯನ್ನು ದಾಟಲು ಆನೆಗಳು ಮುಂದಾಗ ಅವುಗಳಿಗೆ ವಿದ್ಯುತ್ ಶಾಕ್ ತಗುಲುತ್ತದೆ. ಇದರಿಂದ ಭಯಗೊಳ್ಳುವ ಆನೆಗಳು ಮತ್ತೆ ವನ್ಯಜೀವಿ ವಲಯದತ್ತ ಹಿಂದಿರುಗುತ್ತವೆ. ಇನ್ನು ಸೋಲಾರ್ ಬೇಲಿಯಲ್ಲಿ ಪ್ರವಹಿಸುವ ವಿದ್ಯುತ್ ಬಿಟ್ಟು ಬಿಟ್ಟು ಪ್ರಸರಣವಾಗುವ ಆನೆ ಸೇರಿದಂತೆ ಇತರೆ ಯಾವುದೇ ವನ್ಯಜೀವಿಗಳ ಜೀವಕ್ಕೆ ಅಪಾಯಕಾರಿಯಲ್ಲ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಮಾಹಿತಿ.
ಪೂರ್ಣಗೊಳ್ಳದ ರೈಲ್ವೆ ಬ್ಯಾರಿಕೇಡ್: ಕಾವೇರಿ ವನ್ಯಜೀವಿ ವಲಯದಿಂದ ಆನೆಗಳು ಹೊರ ಬರುವುದನ್ನು ತಡೆಯುವುದಕ್ಕಾಗಿ ರೈಲ್ವೆ ಕಂಬಿ ಯನ್ನು ಬಳಸಿ ಆನೆ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿ ಕನಕಪುರ ತಾಲೂಕಿನ ದುಂತೂರು ಹಾಗೂ ಸುತ್ತಮುತ್ತಲಿನ ಗ್ರಾಮ ಗಳಲ್ಲಿ ಸುಮಾರು 4 ಕಿ.ಮೀ. ನಷ್ಟು ಬಾಕಿ ಉಳಿದಿದೆ. ಕಾಡಾನೆಗಳು ಇತ್ತ ಆಗಮಿಸಲು ಇಲ್ಲಿ ಬ್ಯಾರಿಕೇಡ್ ಇಲ್ಲದಿ ರುವುದೇ ಕಾರಣವಾಗಿದ್ದು, ಈ ಭಾಗದಿಂದ ಕಾಡಾನೆಗಲು ಹೊರಗೆ ಬರುತ್ತಿವೆ. ಈ ಸಮಸ್ಯೆ ಕಗ್ಗಂಟಾಗೇ ಉಳಿದಿರುವ ಹಿನ್ನೆಲೆಯಲ್ಲಿ ರಾಜ್ಯ ವಲಯದ ಸಾಮಾನ್ಯ ಅರಣ್ಯಕ್ಕೆ ಸೋಲಾರ್ ಬೇಲಿ ಅಳವಡಿಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
ರಾಜ್ಯವಲಯದ ಅರಣ್ಯ ಪ್ರದೇಶಕ್ಕೆ ಸೇರಿದ ತೆಂಗಿನಕಲ್ಲು ಹಾಗೂ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ 20 ಕಿ.ಮೀ. ನಷ್ಟು ಅರಣ್ಯ ಪ್ರದೇಶಕ್ಕೆ ಸೌರ ಬೇಲಿ ಅಳವಡಿಸ ಲಾಗಿದ್ದು, ಈ ಭಾಗದಲ್ಲಿ ಕಾಡಾನೆ ಹಾವಳಿ ಕಡಿಮೆ ಯಾಗಿದೆ. ಬಾಕಿ ಇರುವ 30 ಕಿ.ಮೀ. ಅಳವಡಿಸಿದ್ದೇ ಆದಲ್ಲಿ ಕಾಡಾನೆ ಹಾವಳಿಯನ್ನು ಶೇ.90ರಷ್ಟು ನಿಯಂತ್ರಿಸಬಹುದು
. – ಕಿರಣ್‌ಕುಮಾರ್, ವಲಯ ಅರಣ್ಯಾಧಿಕಾರಿ, ಚನ್ನಪಟ್ಟಣ