Advertisement

ಬೆಳ್ತಂಗಡಿ: ಮತ್ತೆ ನಾಡಿಗೆ ಕಾಲಿಟ್ಟ ಒಂಟಿ ಸಲಗ

02:03 AM Mar 27, 2022 | Team Udayavani |

ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಆಸುಪಾಸಿನ ಚಿಬಿದ್ರೆ, ತೋಟತ್ತಾಡಿ, ಕಡಿರುದ್ಯಾವರ ಗ್ರಾಮಗಳಲ್ಲಿ ಗುರುವಾರ ಮತ್ತು ಶುಕ್ರವಾರ ರಾತ್ರಿ ಒಂಟಿ ಸಲಗ ಸಂಚಾರ ನಡೆಸಿದೆ.

Advertisement

ಕಡಿರುದ್ಯಾವರ ಗ್ರಾಮದ ಹೇಡ್ಯ ಸಮೀಪದ ಲಿಜೋ ಎಂಬವರ ತೋಟದಲ್ಲಿ ಫಲ ಬರುವ 5 ತೆಂಗಿನ ಮರಗಳನ್ನು ಒಂಟಿ ಸಲಗ ಮುರಿದುಹಾಕಿದೆ.

ಗುರುವಾರ ರಾತ್ರಿ ತೋಟತ್ತಾಡಿ, ಚಿಬಿದ್ರೆ ಮಾಕಳ ಮೊದಲಾದ ಪ್ರದೇಶಗಳಲ್ಲಿ ಸಂಚಾರ ನಡೆಸಿದ ಕಾಡಾನೆ ಬಳಿಕ ಇಲ್ಲಿಯ ಖಾಸಗಿ ನರ್ಸರಿ ಯೊಂದರಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗಿ ಮೃತ್ಯುಂಜಯ ನದಿದಾಟಿ ನಳೀಲು ಕಡೆ ಹೋಗಿರುವ ಕುರುಹುಗಳು ಪತ್ತೆಯಾಗಿವೆ.

ಶುಕ್ರವಾರ ಕಡಿರುದ್ಯಾವರ ಗ್ರಾಮದ ಹೇಡ್ಯ, ಜೋಡುನೆರಳು ಮೊದಲಾದ ಪ್ರದೇಶಗಳಲ್ಲಿ ಸಂಚರಿಸಿ ಬಳಿಕ ಲಿಜೋ ಅವರ ತೋಟಕ್ಕೆ ನುಗ್ಗಿ ಹಾನಿ ಉಂಟುಮಾಡಿದೆ. ಫೆಬ್ರವರಿ ಮತ್ತು ಮಾರ್ಚ್‌ ಪ್ರಥಮ ವಾರ ಮುಂಡಾಜೆ ಪ್ರದೇಶದ ದುಂಬೆಟ್ಟುವಿನಲ್ಲಿ ಸತತ 18 ದಿನಗಳ ಕಾಲ ಕಾಡಾನೆ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಉಂಟುಮಾಡಿತ್ತು.

ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆಯ ಡಿಎಫ್‌ಒ ಡಾ| ದಿನೇಶ್‌ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ನಾಗರಹೊಳೆಯಿಂದ ಪರಿಣತ ಕಾವಾಡಿಗಳನ್ನು ಕರೆಸಿತ್ತು. ಅವರು ಆಗಮಿಸಿದ ಬಳಿಕ ಕಾಡಾನೆ ಸಂಚಾರ ಕಂಡುಬರದ ಕಾರಣ ಹಿಂದಿರುಗಿದ್ದರು. ಅವರು ಮರಳಿದ 10 ದಿನಗಳ ಬಳಿಕ ಕಾಡಾನೆ ಮತ್ತೆ ಕಂಡುಬಂದಿದೆ.

Advertisement

ಕಾಡಾನೆ ದಾಳಿ: ಮಹಿಳೆ ಸಾವು
ಆಲ್ದೂರು: ಕಾಫಿತೋಟದಲ್ಲಿ ಕಾಳುಮೆಣಸು ಕಟಾವು ಮಾಡುತ್ತಿದ್ದ ಕಾರ್ಮಿಕರ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಸಮೀಪದ ಕೆಳಗೂರು ಗ್ರಾಮದಲ್ಲಿ ನಡೆದಿದೆ.

ಆನೆ ದಾಳಿಗೆ ಸಿಲುಕಿದ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಲ್ಲದೇವರ ತಾಂಡಾದ ಸರೋಜಬಾಯಿ (45) ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪಕ್ಕದ ತೋಟದಲ್ಲೇ ಕೆಲಸ ಮಾಡುತ್ತಿದ್ದ ಮತ್ತೂಬ್ಬ ಕಾರ್ಮಿಕ ಚಿಕ್ಕಮಗಳೂರು ಜಿಲ್ಲೆ ಶಿರವಾಸೆಯ ದುಗ್ಗಪ್ಪ ಅವರ ಮೇಲೂ ಆನೆ ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ಅವರನ್ನು ಚಿಕ್ಕಮಗಳೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಅಭ್ಯತ್‌ ಮಂಗಲದಲ್ಲಿ ಕಾಡಾನೆಗಳ ದಾಳಿ
2ನೇ ಬೆಳೆ ನಾಶ, ಕಾಫಿ ಹೂವುಗಳು ನಷ್ಟ
ಮಡಿಕೇರಿ: ಅಭ್ಯತ್‌ ಮಂಗಲದಲ್ಲಿ ಕಾಡಾನೆಗಳ ದಾಂಧಲೆ ಮಿತಿ ಮೀರಿದ್ದು, 2ನೇ ಬೆಳೆ ಮತ್ತು ಕಾಫಿ ಹೂವುಗಳು ನಷ್ಟವಾಗಿವೆ.

ಒಂದು ವಾರದಿಂದ ಈ ಭಾಗದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ಸ್ಥಳೀಯ ಕೃಷಿಕ ಅಂಚೆಮನೆ ಸುಧಾಕರ್‌ ಎಂಬವವರ ಗದ್ದೆಗೆ ಲಗ್ಗೆ ಇರಿಸಿದ ಕಾಡಾನೆಗಳು 2ನೇ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಹೈನುಗಾರಿಕೆಯಲ್ಲಿ ತೊಡಗಿರುವ ಇವರು ಹಸುಗಳಿಗೆ ಆಹಾರಕ್ಕಾಗಿ ಬೆಳೆ ಬೆಳೆದಿದ್ದರು. ಅದು ಕಾಡಾನೆ ಹೊಟ್ಟೆ ಸೇರಿದ್ದು, ಅಪಾರ ನಷ್ಟ ಉಂಟಾಗಿದೆ.

ಅರಣ್ಯ ಸಿಬಂದಿ ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸುವ ಸಂದರ್ಭ ಕಾಫಿ ತೋಟಗಳಿಗೆ ಹಾನಿಯಾಗುತ್ತಿದೆ. ಭವಿಷ್ಯದ ಫ‌ಸಲಿನ ಕಾಫಿ ಹೂವುಗಳು ನೆಲಕಚ್ಚುತ್ತಿವೆ. ಗದ್ದೆ ಮತ್ತು ತೋಟಗಳು ಕಾಡಾನೆಗಳ ದಾಳಿಗೆ ಸಿಲುಕುತ್ತಿರುವುದರಿಂದ ಬೆಳೆಗಾರರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ತತ್‌ಕ್ಷಣ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಮತ್ತು ಕಾಡಾನೆಗಳ ಉಪಟಳ ತಡೆಯಲು ಶಾಶ್ವತ ಯೋಜನೆ ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಡಿಕೆ ತೋಟಕ್ಕೆ ಕಾಡಾನೆ ದಾಳಿ
ತೀರ್ಥಹಳ್ಳಿ: ಮಂಡಗದ್ದೆ ಹೋಬಳಿಯ ಸಿಂಗನಬಿದರೆ ಗ್ರಾ.ಪಂ. ವ್ಯಾಪ್ತಿಯ ಸುತ್ತಮುತ್ತ ಕಾಡಾನೆಗಳು ಅನೇಕ ರೈತರ ತೋಟಗಳಿಗೆ ನುಗ್ಗಿ ಬಾಳೆ ಮತ್ತು ಅಡಿಕೆ ಮರಗಳನ್ನು ನಾಶ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next