ರಾಮನಗರ: ಬೆಳ್ಳಂಬೆಳಗ್ಗೆ ಗ್ರಾಮದ ಕೆರೆಯಲ್ಲಿ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ಜನರು ಆತಂಕಕ್ಕೆ ಒಳಗಾದ ಘಟನೆ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಸಂತೆ ಮೊಗೇನಹಳ್ಳಿ ಗ್ರಾಮದ ಕೆರೆಯಲ್ಲಿ ಬೆಳಿಗ್ಗೆ ಕಾಣಿಸಿಕೊಂಡಿದೆ.
ಕನಕಪುರದಲ್ಲಿ ಕಳೆದ ಒಂದು ತಿಂಗಳಲ್ಲಿ ಒಂಟಿ ಸಲಗ ದಾಳಿಗೆ ನಾಲ್ವರು ಬಲಿಯಾಗಿದ್ದು, ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳದಿಂದ ಜೀವ ಭಯದಲ್ಲೇ ಜೀವನ ನಡೆಸುತ್ತಿರೋ ಜಿಲ್ಲೆಯ ಜನರು. ಈ ನಡುವೆ ಜೀವಭಯವಿದ್ದರೂ ಗಜರಾಜನ ಜಲಕ್ರೀಡೆ ನೋಡಲು ಗ್ರಾಮದ ಜನ ಮುಗಿಬಿದ್ದಿದ್ದಾರೆ.
ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ನಾಡಿನತ್ತ ಒಂಟಿ ಸಲಗ ಬಂದಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ. ಒಂದೆಡೆ ಹೊಂಗನೂರು ಮುಖ್ಯ ರಸ್ತೆಗೆ ಸಲಗ ಬಾರದಂತೆ ಪಟಾಕಿ ಸಿಡಿಸುತ್ತಿರೋ ಸಾರ್ವಜನಿಕರು. ಸಂಜೆವರೆಗೂ ಸಲಗ ಕೆರೆಯಲ್ಲಿ ತಂಗುವಂತೆ ಪ್ಲಾನ್ ಮಾಡುತ್ತಿರೋ ಅರಣ್ಯ ಸಿಬ್ಬಂದಿ. ಸಂಜೆ ಬಳಿಕ ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ಸಲಗ ಓಡಿಸಲು ಅರಣ್ಯ ಸಿಬಂದಿ ಉಪಾಯ ಮಾಡಿದ್ದಾರೆ.
ಇದನ್ನೂ ಓದಿ: Vijayapura ಪಾಲಿಕೆ ಚುನಾವಣೆ: ಕಾಂಗ್ರೆಸ್ ನ ಮೆಹಜಮೀನ್, ಬಿಜೆಪಿಯ ರಶ್ಮಿ ನಾಮಪತ್ರ ಸಲ್ಲಿಕೆ