ಚಿಕ್ಕಮಗಳೂರು : ಬೆಳ್ಳಂಬೆಳಗ್ಗೆ ಕಾಡಾನೆಯೊಂದು ಕಾಣಿಸಿಕೊಂಡು ಜನರ ಆತಂಕಕ್ಕೆ ಕಾರಣವಾದ ಪ್ರಸಂಗ ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ನಲ್ಲೂರು ಗ್ರಾಮದ ಬಳಿ ನಡೆದಿದೆ.
ಗ್ರಾಮದ ಸಮೀಪ, ಜಮೀನು, ರಸ್ತೆಗಳಲ್ಲಿ ಕಾಡಾನೆ ಬೆಳಗ್ಗೆ ಓಡಾಟ ನಡೆಸಿ ಸ್ಥಳೀಯರ ಆತಂಕಕ್ಕೆ ಕಾರಣವಾಯಿತು. ಜಮೀನಿನಲ್ಲಿ ಓಡಾಡಿ ಗುಡ್ಡದ ಕಡೆ ಹೆಜ್ಜೆ ಹಾಕಿತು.
ಇದನ್ನೂ ಓದಿ:ಉಡುಪಿ: ಮಗು ಅಪಹರಿಸಿದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು
ಚಿಕ್ಕಮಗಳೂರು ನಗರದಲ್ಲಿ ಸಂಚಾರ ನಡೆಸಿದ ಒಂಟಿ ಸಲಗ ನಗರದ ಕಾಫಿ ಡೇ ಮುಂಭಾಗದ ಎಬಿಸಿ ಕಾಂಪೌಂಡ್ ಗೆ ಕಡೆಗೆ ಧಾವಿಸಿತು. ಸೋಮವಾರ ಬೆಳಗ್ಗೆ ಕಾಡು ಬಿಟ್ಟು ನಾಡು ವೀಕ್ಷಣೆಗೆ ಆಗಮಿಸಿದ ಗಜರಾಜ ನಲ್ಲೂರು, ಉಂಡೇದಾಸರಹಳ್ಳಿ, ಕಲ್ಲದೇವರಹಳ್ಳಿ ಸುತ್ತಮುತ್ತ ಸಂಚಾರ ನಡೆಸಿದೆ. ಸದ್ಯ ಯರೇಹಳ್ಳಿ ಗ್ರಾಮದಲ್ಲಿ ಈ ಒಂಟಿ ಸಲಗ ಬೀಡುಬಿಟ್ಟಿರುವ ಬಗ್ಗೆ ಮಾಹಿತಿ ದೊರೆತಿದೆ.
ಇದನ್ನೂ ಓದಿ:ಇಬ್ಬರು ಉಗ್ರರ ಬಂಧನ, ಭಾರೀ ಸಂಚು ವಿಫಲ: ಉ.ಪ್ರದೇಶದಲ್ಲಿ ಹೈ ಅಲರ್ಟ್ ಘೋಷಣೆ
ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.