Advertisement

ತಮಿಳುನಾಡು : ಮದಗಜದ ದಾಳಿಗೆ ಬಾಲಕಿ ಸೇರಿ ನಾಲ್ವರು ಬಲಿ 

11:38 AM Jun 02, 2017 | |

ಕೊಯಮುತ್ತೂರು: ಇಲ್ಲಿನ ಗಣೇಶಪುರಂ ಎಂಬಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ  ಮದವೇರಿದ ಕಾಡಾನೆಯೊಂದರ ದಾಳಿಗೆ 12 ವರ್ಷ ಪ್ರಾಯದ ಬಾಲಕಿ ಸೇರಿದಂತೆ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ಮನೆಗೆ ನುಗ್ಗಿ ಮದವೇರಿದ ಆನೆ ದಾಳಿ ನಡೆಸಿದ್ದು,ಬಾಲಕಿ,ಓರ್ವ ಮಹಿಳೆ ಮತ್ತು ಇಬ್ಬರು ಪುರುಷರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಮಾರು 25 ವರ್ಷ ಪ್ರಾಯದ ಆನೆ ದಾಳಿ ನಡೆಸಿದ್ದು, ಮದವೇರಿ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡುತ್ತಾ ಸಾಗುತ್ತಿದೆ. ವೆಲ್ಲೂರು ,ಗಣೇಶಪುರಂ,ಪೊಥನೂರು ಎಂಬಲ್ಲಿ ಜನರು ಆನೆಯನ್ನು ಕಂಡು ಭಯಭೀತರಾಗಿದ್ದಾರೆ. ಪುಂಡಾನೆ ಯನ್ನು ತಡೆಯಲು ಅರಣ್ಯ ಸಿಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಸ್ಥಳದಲ್ಲಿ ನೂರಕ್ಕು ಹೆಚ್ಚು ಪೊಲೀಸರು, ಅರಣ್ಯ ಸಿಬಂದಿಗಳು ಪಳಗಿದ ಕುಂಕಿ ಆನೆಗಳೊಂದಿಗೆ ಆಗಮಿಸಿ ಆನೆಯ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ತೀವ್ರ ಬರವಿದ್ದ ಹಿನ್ನಲೆಯಲ್ಲಿ ಆನೆಗಳು ನೀರಿಗಾಗಿ ವಸತಿ ಪ್ರದೇಶಕ್ಕೆ ಬಂದಿದ್ದು , ಈ ವೇಳೆ ದಾಳಿ ನಡೆದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next