ಮಳಗಿ, ಕಾತೂರ, ನಾಗನೂರ, ಕುರ್ಲಿ, ರಾಮಾಪುರ ವ್ಯಾಪ್ತಯಲ್ಲಿ ಕಾಡಾನೆಗಳು ನಾಶ ಮಾಡುತ್ತೇವೆ. ಮಳಗಿ ಗ್ರಾಮದ ಹುಬ್ಬಳ್ಳಿ ಶಿರಶಿ ರಸ್ತೆಯ ಪಕ್ಕದಲ್ಲಿನ ಬಸವ್ವಾ ಮಾಹದೇವಪ್ಪ ಹುಲ್ಲುರ ಎಂಬುವರ ಗದ್ದೆಗೆ ಮಂಗಳವಾರ ಮುಂಜಾನೆ ದಾಳಿ ಮಾಡಿ 20 ಅಡಕೆ ಸಸಿ, ಬಿದರು 10, ತೆಂಗಿನ ಮರ 2, ಹುಲ್ಲಿನ ಬಣವಿ ಸೇರಿದಂತೆ, ಭತ್ತದ ಬೆಳೆಯನ್ನು ಹಾನಿಮಾಡಿದೆ. ರಮೇಶ ಬಸಪ್ಪ ಸಾಲಗೇರ ಎಂಬ ರೈತರಿಗೆ ಸೇರಿದ ಗದ್ದೆಯಲ್ಲಿ 25 ಅಡಕೆ ಸಸಿಗಳನ್ನು ಹಾಗೂ 25 ಮೂಟೆಯ ಚೀಲದ ಭತ್ತವನ್ನು ಹಾನಿ ಮಾಡಿ ಹುಲ್ಲಿನ ಬಣವಿಯನ್ನು ನಾಶ ಮಾಡಿವೆ.
Advertisement
ಕಳೆದ ಒಂದು ತಿಂಗಳಿಂದ ಕಾತೂರು ವಲಯದ ಅರಣ್ಯದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ರೈತರ ಗದ್ದೆಗಳಲಿ ನಿರಂತರವಾಗಿ ದಾಳಿ ಮಾಡುತ್ತಾ ಗದ್ದೆಯಲ್ಲಿನ ಭತ್ತದ ಬೆಳೆ, ಕಬ್ಬಿನ ಬೆಳೆ, ಅಡಿಕೆ ತೋಟ, ಬಾಳೆ ತೋಟ ಭತ್ತದ ಕಾಳಿನ ಬಣವಿ ಹೀಗೆ ಬೆಳೆಗಳನ್ನು ಸಾಕಾಗುವಷ್ಟು ತಿಂದು ತುಳಿದು ಹಾನಿ ಮಾಡಿ ಬೇರೆ ಬೇರೆ ಗದ್ದೆಗಳಿಗೆ ದಾಳಿ ಮಾಡುತ್ತಿವೆ. ಇನ್ನೂ ಸರ್ಕಾರಹಾನಿ ಮಾಡಿದ ಅರ್ಧದಷ್ಟು ಪರಿಹಾರ ನೀಡುವುದಿಲ್ಲ ಪರಿಹಾರಕ್ಕೆ ಅರ್ಜಿಗಳನ್ನು ಹಾಕುವುದು ಬೇಡ ಎಂದು ಹಲವು ರೈತರು ತಮ್ಮ ಪಾಡಿಗೆ ತಾವು ಸುಮ್ಮನಿದ್ದರೆ. ಇನ್ನು ಕೆಲವು ರೈತರು ಬೆಳೆ ಹಾನಿಯಾದ ಉಪವಲಯ ಅರಣ್ಯ ಅಧಿಕಾರಿಗಳ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸುವ ಕೆಲಸ ಮಾಡುತ್ತಿದ್ದಾರೆ.