ಇತ್ತೀಚೆಗೆ ಮುಖ್ಯ ರಸ್ತೆಯಲ್ಲೇ ಕಾಣಿಸಿಕೊಂಡಿದ್ದ ಆನೆಗಳು, ಸಂಜೆಯಾಗುತ್ತಿದ್ದಂತೆ ಸಮೀಪದಲ್ಲಿ ಬೆಳೆದಿರುವ ಅಡಿಕೆ, ತೆಂಗು, ಬಾಳೆಗಿಡಗಳನ್ನು ಧ್ವಂಸ ಮಾಡುತ್ತಿದೆ. ಆನೆಯ ಹಾವಳಿಯಿಂದಾಗಿ ತರಕಾರಿ, ಮರಗೆಣಸು ಮುಂತಾದ ಬೆಳೆಗಳೆಲ್ಲಾ ನಾಶವಾಗಿದ್ದು, ರಾತ್ರಿ ಮನೆಯಿಂದ ಹೊರ ಹೋಗದಂತಾಗಿದೆ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ. ಸಂಬಂದಪಟ್ಟ ಅರಣ್ಯ ಇಲಾಖೆಯು ಗರ್ನಲ್ ನೀಡಿದರು ನಿರಂತರ ಕಾಡಾನೆ ದಾಳಿಯಿಂದ ಇಲ್ಲಿನ ಕೃಷಿಕರು ರೋಸಿಹೋಗಿದ್ದಾರೆ ಎಂದು ಸ್ಥಳಿಯರು ತಿಳಿಸಿದ್ದಾರೆ
Advertisement