ಮಲ್ಕುಂಡಿ: ಜಮೀನಿಗೆ ಕಾಡಾನೆಗಳು ಶುಕ್ರವಾರ ರಾತ್ರಿ ಲಗ್ಗೆ ಇಟ್ಟು ರೈತರ ಫಸಲನ್ನು ನಾಶ ಮಾಡಿರುವ ಘಟನೆ ಸಮೀಪದ
ಬಳ್ಳೂರುಹುಂಡಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಗ್ರಾಪಂ ಸದಸ್ಯ ಕುಮಾರ್ ಜಮೀನಿನಲ್ಲಿದ್ದ ರಾಗಿ ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿವೆ. ಹಿಂಡಾನೆಯಲ್ಲಿ
ಸಲಗಯೊಂದು ದಾರಿ ತಪ್ಪಿ ರೈತರ ಜಮೀನಿನಲ್ಲೇ ಬೆಳಗ್ಗೆಯಾದರೂ ಕಾಡಿನತ್ತ ಹೋಗದೆ ಜಮೀನಿನಲ್ಲೇ ಬಿಡುಬಿಟ್ಟಿತ್ತು.
ಇದನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡು ಭಯಭೀತರಾಗಿ ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಬಳಿಕ ಅರಣ್ಯ ಅಧಿಕಾರಿಗಳ ಜೊತೆ ಗ್ರಾಮಸ್ಥರು ಸೇರಿ ಒಂಟಿ ಸಲಗವನ್ನು ಕಾಡಿನತ್ತ ಓಡಿಸಲು ಹರಸಹಸ ಪಟ್ಟರು. ರೈತರು ಕಷ್ಟ ಪಟ್ಟು ಬೆಳೆದ ಫಸಲು ಕಾಡಾನೆಗಳ ಹಾವಳಿಯಿಂದ ರೈತರ ಫಸಲು ಕೈಗೆ ಸಿಗದಂತಾಗಿದೆ. ಕಾಡಾಂಚಿನ ಗ್ರಾಮವಾದ ಬಹುಂಡಿ ಗ್ರಾಮದಲ್ಲಿ ಆಗಾಗ ಕಾಡಾನೆಗಳು ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುವುದರಿಂದ ಅಪಾರ ಪ್ರಮಾಣದಲ್ಲಿ ನಷ್ಟವಾಗುತ್ತಿದೆ. ಅರಣ್ಯ ಅಧಿಕಾರಿಗಳು ಕಾಡಾನೆಗಳ ಹಾವಳಿಯನ್ನು ತಪ್ಪಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ವೈಜ್ಞಾನಿಕವಾಗಿ ಬೆಳೆನಷ್ಟ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಚಿರತೆ ಹಿಡಿಯಲೆಂದು ಬೋನ್ ಒಳಗೆ ಕುರಿ ಇಟ್ಟರೆ, ಚಿರತೆ ಕುರಿಯನ್ನೇ ತಿಂದು ಪರಾರಿ!