Advertisement

ಕಾಡಾನೆ ಗೀಳು : ಕೂದಲೆಳೆ ಅಂತರದಲ್ಲಿ ಪಾರಾದ ತಹಶೀಲ್ದಾರ್ ಮತ್ತು ಸಿಬ್ಬಂದಿಗಳು

06:53 PM Mar 19, 2022 | Team Udayavani |

ಆಲೂರು: ಕಾಡಾನೆ ಗೀಳಿಟ್ಟ ಪರಿಣಾಮ ಕೂದಲೆಳೆ ಅಂತರದಲ್ಲಿ ತಹಶೀಲ್ದಾರ್ ಶಿರೀನ್ ತಾಜ್ ಮತ್ತು ಸಿಬ್ಬಂದಿಗಳು ಪಾರಾಗಿರುವ ಘಟನೆ ಶನಿವಾರ ಕೆಂಚಮ್ಮ ದೇವಸ್ಥಾನದ ಬಳಿ ಸಂಭವಿಸಿದೆ.

Advertisement

ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದ ಶ್ರೀ ಕೆಂಚಾಂಬಿಕೆ ದೇವಾಲಯದ ಆವರಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಏರ್ಪಡಿಸಲಾಗಿದ್ದ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಎಚ್. ಕೆ. ಕುಮಾರಸ್ವಾಮಿ ಭಾಗವಹಿಸಿ ನಂತರ ಯಸಳೂರಿಗೆ ತೆರಳಿದರು.

ಕಾರ್ಯಕ್ರಮ ಮುಗಿದ ನಂತರ, ದೇವಸ್ಥಾನದ ಹಿಂಭಾಗದಲ್ಲಿರುವ ಕಲ್ಯಾಣಿ ಬಳಿ ಒತ್ತುವರಿ ಜಾಗವನ್ನು ಅಳತೆ ಮಾಡಿ ಬಿಡಿಸಲು ತಹಸೀಲ್ದಾರ್ ಶಿರೀನ್‌ತಾಜ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಸರ್ವೆಯರ್ ಕಾರ್ಯ ಮಗ್ನರಾಗಿದ್ದರು.

ಬಹುತೇಕ ಅಳತೆ ಕಾರ್ಯ ಮುಗಿದು ಮುಚ್ಚಳಿಕೆ ಬರೆಯುತ್ತಿದ್ದ ಸಂದರ್ಭದಲ್ಲಿ, ದಿಢೀರನೆ ೪೦ ಅಡಿ ದೂರದ ಕಾಫಿ ತೋಟದಲ್ಲಿದ್ದ ಆನೆ ಕಾಡಾನೆ ಗೀಳಿಟ್ಟಿತು. ಓಡುವ ಸಂದರ್ಭದಲ್ಲಿ ತಹಶೀಲ್ದಾರ್ ಶಿರೀನ್‌ತಾಜ್ ರವರ ಚಪ್ಪಲಿ ತೊಡಕಿ ಬಿದ್ದರು.ಅವರನ್ನು ದೇವಾಲಯದ ಅರ್ಚಕರು ಮೇಲೆತ್ತಿ ಒಡುವಾಗ ಸರ್ವೆಯರ್ ಕುಮಾರ್ ತೊಡರಿ ಬಿದ್ದು ಎದೆಗೆ ಪೆಟ್ಟಾಯಿತು.
ಸ್ಥಳದಲ್ಲಿದ್ದ ೧೫ ಜನ ಸಿಬ್ಬಂದಿಗಳು ಓಡಲು ಮುಂದಾದರು. ಆನೆ ಕಿರುಚದಿದ್ದರೆ ಇವರಿಗೆ ಸಮೀಪದಲ್ಲಿ ಆನೆ ಇರುವುದು ಗೊತ್ತಾಗುತ್ತಿರಲಿಲ್ಲ. ಕೇವಲ ಮೂವತ್ತು ಅಡಿ ಮುಂದೆ ಸಾಗಿದ್ದರೆ ಕಾಡಾನೆ ದಾಳಿಗೆ ಸಿಲುಕಿ ಭಾರಿ ಅನಾಹುತವಾಗುತ್ತಿತ್ತು.

ಇದನ್ನೂ ಓದಿ : ಒಂದು ವಾರದಲ್ಲಿ ನೂರು ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್

Advertisement

ತಕ್ಷಣ ಸಮೀಪದಲ್ಲಿರುವ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದಾಗ ತಹಸೀಲ್ದಾರ್ ಮತ್ತು ಕುಮಾರ್ ಇಬ್ಬರಿಗೂ ಇಸಿಜಿ ರಕ್ತದೊತ್ತಡ ಪರೀಕ್ಷಿಸಿ ಚಿಕಿತ್ಸೆ ನೀಡಲಾಯಿತು. ಕೆಂಚಾಂಬ ದೇವಿ ನಮ್ಮನ್ನು ಕಾಪಾಡಿದಳು ಎಂದು ಎಲ್ಲರೂ ಏರುಸಿರು ಬಿಡುತ್ತಿದ್ದರು.

ತಹಸೀಲ್ದಾರ್ ಶಿರೀನ್‌ತಾಜ್ ರವರು ತೀವ್ರ ಬೆದರುಗೊಂಡು ವಿಶ್ರಾಂತಿಯಲ್ಲಿದ್ದಾರೆ ಎನ್ನಲಾಗಿದೆ.

ಫೋಟೋ ಕ್ಯಾಫ್ಶನ್ಸ್ : ಆಲೂರು ತಾಲ್ಲೂಕು ಕೆಂಚಮ್ಮ ದೇವಾಲಯದ ಬಳಿ ತಹಸೀಲ್ದಾರ್ ಶಿರೀನ್‌ತಾಜ್ ಮತ್ತು ಸಿಬ್ಬಂದಿಗಳು ಒತ್ತುವರಿ ಜಮೀನು ತೆರವುಗೊಳಿಸಲು ಕಾರ್ಯಮಗ್ನರಾಗಿದ್ದರು. ಇದೆ ಸಂದರ್ಭದಲ್ಲಿ ಕಾಡಾನೆ ಗೀಳಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next