Advertisement
ಎಚ್.ಡಿ.ಕೋಟೆ ತಾಲೂಕಿನ ಪೊ ನಂಜುಂಡಪ್ಪ ನವರ ವರದಿಯಂತೆ ತೀರಾ ಹಿಂದುಳಿದ ತಾಲೂಕು ಅನ್ನುವ ಹಣೆ ಪಟ್ಟಿ ಕಟ್ಟಿಕೊಂಡಿದೆಯಾದರೂ ಭೌಗೋಳಿಕವಾಗಿ ವಿಶಾಲವಾದ ಅರಣ್ಯ ಸಂಪತ್ತು ಹೊಂದಿರುವ ತಾಲೂಕು. ತಾಲೂಕಿನಲ್ಲಿ ಕಬಿನಿ, ತಾರಕ, ನುಗು ಹಾಗೂ ಹೆಬ್ಬಳ್ಳ 4 ಜಲಾಶಯಗಳಿವೆಯಾದರೂ ಜಲಾಶಯಗಳ ನಿರ್ಮಾಣದ ಸಂದರ್ಭದಲ್ಲಿ ಹಿನ್ನೀರಿನ ಭಾಗದ ತಾಲೂಕಿನ ಜನತೆ ನೆಲೆ ಕಳೆದುಕೊಂಡಿರುವುದು ಹೊರತು ಪಡಿಸಿದರೆ ಜಲಾಶಯಗಳಿಂದ ತಾಲೂಕಿನ ಜನತೆಗೇನು ಅಷ್ಟಾಗಿ ಉಪಯೋಗವಿಲ್ಲ.
Related Articles
Advertisement
ಹಾಗಾಗಿ ನೀರಿಗಾಗಿ ಕಾಡಿನಿಂದ ನಾಡಿಗೆ ಧಾವಿಸುವ ವನ್ಯ ಜೀವಿಗಳ ನೀರಿನ ಪಾಡು ಹೇಳ ತೀರದಾಗಿದೆ. ನೀರಿಗಾಗಿ ನಾಡಿಗೆ ಬರುವ ವನ್ಯ ಜೀವಿಗಳ ಮೇಲೆ ಅಲ್ಲಲ್ಲಿ ಮನಷ್ಯರು ದಾಳಿ ನಡೆಸುವ ಸಾಧ್ಯತೆಗಳಿದ್ದು ನೀರಿಗಾಗಿ ವನ್ಯ ಜೀವಿಗಳು ಜೀವ ಕೈಯಲ್ಲಿಡಿದು ಬಂದು ನಾಡಿನ ಅಲ್ಲಲ್ಲಿ ಲಭ್ಯವಾಗುವ ಬೊಗಸೆ ನೀರು ಕುಡಿದು ನಿರ್ಗಮಿಸಬೇಕಾದಸ್ಥಿತಿ ಇದೆ.
ಕಬಿನಿ ನೀರಿನಲ್ಲೂ ಇಳಿಮುಖ: ಇನ್ನು ತಾಲೂಕಿನಲ್ಲಿರು ನಾಗರಹೊಳೆ, ಗುಂಡ್ರೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳು ಕಬಿನಿ ಹಿನ್ನೀರಿನಲ್ಲಿದ್ದು ಅರಣ್ಯದಲ್ಲಿ ನೀರು ಸಿಗದ ಹಿನ್ನೆಲೆ ಆನೆ, ಹುಲಿ ಸೇರಿದಂತೆ ಬಹುತೇಕ ಎಲ್ಲಾ ಕಾಡುಪ್ರಾಣಿಗಳೂ ನೀರಿಗಾಗಿ ಕಬಿನಿ ಹಿನ್ನೀರಿಗೆ ಆಗಮಿಸುವುದು ಸಾಮಾನ್ಯವಾಗಿತ್ತು.
ಆದರೆ ಹಿಂದೆಂದೂ ಕಬಿನಿ ಜಲಾಶಯದ ಹಿನ್ನೀರು ಬತ್ತಿದ ನಿದರ್ಶನ ಇಲ್ಲದಿದ್ದರೂ ಕಳೆದ ಸಾಲಿನಲ್ಲಿ ಮಳೆಯ ಆಭಾವದಿಂದ ಪ್ರಸಕ್ತ ಬೇಸಿಗೆಯಲ್ಲಿ ಕಬಿನಿ ಜಲಾಶಯದ ಒಡಲು ಸಂಪೂರ್ಣವಾಗಿ ಬತ್ತಿಹೋಗಿದೆ. ಇದರಿಂದ ಮತ್ತಷ್ಟು ಆಗಾತಕ್ಕೊಳಗಾದ ವನ್ಯ ಜೀವಿಗಳು ಸಂಜೆಯಾಗುತ್ತಿದ್ದಂತೆಯೇ ಕಬಿನಿ ಹಿನ್ನೀರಿನತ್ತ ಧಾವಿಸಿ ನೀರಿಗಾಗಿ ಪರಿತಪಿಸುವ ದೃಶ್ಯಾವಳಿಗಳಂತೂ ನೋಡುಗರ ಮನ ಕಲಕುವಂತಿದೆ.
ಹೆಚ್ಚಿದ ತಾಪಮಾನ: ಎಲ್ಲೆಲ್ಲೂ ಅಂತರ್ಜಲದ ನೀರಿನ ಮಟ್ಟ ಕುಸಿದ ಹಿನ್ನೆಲೆ ತಾಲೂಕಿನಾದ್ಯಂತ ಹಿಂದೆಂದೂ ಕಂಡೂ ಕೇಳರಿಯದಷ್ಟು ಉಷ್ಣಾಂಶ ಹೆಚ್ಚಾಗಿದೆ. ಬೆಳಗಿನ ಬೇಸಿಗೆಯ ಬಿಸಿಲಿನ ತಾಪಮಾನಕ್ಕೆ ದಿನ ಕಳೆಯುವುದು ಒಂದು ಕಡೆ ಕಷ್ಟಕರ ಎನಿಸಿದರೂ ರಾತ್ರಿಯಂತೂ ಸಹಿಸ ಲಾಗದ ತಾಪಮಾನಕ್ಕೆ ನೆಮ್ಮದಿಯಿಂದ ನಿದ್ರಿಸುವುದೂ ಕಷ್ಟಕವಾಗುತ್ತಿದೆ.
ಎಷ್ಟು ಬೇಗ ರಾತ್ರಿ ಕಳೆಯುವುದೋ ಅನ್ನುವುದು ಕಡೆಯಾದರೆ ಬೆಳಗಾಗುತ್ತಿದ್ದಂತೆಯೇ ಬೆಳಗಿನ ತಾಪಕ್ಕಿಂತ ಎಷ್ಟು ಬೇಗ ರಾತ್ರಿಯಾಗಿ ತಣ್ಣನೆಯ ವಾತಾವರಣ ನಿರ್ಮಾಣವಾಗುವುದೋ ಅನ್ನುವ ತವಕ ಮತ್ತೂಂದು ಕಡೆ ಉದ್ಬವಿಸಿ ಒಟ್ಟಾರೆ ಇಡೀ ದಿನದ ತಾಪಮಾನಕ್ಕೆ ತೆರೆ ಎಳೆಯಲು ಯಾವಾಗ ಧರೆಗೆ ವರುಣನ ಆಗಮನವಾಗುವುದೋ ಅನ್ನುವ ನಿರೀಕ್ಷೆಯಲ್ಲಿ ಜನರಷ್ಟೇ ಅಲ್ಲದೆ ಪ್ರಾಣಿ ಸಂಕುಲ ಕೂಡ ತವಕದಲ್ಲಿವೆ.
* ಎಚ್.ಬಿ.ಬಸವರಾಜು