ಮುರಾರಿಗೆ, ಆಗಾಗ ಉಸಿರು ನಿಂತು ಹೋಗು ತ್ತಿರುವಂತೆ ಅನಿಸುತ್ತದೆ. ಹೊಟ್ಟೆಯ ಲ್ಲೆಲ್ಲಾ ಬುಗುಬುಗು ಉರಿ. ತೂಕದಲ್ಲಿಯೂ ಐದು ಕೆ.ಜಿ. ಕಡಿಮೆಯಾದಾಗ, ಅವರು ವೈದ್ಯ ರಲ್ಲಿಗೆ ದೌಡಾಯಿಸಿದ್ದಾರೆ. ವೈದ್ಯರು ಮೂತ್ರ, ರಕ್ತ ಪರೀಕ್ಷೆ ಮಾಡಿದರು. ಸ್ಕಾನಿಂಗ್ ಕೂಡಾ ಮಾಡಿ ನೋಡಿದರು. ಮೂತ್ರದಲ್ಲಿ ಪ್ರೊಟೀನ್ ಅಂಶ ಹೆಚ್ಚಾಗಿ ಹೋಗುತ್ತಿಲ್ಲವೆಂದು ಖಾತ್ರಿ ಮಾಡಿ ಕೊಂಡ ಬಳಿಕ, ಮುರಾರಿಯನ್ನು ನನ್ನ ಬಳಿ ಮಾನಸಿಕ ಆರೋಗ್ಯದ ತಪಾಸಣೆಗೆ ಕಳುಹಿಸಿದ್ದರು.
ಒತ್ತಡದ ಸಂದರ್ಭಗಳಲ್ಲಿ, ಮೊದಲು ಏರುಪೇರಾ ಗುವುದು ಮಾನಸಿಕ ಆರೋಗ್ಯ. ಮುರಾರಿಯವರ ಕೇಸ್‌ನಲ್ಲಿಯೂ ಹಾಗೆಯೇ ಆಗಿದೆ. ಪತ್ನಿ, ಸಕಾರಣವಿಲ್ಲದೆ ಅನುಮಾನ ಪಡುತ್ತಿದ್ದುದು, ಈ ಒತ್ತಡಕ್ಕೆ ಕಾರಣವಾಗಿತ್ತು. ಅನುಮಾನ ಪಡುವುದನ್ನು ಮನೋರೋಗದಲ್ಲಿ ಗೀಳು ಚಟ ಎಂದು ವರ್ಗೀಕರಿಸಲಾಗುತ್ತದೆ. ಎಲ್ಲದ್ದಕ್ಕೂ ಅನುಮಾನ ಪಡುವವರ ಜೊತೆ ಹೊಂದಿಕೊಳ್ಳುವುದು ಹೇಗೆಂದು ತಿಳಿಯದೆ, ಮುರಾರಿ ಖನ್ನರಾಗಿದ್ದರು.
ಮುರಾರಿಯ ತಾಯಿಗೆ ಕ್ಯಾನ್ಸರ್ ಬಂದಾಗ, ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬರಲು ಪತ್ನಿ ಒಪ್ಪಿರಲಿಲ್ಲ. ತನ್ನ ಮನೆಯಲ್ಲಿ, ತಾಯಿಗೆ ಕಡೆಗಾಲದಲ್ಲಿ ಆಶ್ರಯ ಸಿಗಲಿಲ್ಲವಲ್ಲ ಎಂಬ ಪಾಪಪ್ರಜ್ಞೆ, ಮುರಾರಿಯನ್ನು ಸದಾ ಕಾಡುತ್ತದೆ. ನೈತಿಕ ಪ್ರಜ್ಞೆಗೆ ಸವಾಲು ಹಾಕುವ ಘಟನೆಗಳಿಗೆ, ಮನಸ್ಸು ಹೊಂದಿಕೊಳ್ಳಲು ಸಾಧ್ಯವೇ ಇಲ್ಲ. ಆತ್ಮತೃಪ್ತಿಗಾಗಿ, ಮುರಾರಿ ಕಂಡ ಕಂಡ ದೇವರಿಗೆಲ್ಲಾ ಪ್ರಾರ್ಥನೆ ಸಲ್ಲಿಸುತ್ತಾರೆ. ಸಿಕ್ಕಸಿಕ್ಕ ಕಡೆ ದಾನ ಮಾಡುತ್ತಾರೆ.
ಅತಿರೇಕದ ದಾನದಿಂದ, ಮನೆಯಲ್ಲಿ ಸಿಕ್ಕದ ಗೌರವ, ಮುರಾರಿಗೆ ಸಮಾಜದಲ್ಲಿ ಸಿಕ್ಕಿದೆ. ಮನೋರೋಗದಲ್ಲಿ ಮುರಾರಿಯ ವ್ಯಕ್ತಿತ್ವವನ್ನು passive& aggressive ಎಂದು ಕರೆಯುತ್ತಾರೆ. ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎನ್ನುವಂತೆ, ಮುರಾರಿಯೂ ಅರಿವಿಲ್ಲದೇ, ಬೇರೆ ಬೇರೆ ರೀತಿಯಲ್ಲಿ, ಹೆಂಡತಿಗೆ ಕಿರುಕುಳ ಕೊಟ್ಟಿರಬಹುದು. ಆಗ, ಹೆಂಡತಿ ಇನ್ನೂ aggressive ವರ್ತನೆ ತೋರಿಸಿದ್ದಾರೆ. ಹುದುಗಿದ್ದ ಇಷ್ಟೆಲ್ಲಾ ದುಃಖವನ್ನು ನನ್ನ ಬಳಿ ಹಂಚಿಕೊಂಡ ನಂತರ, ಮುರಾರಿಯ ಮನಸ್ಸು ನಿರಾಳವಾಯಿತು. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ ಎಂಬ ಪಾಪಪ್ರಜ್ಞೆಯನ್ನು ಕಡಿಮೆ ಮಾಡಲು ಆದ್ಯತೆ ನೀಡಿದೆ.
ಸಮಾಜದಲ್ಲಿಯಾದರೂ ಗೌರವ ಸಿಗಲೆಂದು ಮಾಡುತ್ತಿದ್ದ ದಾನದ ಗೀಳು ಚಟವನ್ನು ಕಡಿಮೆ ಮಾಡಿಸಿದೆ. ಹೆಂಡತಿಯನ್ನು ಕ್ಷಮಿಸಿ, ಆಕೆಯೊಂದಿಗೆ ರಾಜಿಯಾಗಲು ಸಲಹೆ ನೀಡಿದೆ. ಯೋಗ, ಧ್ಯಾನ ಮತ್ತು ಕ್ರಮಬದ್ಧ ಉಸಿರಾಟ ಮಾಡಿಸಿದ್ದರಿಂದ, ಅವರ ಮನಸ್ಸು ಈಗ ಶಾಂತವಾಗಿದೆ. ವ್ಯಕ್ತಿತ್ವ, ಆರೋಗ್ಯ ಸುಧಾರಿಸುತ್ತಿದೆ. ಪತಿಯಲ್ಲಿ ಆಗಿರುವ ಬದಲಾವಣೆ ಕಂಡು ಪತ್ನಿಯೂ ಸಮಾ ಲೋಚನೆಗೆ ಬರಲು ಉತ್ಸುಕರಾಗಿದ್ದಾರೆ.
* ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ