Advertisement

ರಾಜಿಗೆ ಒಪ್ಪದ ಪತ್ನಿ; ದಂಪತಿ ವಿವೇಚನೆಗೆ ಬಿಟ್ಟ ಪೊಲೀಸರು

06:40 AM Sep 27, 2018 | |

ಬೆಳಗಾವಿ: 500 ರೂ.ಸಾಲ ವಾಪಸ್‌ ಕೊಡಲು ವಿಳಂಬ ಮಾಡಿದ್ದಕ್ಕೆ ಸ್ನೇಹಿತ ಪತ್ನಿಯನ್ನೇ ಹೊತ್ತೂಯ್ದು ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಹಾಗೂ ಪತ್ನಿಯನ್ನು ಠಾಣೆಗೆ ಕರೆಸಿದ ಪೊಲೀಸರು, ಕೌಟುಂಬಿಕ ನ್ಯಾಯಾಲಯದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ದಂಪತಿಗೆ ಸಲಹೆ ನೀಡಿದ್ದಾರೆ.

Advertisement

ಈ ಸಂಬಂಧ ಬುಧವಾರ ಮಾರ್ಕೆಟ್‌ ಪೊಲೀಸ್‌ ಠಾಣೆಗೆ ದಂಪತಿಯನ್ನು ಕರೆದು ರಾಜಿಗೆ ಒಪ್ಪಿಸಲು ಪ್ರಯತ್ನಿಸಿದರು. ಆದರೆ, ಬಸವರಾಜ ಕೋನನ್ನವರ ಪತ್ನಿ ಪಾರ್ವತಿ, ಮೊದಲ ಪತಿಯೊಂದಿಗೆ ಸಂಸಾರ ಮಾಡುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾಳೆ. ಆದರೆ, ಪತಿ ಬಸವರಾಜ ತನ್ನ ಪತ್ನಿಯನ್ನು ತನ್ನೊಂದಿಗೆ ಕಳುಹಿಸಿ ಕೊಡುವಂತೆ ಮನವಿ ಮಾಡಿದರು. ಇದು ಕೌಟುಂಬಿಕ ಕಲಹವಾಗಿರುವುದರಿಂದ ನೀವೇ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಪೊಲೀಸರು ಸಲಹೆ ನೀಡಿದರು. ಈ ಸಂಬಂಧ ಕೌಟುಂಬಿಕ ನ್ಯಾಯಾಲಯಕ್ಕೆ ತೆರಳುವಂತೆ ಸೂಚಿಸಿದರು.

ಪ್ರಕರಣವೇನು?: ಬೆಳಗಾವಿಯ ಹೊಟೆಲ್‌ವೊಂದರಲ್ಲಿ ಬೈಲಹೊಂಗಲ ತಾಲೂಕಿನ ಮುರಕಿಬಾಂವಿಯ ಬಸವರಾಜ ಕೋನನ್ನವರ ಹಾಗೂ ಗೋಕಾಕ ತಾಲೂಕಿನ ಮಿಡಕನಟ್ಟಿ ಗ್ರಾಮದ ರಮೇಶ ಉಡಕೇರಿ ಎಂಬುವರು ಕೆಲಸ ಮಾಡುತ್ತಿದ್ದರು. ಬಸವರಾಜ, ಸ್ನೇಹಿತ ರಮೇಶನಿಂದ 500 ಸಾಲ ಪಡೆದಿದ್ದು, ಅದನ್ನು ತೀರಿಸಿರಲಿಲ್ಲ. ಈ ಸಾಲದ ಬಾಕಿ ನೆಪವೊಡ್ಡಿ ತನ್ನ ಪತ್ನಿ ಪಾರ್ವತಿಯನ್ನು ಎರಡು ತಿಂಗಳ ಹಿಂದೆ ರಮೇಶ ಪುಸಲಾಯಿಸಿ ಮದುವೆ ಮಾಡಿಕೊಂಡಿದ್ದಾನೆ ಎಂದು ಬಸವರಾಜ ಆರೋಪಿಸಿದ್ದ. ಈ ಬಗ್ಗೆ ಪೊಲೀಸ್‌ ಠಾಣೆಗೆ ಬಂದು ದೂರು ಕೊಟ್ಟ ಬಸವರಾಜ ಹಾಗೂ ಈತನ ಪತ್ನಿಯನ್ನು ಕರೆಸಿ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ. ಆದರೆ, ಪತ್ನಿ ಪಾರ್ವತಿ ಬಸವರಾಜನೊಂದಿಗೆ ಹೋಗಲು ಒಪ್ಪಲಿಲ್ಲ. ಹೀಗಾಗಿ, ಕುಟುಂಬ ಕಲಹವನ್ನು ತಾವೇ ಬಗೆಹರಿಸಿಕೊಳ್ಳುವಂತೆ ಮಾರ್ಕೆಟ್‌ ಇನ್‌ಸ್ಪೆಕ್ಟರ್‌ ವಿಜಯ ಮುರಗುಂಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next