Advertisement

ಹೆಂಡತಿ ಗಂಡನ ಗುಲಾಮಳೆ..? : ‘ಸುಪ್ರೀಂ’ ಪ್ರಶ್ನೆ

04:55 PM Mar 03, 2021 | Team Udayavani |

ನವ ದೆಹಲಿ : ತನ್ನ ಗಂಡನೊಂದಿಗೆ ಬಲವಂತವಾಗಿ ಇರಲು ಹೆಂಡತಿ  ಗುಲಾಮಳಲ್ಲ ಎಂದು ದೇಶದ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ.

Advertisement

ಒಬ್ಬ ವ್ಯಕ್ತಿಯೂ ತನ್ನೊಂದಿಗೆ ಹೆಂಡತಿ ಜೊತೆಯಿರಲು ಮತ್ತೆ ಆರಂಭಿಸಬೇಕು ಎಂದು ನ್ಯಾಯಾಲಯದಿಂದ ಆದೇಶವನ್ನು ಕೋರಿದ ಪ್ರಕರಣಕ್ಕೆ ಸಂಬಮಧಿಸಿದಂತೆ ಈ ತೀರ್ಪನ್ನು ಸುಪ್ರೀಂ ನೀಡಿದೆ.

ಏನೆಂದು ಅರ್ಥೈಸಿಕೊಂಡಿದ್ದೀರಿ..? ಮಹಿಳೆಯನ್ನು ಗುಲಾಮಳು ಅಂತಂದುಕೊಂಡಿದ್ದೀರಾ..? ನಿಮ್ಮೊಂದಿಗೆ ಇರುವಂತೆ ನಿರ್ದೇಶಿಸಲು ಆಕೆ ಏನು ನಿಮ್ಮ ಆಸ್ತಿನಾ..? ಅಥವಾ ಗುಲಾಮಳಾ..? ಎಂದು ಸುಪ್ರಿಂ ಕೋರ್ಟಿನ ನ್ಯಾಯಪೀಠದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಹೇಮಂತ್ ಗುಪ್ತ ಆ ವ್ಯಕ್ತಿಯ ಕೋರಿಕೆಯ ಅರ್ಜಿಯ ವಿಚಾರಣೆ ವೇಳೆ ಹೀಗೆ ಪ್ರಶ್ನಿಸಿದ್ದಾರೆ.

ಓದಿ : ಎಲೋನ್ ಮಸ್ಕ್ ಎ+ :  ವಿಷಯ ಬಹಿರಂಗ ಪಡಿಸಿದರು ಮೇಯ್ ಮಸ್ಕ್ …!?

ವಿವಾದದ ತಿರುಳಿನಲ್ಲಿ ವೈವಾಹಿಕ ಹಕ್ಕುಗಳ ಪುನಃಸ್ಥಾಪನೆ ಕುರಿತು ಏಪ್ರಿಲ್ 2019 ರ ಆದೇಶವಿದೆ. ಇದನ್ನು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 9 ರ ಅಡಿಯಲ್ಲಿ ಗಂಡನ ಪರವಾಗಿ ಗೋರಖ್ ಪುರ ಕುಟುಂಬ ನ್ಯಾಯಾಲಯ ಆದೇಶ ನೀಡಿದೆ. 2013 ರಲ್ಲಿ ಮದುವೆಯಾದಾಗಿನಿಂದ ವರದಕ್ಷಿಣೆಯ ಕುರಿತಾಗಿ ತನ್ನ ಪತಿಯಿಂದ ಹಿಂಸೆಗೆ ಒಳಗಾಗಿರುವುದಾಗಿ ಹೇಳಿದ್ದಾಳೆ.

Advertisement

ಇನ್ನು, ಪತಿಯಿಂದ ಜೀವನಾಂಶ ಕೋರಿ ಗೋರಖ್ ಪುರ ನ್ಯಾಯಾಲಯಕ್ಕೆ ಮಹಿಳೆ ಅರ್ಜಿಯನ್ನು ಸಲ್ಲಿಸಿದ್ದರು. ಗೋರಖ್ ಪುರ ನ್ಯಾಯಾಲಯ  ಪ್ರತಿ ತಿಂಗಳು 20,000 ರೂ. ಜೀವನಾಂಶವನ್ನು ತನ್ನ ಹೆಂಡತಿಗೆ ನಿಡಬೇಕೆಂದು ಆದೇಶ ನೀಡಿತ್ತು.

ಜೀವನಾಂಶವನ್ನು  ನೀಡುವುದನ್ನು ನಿಲ್ಲಿಸಿದ್ದಾನೆ ಎಂದು ಮಹಿಳೆ  ಪರ ವಕೀಲೆ ಅನುಪಮಾ ಮಿಶ್ರಾ ಕೋರ್ಟ್ ಗೆ ತಿಳಿಸಿದ್ದಾರೆ.

ಗೋರಖ್ ಪುರ ಕುಟುಂಬ ನ್ಯಾಯಾಲಯದ ಈ ಆದೇಶದ ನಂತರ, ಆ ವ್ಯಕ್ತಿ ಹೈಕೋರ್ಟ್ ನಲ್ಲಿ ಜೀವನಾಂಶವನ್ನು ಪ್ರಶ್ನಿಸಿ, ಹೆಂಡತಿಯೊಂದಿಗೆ ನಾನು ಬದುಕಲು ಸಿದ್ಧನಿರುವಾಗ ಭತ್ಯೆ ನೀಡುವ ಅಗತ್ಯ ಯಾಕಿದೆ ಎಂದು  ಪ್ರಶ್ನಿಸಿದ್ದ. ಆದರೇ, ಆ ಕೋರಿಕೆಯನ್ನು ಅಲಹಬಾದ್ ಹೈಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನಲೆಯಲ್ಲಿ ಆ ವ್ಯಕ್ತಿ ಸುಪ್ರೀಂ ಕೋರ್ಟ್ ನಲ್ಲಿ ತನ್ನ ಮೇಲ್ಮನವಿ ಸಲ್ಲಿಸಿದ್ದರು.

ಪತ್ನಿಯೊಂದಿಗೆ ಇರಲು ಆದೇಶಿಸಬೇಕು ಎಂದು ಕೋರಿದ್ದ ನಿರಂತರ ಬೇಡಿಕೆಯ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಈ ರೀತಿಯಲ್ಲಿ  ಆ ವ್ಯಕ್ತಿಯನ್ನು ಪ್ರಶ್ನೆ ಮಾಡಿದೆ. ಮತ್ತು ಪತಿ ತನ್ನ ವೈವಾಹಿಕ ಹಕ್ಕನ್ನು ಪುನಃ ಸ್ಥಾಪಿಸಲು ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಓದಿ :  ವಿಚಿತ್ರ: ಶಿರಾದಲ್ಲಿ ಈ ಹುಳ ಕೂಡಾ ಒಂದು ಆಹಾರ, ಪುರಾಣಕ್ಕೂ ಇದಕ್ಕೂ ಏನು ಸಂಬಂಧ?

Advertisement

Udayavani is now on Telegram. Click here to join our channel and stay updated with the latest news.

Next