Advertisement

ಜೈಲಿನಿಂದ ಬಂದ ಗಂಡನಿಗಾಗಿ ಕ್ವಾರಂಟೈನ್ ಬಿಟ್ಟು ಹೆಂಡತಿ ಪರಾರಿ: ಸಿಕ್ಕಿ ಬಿದ್ದಿದ್ದು ಹೇಗೆ?

01:33 PM May 24, 2020 | keerthan |

ಬೆಳಗಾವಿ/ಗೋಕಾಕ: ಮಹಾರಾಷ್ಟ್ರದಿಂದ ಇತ್ತ ಹೆಂಡತಿ ತವರು ಮನೆಗೆ ಬಂದಿದ್ದಳು. ಅತ್ತ ಗಂಡ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆ ಆಗಿದ್ದನು.‌ ತವರು ಮನೆಯಲ್ಲಿ ಕ್ವಾರಂಟೈನ್ ಆಗಿದ್ದ ಹೆಂಡತಿ ಗಂಡನನ್ನು ಕಾಣಲು ಕ್ವಾರಂಟೈನ್ ಕೇಂದ್ರವನ್ನೇ ಬಿಟ್ಟು ಓಡಿ ಹೋಗಿದ್ದು, ತಲೆನೋವಾಗಿದ್ದ ಪೊಲೀಸರಿಗೆ  ಗಂಡ-ಹೆಂಡತಿ ಸಿಕ್ಕಿ ಬಿದ್ದಿದ್ದು ಹೇಗೆ ಎಂಬ ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ ಓದಿ.

Advertisement

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ್ ತಾಲೂಕಿನ ನೂಲ್ ಗ್ರಾಮದ ಮಹಿಳೆ ಗೋಕಾಕ ತಾಲೂಕಿನ ಪಂಜಾನಟ್ಟಿಯಲ್ಲಿರುವ ತವರು ಮನೆಗೆ ತನ್ನ‌ ಮಗುವಿನೊಂದಿಗೆ ಬಂದಿದ್ದಳು. ಅತ್ತ ಜೈಲಿನಲ್ಲಿದ್ದ ಗಂಡ ಪೆರೋಲ್ ಮೇಲೆ ಬಿಡುಗಡೆ ಆಗಿ ಬಂದಿದ್ದನು. ಹೀಗಾಗಿ ಗಂಡನನ್ನು ಭೇಟಿಯಾಗುವ ಹಪಾಹಪಿಸುತ್ತಿದ್ದ ಹೆಂಡತಿ ಗಂಡನನ್ನು ಕಾಣಲು ಕ್ವಾರಂಟೈನ್ ಬಿಟ್ಟು ಹೋಗಿದ್ದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಸದ್ಯ ಪೊಲೀಸರು ಶೋಧ ನಡೆಸಿ ದಂಪತಿಯನ್ನು ಹಾಗೂ ಮಗುವನ್ನು ಹುಡುಕಾಡಿ ಮತ್ತೆ ಕ್ವಾರಂಟೈನ್ ಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಪಂಜಾನಟ್ಟಿ ಗ್ರಾಮಕ್ಕೆ ಬಂದ ಮಹಿಳೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.  ಆಗ ಗ್ರಾಮಸ್ಥರ ವಿರೋಧದ ಮಧ್ಯೆ ಪೊಲೀಸರು ಮಹಿಳೆಯನ್ನು ಗೋಕಾಕ ನಗರದ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಿದ್ದಾರೆ. ಆಗ ಅತ್ತ ಗಂಡ ಬಿಡುಗಡೆ ಆಗಿ ಬಂದಿರುವುದರಿಂದ ಭೇಟಿ ಆಗಲು ತಡಕಾಡಿದ್ದಾಳು.‌ ಹೇಗಾದರೂ ಮಾಡಿ ಬರುವಂತೆ ಗಂಡನಿಗೆ ಕರೆ ಮಾಡಿ ಅಲವತ್ತುಕೊಂಡಿದ್ದಾಳೆ. ಗಂಡ ನೂಲ್ ಗ್ರಾಮದಿಂದ ಗೋಕಾಕ ಬಸ್ ನಿಲ್ದಾಣಕ್ಕೆ ಬಂದು ಹೆಂಡತಿಯನ್ನು‌ ಕರೆಯಿಸಿಕೊಂಡಿದ್ದಾನೆ.

ಆಗ ಇಬ್ಬರೂ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ನೆಂಟರ ಮನೆಗೆ ಹೋಗಿದ್ದಾರೆ.  ಪೊಲೀಸರು ಸಿಸಿಟಿವಿ ದ್ಯಶ್ಯಾವಳಿಗಳನ್ನು ಕಲೆಹಾಕುವ ಮೂಲಕ ನಂತರ ಮೊಬೈಲ್‌ ಮೂಲಕ ದಂಪತಿಯನ್ನು ಟ್ರ್ಯಾಪ್ ಮಾಡಿದ್ದಾರೆ.‌ ಬೆಲ್ಲದ ಬಾಗೇವಾಡಿಗೆ ಹೋಗಿ ಇಬ್ಬರನ್ನು ಮತ್ತು‌‌ ಮಗುವನ್ನು ಕರೆದುಕೊಂಡು ಬಂದು ಕ್ವಾರಂಟೈನ್ ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next