ಹೊಸದಿಲ್ಲಿ: ”18 ವರ್ಷದ ಒಳಗಿನ ಪ್ರಾಯದ ಪತ್ನಿಯೊಡನೆ ನಡೆಸುವ ಲೈಂಗಿಕ ಸಂಪರ್ಕ ಶಿಕ್ಷಾರ್ಹ ಅಪರಾಧ” ಎಂದು ಬುಧವಾರ ಸರ್ವೋಚ್ಛ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿ ತೀರ್ಪು ನೀಡಿದ ಸರ್ವೋಚ್ಛ ನ್ಯಾಯಾಲಯ ”15ರಿಂದ 18 ವರ್ಷದೊಳಗಿನ ವಿವಾಹಿತೆಯ ಮೇಲೆ ಲೈಂಗಿಕ ಕ್ರಿಯೆಗಾಗಿ ಒತ್ತಾಯ ನಡೆದರೆ ಎಫ್ಐಆರ್ ದಾಖಲಿಸಿ ಅತ್ಯಾಚಾರ ಎಂದು ಪರಿಗಣಿಸಬೇಕು” ಎಂದು ತೀರ್ಪು ನೀಡಿದೆ.
ಲೈಂಗಿಕ ಸಂಪರ್ಕಕ್ಕಾಗಿ ವಯಸ್ಸಿನ ಮಿತಿ ಇಳಿಸಲು ಸಾಧ್ಯವಿಲ್ಲ ಎಂದಿರುವ ಕೋರ್ಟ್ ಅತ್ಯಾಚಾರವಾದರೆ 1 ವರ್ಷದ ಒಳಗೆ ದೂರು ಸಲ್ಲಿಸಬೇಕು ಎಂದಿದೆ.
ಬಾಲ್ಯ ವಿವಾಹದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಕೋರ್ಟ್ ”ಸಾಮಾಜಿಕ ನ್ಯಾಯದ ಕುರಿತಾಗಿನ ಕಾನೂನುಗಳನ್ನು ಜಾರಿಗೊಳಿಸಿದಷ್ಟು ಪರಿಣಾಮಕಾರಿಯಾಗಿ ನಾವು ಅಳವಡಿಸಿಕೊಂಡಿಲ್ಲ” ಎಂದು ಅಭಿಪ್ರಾಯ ವ್ಯಕ್ತ ಪಡಿಸಿದೆ.