ಪಾಟ್ನಾ: ಪತ್ನಿಯೊಬ್ಬಳು ಮದುವೆಯಾದ ಎರಡನೇ ದಿನಕ್ಕೆ ಪತಿಯ ಖಾಸಗಿ ಅಂಗಕ್ಕೆ ಚೂರಿಯಿಂದ ಇರಿದಿರುವ ಘಟನೆ ಪಾಟ್ನಾದಲ್ಲಿ ನಡೆದಿರುವುದು ವರದಿಯಾಗಿದೆ.
ಸಿಆರ್‌ಪಿಎಫ್ ಯೋಧನಾಗಿರುವ ಸೀತಾಮರ್ಹಿ ಮೂಲದ ಸೂರ್ಯಭೂಷಣ್ ಕುಮಾರ್ ಪಾಟ್ನಾ ನಿವಾಸಿ ನೇಹಾ ಕುಮಾರಿ ಅವರನ್ನು ಕಳೆದ ಕೆಲ ಸಮಯದಿಂದ ಪ್ರೀತಿಸುತ್ತಿದ್ದಾರೆ. ಇದೇ ವೇಳೆ ಇತ್ತ ಸೂರ್ಯಭೂಷಣ್ ಮನೆಯವರು ಬೇರೊಬ್ಬ ಯುವತಿ ಜೊತೆ ಮದುವೆ ಮಾಡಲು ಸಿದ್ದತೆ ನಡೆಸಿದ್ದಾರೆ.
ಈ ವಿಚಾರವನ್ನು ಅರಿತ ಪ್ರಿಯತಮೆ ನೇಹಾ ಕುಮಾರಿ, ಸೂರ್ಯಭೂಷಣ್ ಅವರನ್ನು ಬಿಹಾರಕ್ಕೆ ಬರಲು ಹೇಳಿದ್ದಾರೆ. ಅಲ್ಲಿ ಇಬ್ಬರು (ಜೂ.5 ರಂದು) ಕೋರ್ಟ್ ಮ್ಯಾರೇಜ್ ಆಗಿದ್ದಾರೆ. ಆ ಬಳಿಕ ಹೊಟೇಲ್ ವೊಂದರಲ್ಲಿ ಸ್ಟೇ ಮಾಡಿದ್ದಾರೆ. ಈ ವೇಳೆ ಪತ್ನಿ ನೇಹಾ ಕುಮಾರಿ ಪತಿಯ ಬಳಿ “ನಿಮ್ಮ ಮದುವೆ ತಯಾರಿಯನ್ನು ನಿಲ್ಲಿಸಲು ಮನೆಯವರ ಬಳಿ ಹೇಳಿ” ಎಂದು ತಕರಾರು ಮಾಡಿದ್ದಾಳೆ. ಇದಾದ ನಂತರ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಜಗಳ ಹೆಚ್ಚಾದಾಗ ಪತ್ನಿ ನೇಹಾ ಚಾಕು ಹಿಡಿದು, ಪತಿ ಸೂರ್ಯಭೂಷಣ್ ಖಾಸಗಿ ಅಂಗಕ್ಕೆ ಇರಿದಿದ್ದಾಳೆ. ನೋವಿನಲ್ಲಿ ಸೂರ್ಯಭೂಷಣ್ ಅವರು ಹೊಟೇಲ್ ರೂಮ್ ನ ಹೊರಗಡೆ ಬಂದು ಸಿಬ್ಬಂದಿ ಬಳಿ ಹೇಳಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.