Advertisement

ವಿಧವೆ ಮೇಲೆ ಪ್ರಿಯಕರನಿಂದ ರೇಪ್‌, ಬೆನ್ನಲ್ಲೇ ಗ್ಯಾಂಗ್‌ರೇಪ್‌!

03:02 PM Dec 27, 2017 | |

ರಾಯ್‌ಪುರ್‌(ಛತ್ತೀಸ್‌ಘಡ)ವಿಧವೆಯೊಬ್ಬಳ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗುತ್ತಿದ್ದ ವೇಳೆ ಆಕೆಯ ಆರ್ತನಾದ ಕೇಳಿ ಓಡಿ ಬಂದ ಇನ್ನೂ ಮೂವರು ಪುರುಷರು ಗ್ಯಾಂಗ್‌ ರೇಪ್‌ ಎಸಗಿದ ಭಯಾನಕ, ಹೇಯ ಘಟನೆ ನಡೆದ ಬಗ್ಗೆ ವರದಿಯಾಗಿದೆ.

Advertisement

24 ರ ಹರೆಯದ ಯುವತಿಯನ್ನು ಕಾಪಾ ಎಂಬಲ್ಲಿನ ರೈಲ್ವೇ ಯಾರ್ಡ್‌ ಪ್ರದೇಶದಲ್ಲಿ ಆಕೆಯ ಪ್ರಿಯಕರ ಎನ್ನಲಾದ 24 ರ ಹರೆಯದ ಸಾಹು ಎಂಬಾತ ಅತ್ಯಾಚಾರ ಎಸಗಿದ್ದು, ಬೊಬ್ಬಿಟ್ಟಾಗ ಸ್ಥಳಕ್ಕೆ ಬಂದ ಮೂವರು ಪುರುಷರು ಸಾಹುನನ್ನು ಸ್ಥಳದಿಂದ ಓಡಿಸಿ  ಬಳಿಕ ಕಾಮಾಂಧರಾಗಿ ಸರದಿಯಂತೆ ಅತ್ಯಾಚಾರ ಎಸಗಿದ್ದಾರೆ. ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ಜಾಗೃತೆ ಎಂದು ಬೆದರಿಕೆ ಹಾಕಿರುವುದಾಗಿ  ಸಂತ್ರಸ್ತೆ ಹೇಳಿಕೊಂಡಿದ್ದಾಳೆ. 

ಡಿಸೆಂಬರ್‌ 23 ರಂದು ಘಟನೆ ನಡೆದಿದ್ದು ತಡವಾಗಿ  ಬೆಳಕಿಗೆ ಬಂದಿದೆ. ಸಂತ್ರಸ್ತೆ ನೀಡಿದ ದೂರಿನಂತೆ ಕೃತ್ಯ ಎಸಗಿದ ಎಲ್ಲಾ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳು  ಸಾಹು, ಹರೀಶ್‌ ಚಂದ್ರಾಕರ್‌(24)ತ್ರಿನಾಥ್‌ ಮಹಾನಂದ(24) ಮತ್ತು ವಿನಯ್‌ ಯಾದವ್‌ (23) ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next