ಮುಂಬೈ: ಐಪಿಎಲ್ ನ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಯುಜುವೇಂದ್ರ ಚಾಹಲ್ ಮತ್ತೆ ಮಿಂಚಿದ್ದಾರೆ. ಅದ್ಭುತ ಬೌಲಿಂಗ್ ಮಾಡಿದ ಯುಜಿ, ಮುಂಬೈ ಬ್ಯಾಟ್ಸಮನ್ ಗಳನ್ನು ಕಟ್ಟಿ ಹಾಕುವಲ್ಲಿ ನೆರವಾದರು.
ಚಾಹಲ್ ಪ್ರದರ್ಶನದ ಬಗ್ಗೆ ಮಾತನಾಡಿದ ಮಾಜಿ ಆಟಗಾರ ವೀರೆಂದ್ರ ಸೆಹವಾಗ್, ಟಿ20 ವಿಶ್ವಕಪ್ ತಂಡದಿಂದ ಚಾಹಲ್ ರನ್ನು ಕೈಬಿಟ್ಟಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಚಾಹಲ್ ಕಳೆದ ಎರಡು ಪಂದ್ಯಗಳಲ್ಲಿ ಮಾತ್ರ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಹಲವು ಕಾಲದಿಂದ ಈತ ಉತ್ತಮ ಪ್ರದರ್ಶನ ನೀಡುತ್ತಿದ್ದಾನೆ. ಶ್ರೀಲಂಕಾ ಸರಣಿಯಲ್ಲೂ ಇದೇ ಪ್ರದರ್ಶನ ನೀಡಿದ್ದ. ಚುಟುಕು ಮಾದರಿ ಕ್ರಿಕೆಟ್ ನಲ್ಲಿ ಏನು ಮಾಡಬೇಕು ಎನ್ನುವುದು ಚಾಹಲ್ ಗೆ ಚೆನ್ನಾಗಿ ಗೊತ್ತಿದೆ ಎಂದು ಸೆಹವಾಗ್ ಹೇಳಿದ್ದಾರೆ.
ಇದನ್ನೂ ಓದಿ:ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಇಂಗ್ಲೆಂಡ್ ಆಲ್ ರೌಂಡರ್ ಮೋಯಿನ್ ಅಲಿ
ಚಾಹಲ್ ಮತ್ತು ಮ್ಯಾಕ್ಸವೆಲ್ ರ ಬೌಲಿಂಗ್ ಪ್ರದರ್ಶನದಿಂದ ಆರ್ ಸಿಬಿ ಗೆಲುವು ಸಾಧಿಸಿತು ಎಂದು ಸೆಹವಾಗ್ ಹೇಳಿದರು. ಚಾಹಲ್ ನಾಲ್ಕು ಓವರ್ ನಲ್ಲಿ ಕೇವಲ 11 ರನ್ ನೀಡಿ ಮೂರು ವಿಕೆಟ್ ಪಡೆದರೆ, ಮ್ಯಾಕ್ಸವೆಲ್ 23 ರನ್ ನೀಡಿ ಎರಡು ವಿಕೆಟ್ ಕಿತ್ತಿದ್ದರು.
ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಗೆ ಯುಜುವೇಂದ್ರ ಚಾಹಲ್ ಹೆಸರನ್ನು ಪರಿಗಣಿಸಲಾಗಿಲ್ಲ. ಟೀಂ ಇಂಡಿಯಾದಲ್ಲಿ ಸ್ಪಿನ್ನರ್ ಗಳಾಗಿ ವರುಣ್ ಚಕ್ರವರ್ತಿ, ರಾಹುಲ್ ಚಾಹರ್ ಮತ್ತು ರವಿ ಅಶ್ವಿನ್ ರನ್ನು ಆಯ್ಕೆ ಮಾಡಲಾಗಿದೆ.