ಈ ಅತಿಯಾದ ಕೋಪ ನಿನಗೆ ಒಳ್ಳೆಯದಲ್ಲ. ಏಕೆ ಅಂದರೆ, ನಿನ್ನ ಕೋಪ ನಿನ್ನ ಹತ್ರ ಇದ್ದವರೆನೆಲ್ಲಾ ದೂರ ಮಾಡುತ್ತೆ. ಅದರಲ್ಲಿ ನಾನೂ ಒಬ್ಬಳಾಗಿರುತ್ತೀನಿ ಅನ್ನೋದನ್ನು ನೆನಪಿಟ್ಕೋ.
ಹೇ ಮುದ್ದು, ಹೇ ಬಂಗಾರ, ಹಿಂಗೆಲ್ಲಾ ನಿನ್ನ ಕರೆದಾಗ, “ಏನ್ ಹೇಳು’ ಅಂತ ನೀನು ದೊಡ್ಡ ಧ್ವನಿಯಲ್ಲಿ ಕೇಳುತ್ತಿದ್ದೆ. ಆಗ ನನಗೆ ಮುಂದೆ ಮಾತಾಡೋಕೆ ಭಯವಾಗ್ತಾ ಇತ್ತು. ಆದರೂ, ನಿನ್ನ ಮೇಲೆ ಬೆಟ್ಟದಷ್ಟು ಕಾಳಜಿ, ಪರ್ವತದಷ್ಟು ಪ್ರೀತಿ. ಹಾಗಾಗಿ, ನೀನು ಎಷ್ಟು ಗದರಿಸಿದರೂ ನಿನ್ನ ದೂರ ಮಾಡಿಕೊಳ್ಳೋಕೆ ಆಗಲ್ಲ ಈ ಹೃದಯಕ್ಕೆ. ನಾನು ನಿನ್ನನ್ನು ಇಷ್ಟಪಟ್ಟು ಐದಾರು ವರ್ಷ ಕಳೆಯಿತು. ಆವತ್ತು ಇಲ್ಲದ ಕೋಪ ನಿನಗೆ ಇಂದು ಯಾಕೆ?
ನಿನ್ನನ್ನು ಮನಸಾರೆ ಇಷ್ಟ ಪಟ್ಟ ಹುಡುಗಿ ನಾನು. ನಿನಗಿಂತ ಮುಂಚೆ ತುಂಬಾ ಜನ ಹುಡುಗರು ನನ್ನ ಹಿಂದೆ ಬಿದ್ದರೂ, ಮನಸ್ಸಿಗೆ ಹಿಡಿಸಿದ ಹುಡುಗ ನೀನು ಮಾತ್ರ. ನಿನ್ನ ಆ ಒಳ್ಳೆಯತನ ಆ ಕಾಳಜಿ. ಬೆಲೆ ಕಟ್ಟಲಾಗದಿರುವಷ್ಟು ಪ್ರೀತಿ. ಇಷ್ಟೆಲ್ಲಾ ಒಳ್ಳೆಯ ಗುಣ ಇರುವವನು ನನ್ನ ಹುಡುಗ ಅಂದುಕೊಂಡಗೆಲ್ಲಾ ತುಂಬಾ ಖುಷಿ ಆಗ್ತಾ ಇತ್ತು.
ಆದರೆ ಈವಾಗೀವಾಗ ಪ್ರೀತಿಗಿಂತ ಕೋಪವೇ ಜಾಸ್ತಿ ಏಕೆ? ನನ್ನಿಂದ ನಿನಗೇನಾದರೂ ಬೇಜಾರು ಆಗಿದೆಯಾ, ಇಲ್ಲಾ, ನನ್ನಲ್ಲಿ ಏನಾದರೂ ಕೊರತೆ ಕಾಣಾ¤ ಇದೆಯಾ? ಪ್ಲೀಸ್, ಅದೇನಿದ್ದರೂ ಹೇಳಿಬಿಡು. ಯಾಕೆ ಅಂದರೆ, ಇಷ್ಟು ದಿನ ನಿನ್ನ ಪ್ರೀತಿ, ಸಣ್ಣ ಪುಟ್ಟ ಕೋಪ. ಜಗಳ ಮಾತ್ರ ಗೊತ್ತಿತ್ತು. ಆದರೆ ಇವಾಗ ನೀನು ನನ್ನ ಹತ್ರ ಮಾತನಾಡದೆ, ನನ್ನ ನಂಬರನೆಲ್ಲಾ ಬ್ಲಾಕ್ ಮಾಡುವ ಮಟ್ಟಿಗೆ ಕೋಪ ಮಾಡ್ಕೊàತಿಯಾ ಯಾಕೆ?
ಈ ಅತಿಯಾದ ಕೋಪ ನಿನಗೆ ಒಳ್ಳೆಯದಲ್ಲ. ಏಕೆ ಅಂದರೆ, ನಿನ್ನ ಕೋಪ ನಿನ್ನ ಹತ್ರ ಇದ್ದವರೆನೆಲ್ಲಾ ದೂರ ಮಾಡುತ್ತೆ. ಅದರಲ್ಲಿ ನಾನೂ ಒಬ್ಬಳಾಗಿರುತ್ತೀನಿ ಅನ್ನೊದನ್ನು ನೆನಪಿಟ್ಕೋ. ನೀನಾಗೇ ನನ್ನನ್ನೂ ದೂರ ಮಾಡ್ಕೊಳ್ಳೋ ಸನ್ನಿವೇಶ ಬಂದರು ಸಂಶಯವಿಲ್ಲ. ಈವಾಗ ನನಗೆ ನಿನ್ನ ಕಳೆದುಕೊಳ್ಳುವ ಭಯ ಶುರುವಾಗಿದೆ. ಪ್ಲೀಸ್, ನಿನ್ನ ಕೋಪ ಕಮ್ಮಿ ಮಾಡ್ಕೋ.
ಇದೆಲ್ಲಾ ನಿನ್ನ ಮುಂದೆ ಹೇಳ್ಳೋಕೂ ಭಯ ಆಯ್ತು. ಮತ್ತೆ ಪುನಃ ನನ್ನ ಹತ್ರ ಕೋಪ ಮಾಡ್ಕೊತೀಯಾ ಅಂತ ಅನಿಸಿ ಈ ಪತ್ರದ ಮೂಲಕ ಹೇಳ್ತಾ ಇದಿನಿ. ವರ್ಷಗಳ ಪ್ರೀತಿನ ಒಂದು ದಿನದಲ್ಲಿ ಕಳೆದುಕೊಳ್ಳವ ಹಾಗೆ ಆಗೋದುಬೇಡ. ನಮ್ಮ ಈ ಪ್ರೀತಿ ನಮ್ಮಿಬ್ಬರ ಜೀವನದುದ್ದಕ್ಕೂ ಇರಬೇಕೆಂಬ ಆಸೆ ನನ್ನದು.
ಇಂತಿ ನಿನ್ನವಳು
ದಿತ್ಯಾ ಗೌಡ