Advertisement
ಕ್ಸಿಯೋಮಿ ವಿರುದ್ಧದಕೇಸ್ ಏನು?ಏಪ್ರಿಲ್ ತಿಂಗಳ ಆರಂಭದಲ್ಲಿ ಜಾರಿ ನಿರ್ದೇಶನಾಲಯವು, ಕಂಪನಿಯ ಗ್ಲೋಬಲ್ ವೈಸ್ ಪ್ರೆಸಿ ಡೆಂಟ್ ಮನು ಕುಮಾರ್ ಜೈನ್ ಅವರನ್ನು ಕರೆಸಿಕೊಂಡು ವಿಚಾರಣೆ ನಡೆಸಿತ್ತು. ಅಂದರೆ, ಕ್ಸಿಯೋಮಿ ಕಂಪನಿಯು ಮೂರನೇ ದೇಶದ ಚಾನೆಲ್ ಮೂಲಕ ಚೀನಾಗೆ ಇಲ್ಲಿಂದ ಹಣ ಕಳುಹಿಸುತ್ತಿತ್ತು. ಇದು ವಿದೇಶಾಂಗ ವಿನಿಮಯ ಕಾಯ್ದೆ ಮತ್ತು ಆರ್ ಬಿಐ ನಿಯಮಗಳ ಸ್ಪಷ್ಟ ಉಲ್ಲಂಘನೆ. ಅಷ್ಟೇ ಅಲ್ಲ, 3 ವರ್ಷದ ಹಿಂದೆ ಕ್ಸಿಯೋಮಿ ಕಂಪನಿಯೇ ಚೀನಾಗೆ 3 ಸಾವಿರ ಕೋಟಿ ರೂ. ಹಣ ಕಳುಹಿಸಿತ್ತು.
ಶನಿವಾರವಷ್ಟೇ ಜಾರಿ ನಿರ್ದೇಶನಾಲಯ( ಇ.ಡಿ.)ವು ಕ್ಸಿಯೋಮಿ ಕಂಪನಿಯ 5,551.27 ಕೋಟಿ ರೂ.ಗ ಳನ್ನು ಜಪ್ತಿ ಮಾಡಿದೆ. ವಿದೇಶಿ ವಿನಿಮಯ ಕಾಯ್ದೆಯನ್ನು ಕ್ಸಿಯೋಮಿ ಉಲ್ಲಂಘಿಸಿದೆ ಎಂಬುದು ಇ.ಡಿ. ಆರೋಪ. ಈ ಕಂಪನಿಯ ಬ್ಯಾಂಕ್ ಅಕೌಂಟ್‌ನಲ್ಲಿದ್ದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆ ಸಂದರ್ಭದಲ್ಲೇ ಕಂಪನಿಯ ಷೇರುದಾರರು, ಹಣದ ಮೂಲ ಮತ್ತು ವ್ಯಾಪಾರಿಗಳ ಜತೆಗಿನ ಒಪ್ಪಂದದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿತ್ತು. ಮೂರು ಕಂಪನಿಗಳಿಗೆ ಹಣ ವರ್ಗಾವಣೆ
ಜಾರಿ ನಿರ್ದೇಶನಾಲಯದ ಪ್ರಕಾರ, ಕ್ಸಿಯೋಮಿ ಕಂಪನಿಯು 3 ಕಂಪನಿಗಳಿಗೆ ರಾಯಲ್ಟಿ ರೂಪದಲ್ಲಿ ಭಾರೀ ಪ್ರಮಾಣದ ಹಣವನ್ನು ಇಲ್ಲಿಂದ ಕಳುಹಿಸಲಾಗಿತ್ತು.
ಅಂದರೆ, ಚೀನಾದಲ್ಲಿರುವ ಮೂಲ ಕಂಪನಿಯ ಆದೇಶದಿಂದ ಈ ಮೂರು ಕಂಪನಿಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಅಲ್ಲದೆ, ಭಾರತಕ್ಕೂ, ಕ್ಸಿಯೋಮಿಯಿಂದ ಹಣ ಸ್ವೀಕರಿಸಿದ ಮೂರು ಕಂಪನಿಗಳಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿಯೇ ಹಣ ಮುಟ್ಟು ಗೋಲು ಹಾಕಿಕೊಳ್ಳಲಾಗಿದೆ.