Advertisement
ನಮ್ಮಲ್ಲೊಂದು ಕ್ರಮವಿದೆ. ಯಾವುದೇ ಪೂಜೆಯ ಕೊನೆಗೆ ಅಥವಾ ಯಾವುದೇ ಸೇವೆ/ ವಸ್ತು ದೇವರಿಗೆ ಅರ್ಪಿಸುವಾಗ ಕೃಷ್ಣಾರ್ಪಣಮಸ್ತು ಎಂದು ಹೇಳಿ, ತುಳಸಿ ನೀರು ಬಿಟ್ಟು ವಸ್ತುವನ್ನು ಅರ್ಪಿಸಿ ತುಳಸಿಯನ್ನು ಮಾತ್ರ ಸ್ವೀಕರಿಸುತ್ತೇವೆ. ಇಲ್ಲಿ ಏಕೆ ಶ್ರೀ ಕೃಷ್ಣಾರ್ಪಣಮಸ್ತು ಅಂತ ಹೇಳಬೇಕು? ಏಕೆ ರಾಮಾರ್ಪಣಮಸ್ತು, ವೆಂಕಟರಮಣಾರ್ಪಣಮಸ್ತು, ಮತ್ಸಾರ್ಪಣಮಸ್ತು, ಕೂರ್ಮಾರ್ಪಣಮಸ್ತು, ವರಾಹಾರ್ಪಣಮಸ್ತು… ಹೀಗೆ ಯಾವುದೇ ದೇವರ ಹೆಸರಿನಲ್ಲಿ ಅರ್ಪಣಮಸ್ತು ಹೇಳಲ್ಲ?
Related Articles
Advertisement
ಇದೆಲ್ಲವೂ ನಮ್ಮ ಅಹಂ ತೋರಿಸುತ್ತದೆ. ಒಮ್ಮೆ ದೇವರಿಗೆ ಕೃಷ್ಣಾರ್ಪಣ ಆಯಿತೋ, ಆ ವಸ್ತು/ ಸೇವೆ/ಪೂಜೆ ದೇವರಿಗೆ ಸೇರಿದ್ದು. ನಮಗೆ ಅದರ ಮೇಲೆ ಯಾವುದೇ ಹಕ್ಕಿಲ್ಲ. ಕೃಷ್ಣಾರ್ಪಣೆಯ ತುಳಸಿಯೊಂದೇ ನಮ್ಮ ಭಾಗಕ್ಕೆ. ಅಹಂಕಾರವನ್ನು ತ್ಯಜಿಸಿ ಕೃಷ್ಣಾರ್ಪಣ ಮಾಡಿದರಂತೂ ಅಮಿತ ಪುಣ್ಯ ಫಲ.
ಗೋವಿಂದನ ಮುಂದೆ ಅಹಂಭಾವದಿಂದ ವರ್ತಿಸಿದರೆ “for every action there is an equal and opposite reaction”. ನಿರಹಂಕಾರದಿಂದ ಗೋವಿಂದನ ಮುಂದೆ ವರ್ತಿಸಿದರೆ ಜೀವನದಲ್ಲಿ “only ಭಗವಂತನ ACTION – ಅದುವೇ ದೇವರ ಕೃಪೆ, ಶ್ರೀ ಕೃಷ್ಣಾನುಗ್ರಹ.
ಕೃಷ್ಣಾರ್ಪಣವೇ ಯಾಕೆ ?ಎಲ್ಲರೂ ಸಂಧ್ಯಾವಂದನಾದಿ ಕರ್ಮಗಳನ್ನು ಮಾಡಿ ಕೃಷ್ಣಾರ್ಪಣವೆನ್ನುತ್ತಾರೆ.
ಕೃಷ್ಣಾರ್ಪಣವೇ ಯಾಕೆ ಎಂದರೆ, ಕೆಲವರು ಕೃಷ್ಣನ ರೂಪ ಕಲಿಯುಗಕ್ಕೆ ಅತ್ಯಂತ ಹತ್ತಿರದ ರೂಪವಾದ್ದರಿಂದ ಕೃಷ್ಣಾರ್ಪಣವೆನ್ನಬೇಕು ಎಂದು ಹೇಳುತ್ತಾರೆ. ಅದು ಸರಿ. ಅದರ ಜೊತೆಗೆ ಬ್ರಹ್ಮಾಂಡಪುರಾಣದ ವೆಂಕಟೇಶ ಮಹಾತೆ¾ಯಲ್ಲಿ ಈ ರೀತಿ ತಿಳಿಸುತ್ತಾರೆ. ಕೃತೇ ಶ್ವೇತಂ ಹರಿಂ ವಿಂದ್ಯಾತ್ ತ್ರೇತಾಯಾಂ ರಕ್ತವರ್ಣಕಂ ದ್ವಾಪರೇ ಪೀತವರ್ಣಂ ತು ಕೃಷ್ಣವರ್ಣಂ ಕಲೌ ಯುಗೇ- ಎಲ್ಲಾ ಜೀವರ ಹೃದ್ಗುಹಾವಾಸಿಯಾದ ಭಗವಂತ ಒಬ್ಬನೇ ಆದರೂ, ಯುಗಾನುಸಾರ ತನ್ನ ಬಣ್ಣವನ್ನು ಬದಲಿಸುತ್ತಾನೆ. ಕೃತಯುಗದಲ್ಲಿ ಬಿಳಿ, ತ್ರೇತಾಯುಗದಲ್ಲಿ ಕೆಂಪು, ದ್ವಾಪರದಲ್ಲಿ ಹಳದಿ ಹಾಗೂ ಕಲಿಯುದಲ್ಲಿ ಕೃಷ್ಣ ಬಣ್ಣದಿಂದ ಕೂಡಿ ಎಲ್ಲರ ಬಿಂಬವಾಗಿದ್ದಾ ನೆ. ಕೃಷ್ಣ ವರ್ಣ ಕಲೌ ಕೃಷ್ಣಂ ಎಂದಿದ್ದಾರೆ. ಆದ್ದರಿಂದಲೇ ಕೃಷ್ಣಾರ್ಪಣವೆನ್ನುವುದು ಅತ್ಯಂತ ಸಮಂಜಸವಾದದ್ದು ಅದಕ್ಕೇ ಏನೋ ವ್ಯಾಸರಾಯರು ಮೂರು ಬಾರಿ ಕೃಷ್ಣನನ್ನು ಕರೆದದ್ದು. ಒಂದು ಬಿಂಬನನ್ನು, ಮತ್ತೂಂದು ಅವತಾರ ರೂಪವನ್ನು, ಮಗದೊಂದು ಮೂಲರೂಪವನ್ನು. ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ, ಸಂತುಷ್ಟನಾಗಿ ಮುಕುತಿ ಕೊಟ್ಟು ಮಿಕ್ಕ ಭಾರ ಹೊರುವೆನು. ಸ್ವತಃ ಶ್ರೀ ಕೃಷ್ಣನೇ ಗೀತೆಯಲ್ಲಿ ತಿಳಿಸಿ¨ªಾನೆ. ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್/ ಯತ್ತಪಸ್ಯಸಿ ಕೌಂತೇಯ ತತುRರುಷÌ ಮದರ್ಪಣಮ್// ಏನೇ ಮಾಡು ಅದನ್ನು ನನಗರ್ಪಿಸು ಎಂದು ನೇರವಾಗಿ ತನಗರ್ಪಿಸುವಂತೆ ತಿಳಿಸಿಲ್ಲವೇ? ದೀಪಾ ಉಡುಪಿ