Advertisement

ಟೋಲ್‌ ಪ್ಲಾಜಾಗಳು ಯಾಕೆ ಯಾವತ್ತೂ ಬಿಝಿ?

01:12 AM Jul 15, 2019 | sudhir |

ಮಣಿಪಾಲ: 2014ರಲ್ಲಿ ಭಾರತದ ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಪರಿಚಯಿಸಲಾಯಿತು. ಟೋಲ್‌ಗ‌ಳಲ್ಲಿ ಟ್ರಾಫಿಕ್‌ ಸಮಸ್ಯೆ ಕಂಡು ಬರುತ್ತಿರುವುದನ್ನು ಮನಗಂಡ ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಸ್ವಯಂಚಾಲಿತ ಕಾರ್ಯ ನಿರ್ವಹಿಸುವ ಫಾಸ್ಟ್‌ಟ್ಯಾಗ್‌ ಟೋಲ್‌ ವ್ಯವಸ್ಥೆಯನ್ನು ಜಾರಿಗೆ ತಂದಿತು. ಆದರೆ ಕಾರಣಾಂತರಗಳಿಂದ ಅವು ಇಂದು ತಮ್ಮ ಆಶಯದಿಂದ ವಿಮುಖವಾಗುತ್ತಿವೆ. ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಇದ್ದರೂ ಕ್ಷಿಪ್ರವಾಗಿ ವಾಹನಗಳನ್ನು ಟೋಲ್‌ಗೇಟ್‌ಗಳು ಬಿಟ್ಟು ಕೊಡುತ್ತಿಲ್ಲ. ಇದರಿಂದ ಹಣ ಕೊಟ್ಟು ತೆರಳುವ ವಾಹನಗಳು ಮತ್ತು ಫಾಸ್ಟ್‌ಟ್ಯಾಗ್‌ ಮೂಲಕ ಸಂಚರಿಸುವ ವಾಹನಗಳು ಸಮಾನ ಸಮಯವನ್ನು ಟೋಲ್‌ಗ‌ಳಲ್ಲಿ ವ್ಯಯಿಸುವಂತಾಗಿದೆ. ಇದು ಫಾಸ್ಟ್‌ಟ್ಯಾಗ್‌ ಹೊಂದಿದ ವಾಹನಗಳು ನಿಲುಗಡೆ ಇಲ್ಲದೆ ಚಲಿಸಬೇಕು ಎನ್ನುವ ಆಶಯಕ್ಕೆ ವಿರುದ್ಧವಾಗಿದೆ.

Advertisement

ಏನಿದು ಫಾಸ್ಟ್‌ಟ್ಯಾಗ್‌?
ಆರ್‌ಎಫ್ಐಡಿ ಎನ್ನುವ ತಂತ್ರಜ್ಞಾನದ ಸಹಾಯದೊಂದಿಗೆ ಕಾರ್ಯನಿರ್ವಹಿಸುವ ಫಾಸ್ಟ್‌ಟ್ಯಾಗ್‌ ಅನ್ನು ಕಾರಿನ ಅಥವಾ 4 ಚಕ್ರ ಮೀರಿದ ಯಾವುದೇ ವಾಹನಗಳ ಕಿಟಕಿಯ ಬಳಿ ಅಳವಡಿಸಲಾಗುತ್ತದೆ. ಇದು ಟೋಲ್‌ ಪ್ಲಾಜಾದಲ್ಲಿರುವ ಫಾಸ್ಟ್‌ಟ್ಯಾಗ್‌ ಲೈನ್‌ ಮೂಲಕ ಸಂಚರಿಸುವಾಗ ಸ್ವಯಂಚಾಲಿತವಾಗಿ ಆಗಿ ಸ್ಕ್ಯಾನ್‌ ಆಗುತ್ತದೆ. ಕಾರು ಮಾಲಕನ ಫಾಸ್ಟ್‌ಟ್ಯಾಗ್‌ ಅಕೌಂಟ್‌ನಿಂದ ಶುಲ್ಕ ಸಂದಾಯ ವಾಗುತ್ತದೆ. ಇದರ ನೋಟಿಫಿಕೇಶನ್‌ ಎಸ್‌ಎಂಎಸ್‌ ಮೂಲಕ ಬರುತ್ತದೆ. ಈ ವ್ಯವಸ್ಥೆಯಲ್ಲಿ ಕ್ಯೂ ನಿಂತು ಹಣ ಸಂದಾಯ ಮಾಡಿ ರಶೀದಿ ಪಡೆಯುವ ಅಗತ್ಯ ಇಲ್ಲ. ದೇಶದ ಶೇ. 90ರಷ್ಟು ಟೋಲ್‌ಗ‌ಳಲ್ಲಿ ಈಗಾಗಲೇ ಈ ವ್ಯವಸ್ಥೆ ಇದ್ದು,ಕ್ಷಿಪ್ರವಾಗಿ ಕಾರ್ಯ ನಿರ್ವಹಿಸುವ ಇರಾದೆ ಹೊಂದಿದೆ.

ಫಾಸ್ಟ್‌ಟ್ಯಾಗ್‌ ಖರೀದಿ ಹೇಗೆ ?
- ಟೋಲ್‌ಪ್ಲಾಜಾಗಳು
- ಐಒಸಿ, ಎಚ್‌ಪಿಸಿಎಲ್‌, ಬಿಪಿಸಿಎಲ್‌ ಪಂಪ್‌ಗ್ಳು
- ಅಮೆಜಾನ್‌ ಡಾಟ್‌ ಇನ್‌ (amezone.in)
-ಬ್ಯಾಂಕ್‌ಗಳು, ಪೇಟಿಎಂ ಆ್ಯಪ್‌
- ಖಾಸಗಿ ಏಜೆನ್ಸಿಗಳು

ಪಡೆಯಲು ಬೇಕಾದ ದಾಖಲೆಗಳು
– ವಾಹನದ ಆರ್‌ಸಿ ಪುಸ್ತಕ
– ವಾಹನ ಮಾಲಕರ ಒಂದು ಪಾಸ್‌ಪೋರ್ಟ್‌ ಸೈಜ್‌ ಭಾವಚಿತ್ರ
– ವಾಹನದ ಕೆವೈಸಿ ದಾಖಲೆ
– ವಿಳಾಸ ಮತ್ತು ಐಡಿ ಪ್ರೂಫ್ (ಆಧಾರ್‌, ವೋಟರ್‌ ಐಡಿ, ಪಾಸ್‌ಪೋರ್ಟ್‌ ಅಥವಾ ಪಾನ್‌ ಕಾರ್ಡ್‌)

ನಾವೇನು ಮಾಡಬೇಕು?
– ವಾಹನಕ್ಕೆ ಫಾಸ್ಟ್‌ಟ್ಯಾಗ್‌ ಅಳವಡಿಸಿ.
– ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಇಲ್ಲದಿದ್ದರೆ ಆ ಟ್ರ್ಯಾಕ್‌ನಲ್ಲಿ ಸಂಚರಿಸಬೇಡಿ.
– ಅನಗತ್ಯ ಗೊಂದಲಕ್ಕೆ ಅವಕಾಶ ನೀಡಬೇಡಿ.

Advertisement

ಇತರ ಕಾರಣಗಳು
– ಕೇವಲ 90 ಶೇ. ಟೋಲ್‌ಗ‌ಳಲ್ಲಿ ಮಾತ್ರ ಅಳವಡಿಕೆ.
– ಫಾಸ್ಟ್‌ಟ್ಯಾಗ್‌ ಟ್ರ್ಯಾಕ್‌ನಲ್ಲಿ ಇತರ ವಾಹನಕ್ಕೂ ಅವಕಾಶ.
– ನಾನ್‌ ಟ್ಯಾಗ್‌ ವಾಹನ ಸವಾರರು ಫಾಸ್ಟ್‌ಟ್ಯಾಗ್‌ ಟ್ರ್ಯಾಕ್‌ ಪ್ರವೇಶಿಸುವುದು.
– ಲೆನ್‌ನತ್ತ ಬರುವ ವಾಹನಗಳ ಅತೀ ವೇಗದ ಸಂಚಾರ, ತಡೆಯಲು ಸಿಬಂದಿ ವಿಫ‌ಲ.
– ಟ್ಯಾಗ್‌ಗಳ ಕ್ಷಿಪ್ರ ವಿಲೇವಾರಿಗಾಗಿ ತಂತ್ರಜ್ಞಾನಗಳಲ್ಲಿ ಲೋಪ
– ಅನಧಿಕೃತ ವಾಹನಗಳು ಟ್ರ್ಯಾಕ್‌ ಪ್ರವೇಶಿಸುತ್ತಿರುವ ಕಾರಣ ಇದರ ನಿರ್ಬಂಧಕ್ಕೆ ಗೇಟ್‌ ಅಳವಡಿಕೆ.

ಏನು ಲಾಭ?
ಈ ಫಾಸ್ಟ್‌ ಟ್ಯಾಗ್‌ ವ್ಯವಸ್ಥೆಯ ಮೂಲ ಉದ್ದೇಶವೇ ಟೋಲ್‌ಗ‌ಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದು. ಆದರೆ ವ್ಯವಸ್ಥೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇಂತಹ ಲೋಪಗಳು ಉಂಟಾಗುತ್ತವೆ. ಕ್ಯಾಶ್‌ಲೆಸ್‌ ಪೇಮೆಂಟ್‌ ವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿಯೂ ಇದು ಅನುಷ್ಠಾನಗೊಂಡಿದೆ. ಫಾಸ್ಟ್‌ಟ್ಯಾಗ್‌ ಮೂಲಕ ವಾಹನ ಸಂಚಾರ ಮಾಡು ವುದರಿಂದ “ಝಿರೋ ಟ್ರಾಫಿಕ್‌ ‘ ಮೂಲಕ ಹಾದುಹೋಗಬಹುದಾಗಿದೆ.

50% ಪಾವತಿ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪ್ರತಿನಿತ್ಯ 60ರಿಂದ 65 ಕೋಟಿ ಮೊತ್ತ ಅಂದರೆ ದಿನದ ಶೇ. 30ರಷ್ಟು ಪಾಲನ್ನು ಎಲೆಕ್ಟ್ರಾನಿಕ್‌ ಪಾವತಿ ವ್ಯವಸ್ಥೆ ಮೂಲಕ ಗಳಿಸುತ್ತಿದೆ. 2018ರಲ್ಲಿ 100 ಕೋಟಿ ರೂ.ಗಳನ್ನು ಫಾಸ್ಟ್‌ಟ್ಯಾಗ್‌ಗಳ ಮೂಲಕ ಸಂಗ್ರಹಿಸಲಾಗುತ್ತಿತ್ತು. ಇನ್ನು ಭೋಪಾಲ್‌, ಚಂಡೀಗಡ್‌, ಲಕ್ನೋ ಮತ್ತು ವಿಜಯವಾಡಗಳಲ್ಲಿ ಶೇ. 40ರಿಂದ 50 ಶೇ. ಪಾವತಿಯಾಗುತ್ತದೆ.

ತಡವಾಗಲು ಕಾರಣ ಏನು?
ಟೋಲ್‌ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್‌ಗಳಿಗೆ ಮಾತ್ರ ನಿರ್ಮಿಸಲಾದ ಟ್ರ್ಯಾಕ್‌ಗಳು ಇರುತ್ತವೆ. ನಮ್ಮ ವಾಹನ ಈ ಹೈಬ್ರಿಡ್‌ ಟ್ರ್ಯಾಕ್‌ನಲ್ಲಿ ಕ್ಯೂ ನಿಂತು ಮುಂದುವರಿಯಬೇಕಾಗಿಲ್ಲ. “ಝಿರೋ ಟ್ರಾಫಿಕ್‌’ ಮೂಲಕ ಟೋಲ್‌ ದಾಟಬಹುದಾಗಿದೆ. ಆದರೆ ದೇಶದ ಬಹುತೇಕ ಟೋಲ್‌ಗ‌ಳಲ್ಲಿ ನಿರ್ಮಿಸಲಾದ ಈ ವ್ಯವಸ್ಥೆಯ ಟ್ರ್ಯಾಕ್‌ಗಳಲ್ಲಿ ಫಾಸ್ಟ್‌ ಟ್ಯಾಗ್‌ ಹೊಂದಿದ ಮತ್ತು ಹೊಂದಿಲ್ಲದ ವಾಹನಗಳು ಸಂಚರಿಸುವ ಕಾರಣ ನಿಲುಗಡೆ ಇಲ್ಲದೆ ಮುಂದು
ವರಿಯಲು ಆಗುತ್ತಿಲ್ಲ.

ಯಾರು ಹೊಣೆ?
ನಮ್ಮ ವಾಹನ ಫಾಸ್ಟ್‌ಟ್ಯಾಗ್‌ ಹೊಂದಿಲ್ಲದೆ, ಆ ಟ್ರ್ಯಾಕ್‌ ಬಳಸಿದರೆ ಕೆಲವು ಕಡೆಗಳಲ್ಲಿ ದಂಡ ಕಟ್ಟಬೇಕಾಗುತ್ತದೆ. ಮಾತ್ರವಲ್ಲದೆ, ಟೋಲ್‌ ಮೊತ್ತ ನೀಡಿ ಕೂಪನ್‌ ಪಡೆದು ಸಾಗಬೇಕಾಗುತ್ತದೆ. ಈ ಸಂದರ್ಭ ಅದೇ ಟ್ರ್ಯಾಕ್‌ನಲ್ಲಿ ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಇರುವ ವಾಹನ ಬಂದರೆ ಅಂತಹ ವಾಹನಗಳು ಕ್ಯೂನಲ್ಲಿ ಕಾಯಬೇಕಾಗುತ್ತದೆ.

– ಮಣಿಪಾಲ ಸ್ಪೆಷಲ್ ಡೆಸ್ಕ್

Advertisement

Udayavani is now on Telegram. Click here to join our channel and stay updated with the latest news.

Next