Advertisement

ಅಸಾರಾಮ್ ಬಾಪು ರೇಪ್ ಕೇಸ್; ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಚಾಟಿ

02:30 PM Aug 28, 2017 | Team Udayavani |

ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ತೀರ್ಪು ಪ್ರಕಟವಾದ 3 ದಿನಗಳ ಬಳಿಕ ಅತ್ಯಾಚಾರ ಪ್ರಕರಣದಲ್ಲಿ ಶಾಮೀಲಾಗಿರುವ  ಮತ್ತೊಬ್ಬ ಸ್ವಘೋಷಿತ ದೇವಮಾನ ಅಸಾರಾಮ್ ಬಾಪು ವಿರುದ್ಧದ ನಿಧಾನಗತಿಯ ವಿಚಾರಣೆಯ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

Advertisement

ಅಸಾರಾಮ್ ಬಾಪು ರೇಪ್ ಆಪಾದನೆಯಡಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದರೂ ಕೂಡಾ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿರುವ ಯುವತಿಯನ್ನು ಯಾಕೆ ವಿಚಾರಣೆಗೆ ಗುರಿಪಡಿಸಿಲ್ಲ ಎಂದು ಪ್ರಶ್ನಿಸಿದೆ. ಈ ಬಗ್ಗೆ ಗುಜರಾತ್ ಸರ್ಕಾರ ಕೂಡಲೇ ಅಫಿಡವಿತ್ ಸಲ್ಲಿಸಬೇಕೆಂದು ನಿರ್ದೇಶನ ನೀಡಿರುವುದಾಗಿ ಎಎನ್ ಐ ವರದಿ ಮಾಡಿದೆ.

ಯಾಕೆ ವಿಚಾರಣೆಯನ್ನು ವಿಳಂಬ ಮಾಡಲಾಗುತ್ತಿದೆ? ಯಾಕೆ ನೀವಿನ್ನೂ ಸಂತ್ರಸ್ತೆಯನ್ನು ಪರೀಕ್ಷೆಗೊಳಪಡಿಸಿಲ್ಲ ಎಂದು ಗುಜರಾತ್ ಸರ್ಕಾರಕ್ಕೆ ಚಾಟಿ ಬೀಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಪ್ರಗತಿ ಕುರಿತ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.

2013 ಆಗಸ್ಟ್ ನಿಂದ ಅಸಾರಾಮ್ ಬಾಪು (76ವರ್ಷ) ರಾಜಸ್ಥಾನ ಜೈಲಿನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಹೈಕೋರ್ಟ್ ಹಲವು ಬಾರಿ ಜಾಮೀನನ್ನು ತಿರಸ್ಕರಿಸಿತ್ತು. 2013ರಲ್ಲಿ ಸೂರತ್ ಮೂಲದ ಯುವತಿ ಅಸಾರಾಮ್ ಬಾಪು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. 1997ರಿಂದ 2006ರವರೆಗೆ ಆಶ್ರಮದಲ್ಲಿದ್ದ ವೇಳೆ ತನ್ನ ಮೇಲೆ ಅಸಾರಾಮ್ ಅತ್ಯಾಚಾರ ಎಸಗಿರುವುದಾಗಿ ಯುವತಿ ದೂರು ನೀಡಿದ್ದಳು. ದೂರು ದಾಖಲಾದ ನಂತರ 2013ರ ಆಗಸ್ಟ್ 3ರಂದು ಜೋಧ್ ಪುರ್ ಪೊಲೀಸರು ಅಸಾರಾಮ್ ಬಾಪುನನ್ನು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next