ನವದೆಹಲಿ : ದೇಶಾದ್ಯಂತ ಕೋವಿಡ್ ಅಟ್ಟಹಾಸ ಮೆರೆಯುತ್ತಿದೆ. ಇದೇ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಕಲಿಕೆಯ ಮೇಲೂ ಪ್ರಭಾವ ಬೀರಿದೆ. ಕಳೆದ ಎರಡು ವರ್ಷಗಳಿಂದ ಆನ್ ಲೈನ್ ತರಗತಿಗಳಲ್ಲಿ ಕಲಿಯುತ್ತಿರುವ ಮಕ್ಕಳು ಬೇಸತ್ತಿದ್ದಾರೆ. ಅಲ್ಲದೆ ಹೋಮ್ ವರ್ಕ್ ಹೊರೆಯಿಂದಲೂ ಸಾಕು ಸಾಕಾಗಿ ಹೋಗಿದ್ದಾರೆ.
ಆನ್ ಲೈನ್ ತರಗತಿ ಮತ್ತು ಹೋಮ್ ವರ್ಕ್ ನಿಂದ ನೊಂದಿರುವ ಆರು ವರ್ಷದ ಕಾಶ್ಮೀರಿ ಬಾಲಕಿಯೊಬ್ಬಳು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ವಿಡಿಯೋ ಮೂಲಕ ಸಂದೇಶವೊಂದನ್ನು ಕಳುಹಿಸಿದ್ದಾಳೆ. ಸದ್ಯ ಬಾಲಕಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಮಾತನಾಡಿರುವ ಬಾಲಕಿ, ನಾನು ಆರು ವರ್ಷದ ಬಾಲಕಿ, ನಮ್ಮ ಸೀನಿಯರ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೋಮ್ ವರ್ಕ್ ಕೊಡಿ. 7-8 ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ವರ್ಕ್ ಕೊಡಿ. ನಮಗೆ ಕೊಡಬೇಡಿ ಎಂದು ವಿಡಿಯೋದಲ್ಲಿ ಬಾಲಕಿ ಕೇಳಿದ್ದಾಳೆ.
ಅಲ್ಲದೆ ನಮಗೆ ಬ್ಯಾಕ್ ಟು ಬ್ಯಾಕ್ ಕ್ಲಾಸ್ ಗಳನ್ನು ತೆಗೆದುಕೊಳ್ಳುತ್ತಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನಾ 2 ಗಂಟೆಯವರೆಗೆ ಬಿಡುವಿಲ್ಲದೆ ತರಗತಿಯನ್ನು ತೆಗೆದುಕೊಳ್ಳುತ್ತಾರೆ ಎಂದು ವಿದ್ಯಾರ್ಥಿನಿ ದೂರಿದ್ದಾಳೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, 44,000 ವೀಕ್ಷಣೆ ಪಡೆದಿದೆ.