ಉಡುಪಿ: ರಮನಾಥ ರೈ ಅವರು ಗೃಹ ಸಚಿವರಾಗುತ್ತಾರೆ ಎಂದು ಕೇಳಿ ಬರುತ್ತಿದೆ. ಅವರು ಹೆಬ್ಬೆಟ್ಟಿಗೆ ಮಾತ್ರ ,ಆದರೆ ಕೆಲಸ ನಿರ್ವಹಿಸುವುದು ಕೆಂಪಯ್ಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಭಾನುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ‘ಸಿದ್ದರಾಮಯ್ಯ ಅವರಿಗೆ ಕೆಂಪಯ್ಯ ಏಕೆ ಅನಿವಾರ್ಯ’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್ಗೆ ಈಗ ಮಾಡಿದ್ದುಣ್ಣು ಮಾರಾಯ ಎನ್ನುವ ಪರಿಸ್ಥಿತಿ ಬಂದಿದೆ. ಗುಜರಾತ್ನ ಶಾಸಕರನ್ನು ಕರೆತಂದು ರೆಸಾರ್ಟ್ನಲ್ಲಿ ಇರಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ನ 7 ಶಾಸಕರನ್ನು ಹೈಜಾಕ್ ಮಾಡಿದರು. ಅದರ ಫಲ ಈಗ ಉಣ್ಣುತ್ತಿದ್ದಾರೆ’ ಎಂದು ಕಿಕಿ ಕಾರಿದರು.
‘ರೆಸಾರ್ಟ್ಗಳಿಗೆ ಹೆಚ್ಚುವರಿ ಭದ್ರತೆ ನೀಡಿಲು ಪೊಲೀಸರನ್ನು ನಿಯೋಜಿಸಲಾಗಿದೆ. ಸರ್ಕಾರ ರಾಜ್ಯದ ಜನತೆಗೆ ಭದ್ರತೆ ನೀಡಲಿ’ ಎಂದರು.
‘ರಾಜ್ಯದ ಜಲಾಶಯಗಳ ನೀರನ್ನು ಕೆರೆಗಳಿಗೆ ಹರಿಸುವಲ್ಲಿ ಸರ್ಕಾರ ಕೆಲಸ ಮಾಡಲಿ , ಬದಲಾಗಿ ನೆರೆ ರಾಜ್ಯಕ್ಕೆ ಹರಿಯಬಿಡುವ ಅಗತ್ಯ ಇಲ್ಲ. ನಮ್ಮ ಕೆರೆಗಳಿಗೆ ಜಲಾಶಯಗಳ ನೀರು ಹರಿಸಲಿ’ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.