Advertisement

ಗೋವು ಕೇವಲ ಸಾಕುಪ್ರಾಣಿಯಲ್ಲ, ದೇವರ ರೂಪ

03:25 AM Nov 17, 2018 | |

ಗೋವನ್ನು ಯಾಕೆ ಪೂಜಿಸಬೇಕು? ಎಂಬ ಪ್ರಶ್ನೆಗೆ ಉತ್ತರವೇ ನಾವು. ಅಗೋಚರಶಕ್ತಿಯನ್ನು ಪೂಜಿಸುವ ಸುಸಂಸ್ಕೃತಿಯನ್ನು ಹೊಂದಿರುವ ನಾವು, ನಮ್ಮ ಜೀವನಕ್ಕೆ ಅಗತ್ಯವಾಗಿರುವ ಗೋಚರಶಕ್ತಿಯನ್ನು ಪೂಜಿಸದೇ ಇರುವುದುಂಟೇ? ಭರತ ಭೂಮಿ ಎಂಬುದು ಕೃಷಿ ಪ್ರಧಾನ ದೇಶ. ಕೃಷಿಯಿಂದಲೇ ಭಾರತ ಅಭಿವೃದ್ಧಿಯಾಗಿದೆ; ಆಗುತ್ತಿದೆ. ಈ ಕೃಷಿಯಿಂದಾಗಿಯೇ ಆಹಾರ ಪದಾರ್ಥಗಳು ಉತ್ಪಾದನೆಯಾಗುತ್ತಿವೆ. ಅವನ್ನೇ ಉಣ್ಣುತ್ತಿದ್ದೇವೆ ಮತ್ತು ಬದುಕುತ್ತಿದ್ದೇವೆ. ಆದರೆ, ಈ ಕೃಷಿಗೆ ಅನಾದಿಕಾಲದಿಂದಲೂ ಸಹಾಯಕವಾಗಿ ನಿಂತವುಗಳೇ ಈ ಭೂಲೋಕದ ದೇವತೆಗಳು ಅಂದರೆ ಗೋವುಗಳು. ಕೃಷಿ ಕಾರ್ಯಕ್ಕೆ ಗೋವುಗಳ ಬಳಕೆ ಹಿಂದೆ ಎಷ್ಟರ ಮಟ್ಟಿಗೆ ಇತ್ತೆಂಬುದು ಎಲ್ಲರೂ ತಿಳಿದಿರುವ ಸಂಗತಿ. ಇಂದು ಆಧುನಿಕ ಸಲಕರಣೆಗಳಿಂದಾಗಿ ಕೃಷಿಯಲ್ಲಿ ಗೋವು ಗೊಬ್ಬರವನ್ನು ಉತ್ಪಾದಿಸಲು ಹೆಚ್ಚು ಬಳಸಲ್ಪುಡುತ್ತದೆಯಾದರೂ,  ಅದರ ಗೊಬ್ಬರದಿಂದಲೇ ಶಕ್ತಿಯುತವಾದ ಆಹಾರ ಪದಾರ್ಥಗಳನ್ನು ನಾವು ಪಡೆಯಬಹುದಾಗಿದೆ. ಹಾಗಾಗಿ, ಗೋವು ಎಂಬುದು ಕೇವಲ ಪ್ರಾಣಿಯಲ್ಲ; ಅದ್ಭುತ ಶಕ್ತಿ.

Advertisement

ಗೋವಿನ ಉತ್ಪನ್ನವಾದ ಹಾಲು, ಬೆಣ್ಣೆ, ಮೊಸರು ನಿತ್ಯಜೀವನಕ್ಕೇ ಬೇಕೇಬೇಕು.  ಹಲವು ಮಾರಕ ರೋಗಗಳಿಗೆ ಔಷಧವಾಗಿಯೂ ಗೋವಿನ ಅರ್ಕ ಉಪಯೋಗವಾಗುದು ಇಂದು ಜಗಜ್ಜನಿತವಾದ ವಿಷಯ. ಗೋವನ್ನು ಪೂಜಿಸಲು ಹಲವು ಕಾರಣಗಳಿವೆ. ಹಿಂದಿನವರು, ಗೋವನ್ನು ಬಿಟ್ಟು ಬದುಕಿದವರಲ್ಲ. ಮುಂಜಾನೆ ಎದ್ದು ಮನೆಯನ್ನು ಶುದ್ಧ ಮಾಡಲು ಗೋವಿನ ಸಗಣಿ ನೀರು ಬಳಸುವುದರಿಂದ ಕೀಟಾಣುಗಳು ನಾಶವಾಗುತ್ತದೆ ಎಂಬುದು ವೈಜ್ಞಾನಿಕ ಸತ್ಯ. ಇಂದಿನ ರಾಸಾಯನಿಕಗಳು ಕೀಟಾಣುಗಳನ್ನು ಕೊಲ್ಲುತ್ತವೆಯಾದರೂ ಅದರ ಜೊತೆಗೆ ನಮಗೂ ಮಾರಕವಾಗಿವೆ. ಗೋಉತ್ಪನ್ನಗಳಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆ. ಹಾಗಾಗಿ, ಗೋವು ಎಂಬುದು ದೇವರು ನೀಡಿದ ದಿವ್ಯಚೇತನ.

ದೇವಪೂಜೆಗೆ, ಯಜ್ಞಯಾಗಾದಿಗಳಿಗೆ ಗೋವಿನ ಹಾಲು, ತುಪ್ಪ, ಮೊಸರು ಬಳಕೆಯಾಗುತ್ತದೆ. ಗೋವಿನ ತುಪ್ಪದಿಂದಲೇ ಅಗ್ನಿ ದೇವನನ್ನು ಆಹ್ವಾನಿಸಿ ಆ ಮೂಲಕ ಹವಿಸ್ಸನ್ನು ದೇವರಿಗೆ ಅರ್ಪಿಸಲಾಗುತ್ತದೆ. ಗೋವಿಗೂ ನಮ್ಮ ದೇವರರೂಪಗಳಿಗೂ ಅವಿನಾಭಾವ ಸಂಬಂಧಗಳಿವೆ. ಕೃಷ್ಣನು ಗೋಪಾಲನೂ ಹೌದು, ವಿಷ್ಣುವನ್ನು ಗೋವಿಂದ ಎಂದೂ ಕರೆಯಲಾಗುತ್ತದೆ. ಈಶ್ವರನ ವಾಹನ ನಂದಿ. ದೇವಲೋಕದಲ್ಲಿ ಕಾಮಧೇನು ಎಂಬ,  ಕೇಳಿದ್ದನ್ನು ಕೊಡುವ ಗೋಸ್ವರೂಪವಿದೆ. ಗೋವಿನ ಉತ್ಪನ್ನವಾದ ಪಂಚಗವ್ಯವು ಮನುಷ್ಯನ ಶಕ್ತಿಯನ್ನು ಹೆಚ್ಚಿಸುತ್ತದೆ.  ಋಗ್ವೇದದಲ್ಲಿ ಗೋಸೂಕ್ತವಿದೆ. ಇದರಲ್ಲಿ ಗೋವಿನ ಮಹಣ್ತೀ, ಗೋವನ್ನು ಪ್ರಾರ್ಥಿಸುವ ಬಗೆಯನ್ನೂ ಹೇಳಲಾಗಿದೆ.

ಮಾರ್ಗಶಿರ ಮಾಸದ ಹುಣ್ಣಿಮೆಯಂದು ಗೋಪೂಜೆಯನ್ನು ಮಾಡುವ ಪದ್ಧತಿಯಿದೆ. ಆ ದಿನ ಕೊಟ್ಟಿಗೆ(ಹಟ್ಟಿ)ಯನ್ನು ಸ್ವತ್ಛಗೊಳಿಸಿ, ಹೂವು, ರಂಗೋಲಿಗಳಿಂದ, ಗೋವಿನ ಪಾದವನ್ನು ಬಿಡಿಸಿ ಅಲಂಕರಿಸಲಾಗುತ್ತದೆ. ದನಕರುಗಳಿಗೆ ಸ್ನಾನ ಮಾಡಿಸಿ, ಅವುಗಳ ದೇಹದ ಮೇಲೆ ಜೇಡಿ ಮತ್ತು ಕೆಮ್ಮಣ್ಣನ್ನು ನೀರಿನಲ್ಲಿ ಕರಡಿಕೊಂಡು ಲೋಟದ ಮೂಲಕ ಚಿತ್ತಾರ ಬರೆದು ಅಲಂಕರಿಸುವ ಕ್ರಮವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next