Advertisement

ಧೋನಿಯನ್ನು ನಾನೇಕೆ ಟೀಕಿಸಲಿ: ಕುಲದೀಪ್‌

02:54 AM May 17, 2019 | Sriram |

ಮುಂಬೈ: ಧೋನಿಯನ್ನು ತಾನು ಟೀಕಿಸಿದ್ದೇನೆ ಎಂಬ ವರದಿಗಳು ಸುಳ್ಳು, ಕೆಲವು ವ್ಯಕ್ತಿಗಳು ವದಂತಿ ಹಬ್ಬಿಸುವುದನ್ನು ಬಹಳ ಸಂಭ್ರಮಿಸುತ್ತಾರೆ ಎಂದು ಭಾರತದ ಖ್ಯಾತ ಎಡಗೈ ಲೆಗ್‌ಸ್ಪಿನ್ನರ್‌ ಕುಲದೀಪ್‌ ಯಾದವ್‌ ಕಿಡಿಕಾರಿದ್ದಾರೆ.

Advertisement

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅನೌಪಚಾರಿಕವಾಗಿ ಮಾತನಾಡಿದ್ದ ಅವರು, ಧೋನಿ ಹಲವು ತಪ್ಪು ಮಾಡುತ್ತಾರೆ. ಆದರೆ ಅವರಿಗೆ ಅದನ್ನು ಹೇಳಲು ಸಾಧ್ಯವಿಲ್ಲ. ಅವರು ಬಹುತೇಕ ಮಾತೇ ಆಡುವುದಿಲ್ಲ. ಓವರ್‌ಗಳ ಮಧ್ಯೆ ಮಾತ್ರ ಮಾತನಾಡುತ್ತಾರೆ. ಆಗ ಏನಾದರೂ ಅನಿಸಿದರೆ ಹೇಳುತ್ತಾರೆ ಎಂದು ಹೇಳಿದ್ದರು ಎಂದು ವರದಿಗಳಾಗಿದ್ದವು. ಇದು ಸುದ್ದಿಯಾಗುತ್ತಲೇ ಆಕ್ರೋಶಗೊಂಡಿರುವ ಕುಲದೀಪ್‌, ತಾನು ಅಂತಹ ಸಂದರ್ಶನವನ್ನು ಯಾರಿಗೂ ನೀಡಿಯೇ ಇಲ್ಲ. ಅದು ಹೇಗೆ ಇಂತಹ ವರದಿಗಳನ್ನು ಹಬ್ಬಿಸುತ್ತಾರೊ ಗೊತ್ತಾಗುವುದಿಲ್ಲ ಎಂದು ನೊಂದುಕೊಂಡಿದ್ದಾರೆ.

ಈ ಬಗ್ಗೆ ಆಂಗ್ಲ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಯಾದವ್‌, ಎಂ.ಎಸ್‌.ಧೋನಿ ಹಿರಿಯ ಕ್ರಿಕೆಟಿಗ, ಅವರ ಸಲಹೆಗಳು ನನಗೆ ಮಾತ್ರವಲ್ಲ ತಂಡದ ಎಲ್ಲರಿಗೂ ಬಹುಮೌಲ್ಯಯುತವಾಗಿವೆ. ಅವರು ವಿಕೆಟ್ ಹಿಂದುಗಡೆ ಇದ್ದರೆ, ನಮ್ಮ ಕೆಲಸ ಬಹಳ ಸಲೀಸಾಗುತ್ತದೆ. ಅದನ್ನು ಯಾರೂ ಬದಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ. ಅಲ್ಲದೇ ಧೋನಿಯ ಸಾಮರ್ಥ್ಯವನ್ನು ಹೊಗಳುವ ಮೂಲಕ, ತಾನು ಅವರ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next