Advertisement

ಫೇಸ್‌ಬುಕ್‌ ಖಾತೆ ಬೇಡ: ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌ ಹೇಳಿಕೆ

06:00 AM Mar 21, 2018 | |

ಹೊಸದಿಲ್ಲಿ: “ನಾನು ಎಂದಿಗೂ ಸಾಮಾಜಿಕ ಅಂತರ್ಜಾಲ ತಾಣಗಳಾದ ಟ್ವಿಟರ್‌ ಅಥವಾ ಫೇಸ್‌ಬುಕ್‌ನಲ್ಲಿ ಖಾತೆ ತೆರೆಯುವುದಿಲ್ಲ. ಇವು ನಮ್ಮನ್ನು ಅಹಂಕಾರದ ಹಾಗೂ ಸ್ವಕೇಂದ್ರಿತ ವ್ಯಕ್ತಿಯನ್ನಾಗಿ ಮಾಡು ತ್ತವೆ’ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗತ್‌ ಹೇಳಿದ್ದಾರೆ. ಆದರೆ ಸಂಘಟನೆಗಳು ಇಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಒಂದು ಹಂತದ ವರೆಗೆ ವೈಯಕ್ತಿಕ ಪ್ರಚಾರ ಮಾಡಿಕೊಳ್ಳಬಹುದು. ಆದರೆ ಸಂಘಟನೆ ಮಟ್ಟದಲ್ಲಿ ಹಾಗಿರುವುದಿಲ್ಲ. ಇದೇ ಕಾರಣಕ್ಕೆ ಸಂಘವು ಫೇಸ್‌ಬುಕ್‌ ಮತ್ತು ಟ್ವಿಟರ್‌ ಖಾತೆ ಹೊಂದಿದೆ. ಆದರೆ ನಾನು ಖಾತೆ ತೆರೆಯುವುದಿಲ್ಲ ಎಂದಿದ್ದಾರೆ.

Advertisement

ರಾಜಕಾರಣಿಗಳಿಗೆ ಇಂತಹ ಸಾಮಾಜಿಕ ಜಾಲತಾಣ ಅಗತ್ಯವಾಗಿರುತ್ತವೆ. ಆದರೆ ಎಚ್ಚರಿಕೆಯಿಂದ ಇದನ್ನು ಬಳಸಬೇಕಿದೆ. ಸಾಮಾಜಿಕ ಮಾಧ್ಯಮ ಎಂದರೆ ನಾನು, ನನ್ನದು ಎಂಬುದನ್ನು ಪ್ರಭಾವಿಸುತ್ತದೆ. ಎಲ್ಲ ವಿಷಯಗಳ ಮೇಲೂ ನಾನು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕಾಗುತ್ತದೆ. ನನ್ನ ಅಭಿಪ್ರಾಯವು ಒಂದು ಸಂಚಿತ ಅಭಿಪ್ರಾಯದ ಭಾಗ ಎಂಬುದು ಗೊತ್ತಿದ್ದರೂ, ತಕ್ಷಣಕ್ಕೆ ಪ್ರತಿಕ್ರಿಯಿಸುವ ಅನಿವಾರ್ಯತೆ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ ಬಹುತೇಕ ಸನ್ನಿವೇಶದಲ್ಲಿ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. ಆಗ ಅದನ್ನು ನಾವು ಅಳಿಸಬೇಕಾಗುತ್ತದೆ. ಇದರಿಂದ ನೀವು ಇನ್ನಷ್ಟು ಸ್ವಕೇಂದ್ರಿತರಾಗುತ್ತೀರಿ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next